-->
ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣ: ದೂರನ್ನು ಪರಿಶೀಲಿಸಿದ ನಂತರವೇ ಪ್ರಕರಣ ದಾಖಲು- ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ

ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣ: ದೂರನ್ನು ಪರಿಶೀಲಿಸಿದ ನಂತರವೇ ಪ್ರಕರಣ ದಾಖಲು- ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ

ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣ: ದೂರನ್ನು ಪರಿಶೀಲಿಸಿದ ನಂತರವೇ ಪ್ರಕರಣ ದಾಖಲು- ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದೂರು ಆಧಾರದಲ್ಲಿ ದಾಖಲಿಸುವ ಮುನ್ನ ಅಧಿಕಾರಿಯು ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.ಬಾಗಲಕೋಟೆಯ ಶಾಲೆಯೊಂದರ ಮುಖ್ಯ ಶಿಕ್ಷಕ ಶಿವಲಿಂಗಪ್ಪ ಕೆರಕಲಮಟ್ಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಮಹತ್ವದ ಸೂಚನೆ ನೀಡಿದೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯ ದುರುಪಯೋಗ ಆಗುತ್ತಿದೆ. ಈ ಕಾಯ್ದೆಯಡಿ ನಕಲಿ ಪ್ರಕರಣಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ಈ ನಕಲಿ ಪ್ರಕರಣಗಳ ರಾಶಿಯ ಮಧ್ಯೆ ಅಸಲಿ ಪ್ರಕರಣವನ್ನು ಹುಡುವುದು ಸೂಜಿ ಹುಡುಕಿದಂತಾಗಿದೆ . ಬಹುತೇಕ ಪ್ರಕರಣಗಳು ಹಾಲಿ ಪ್ರಕರಣದಂತೆ ಕಾನೂನಿನ ದುರ್ಬಳಕೆಯಾಗಿವೆ ಎಂದು ಖೇದ ವ್ಯಕ್ತಪಡಿಸಿದೆ.ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸುವ ಅಧಿಕಾರಿ, ಮೊದಲು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಬೇಕು. ಸದ್ರಿ ಈ ಪ್ರಕರಣ ಅಧಿಕಾರಿಗಳ ಕಣ್ಣು ತೆರೆಸುವ ಮಾದರಿ ಪ್ರಕರಣವಾಗಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಪ್ರಕರಣದ ವಿವರ:


ಶ್ರೀ ಮರಡಿ ಮಲ್ಲೇಶ್ವರ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಶಿವಲಿಂಗಪ್ಪ ಕೆರೆಮಲಮಟ್ಟಿ ಅವರು ಕರ್ತವ್ಯಕ್ಕೆಂದು ತಮ್ಮ ಶಾಲೆಗೆ ಹೋಗುತ್ತಿದ್ದ ವೇಳೆ ಶಿವಲಿಂಗಪ್ಪ ಮತ್ತು ಇತರ ಇಬ್ಬರು ತಮ್ಮನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಸೈಕಲ್ ಚೈನ್‌ನಿಂದ ದಾಳಿ ನಡೆಸಿದ್ದರು ಎಂದು ಚಂದ್ರ ರಾಠೋಡ್ ಪೊಲೀಸರಿಗೆ ದೂರು ನೀಡಿದ್ದರು.


ಅವರ ದೂರನ್ನು ದಾಖಲಿಸಿದ ಪೊಲೀಸರು ಭಾರತೀಯ ದಂಡ ಸಂಹಿತೆಯ 323, 342, 504 ಮತ್ತು 506 ಸೆಕ್ಷನ್‌ ಅಡಿಯಲ್ಲಿ ಶಿವಲಿಂಗಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.


ದೂರುದಾರ ಚಂದ್ರ ರಾಠೋಡ್ ಅವರು ಶಿವಲಿಂಗಪ್ಪ ವಿರುದ್ಧ ವರ್ಷದಲ್ಲಿ ಮೂರು ಬಾರಿ ದೂರು ನೀಡಿದ್ದರು. ಅಲ್ಲದೆ, ರಾಠೋಡ್ ಅವರು ಸಮಾಜ ಕಲ್ಯಾಣ ಇಲಾಖೆಯ ಫಲಾನುಭವಿ ಆಗಿದ್ದು, ಇಲಾಖೆಯಿಂದ 3.5 ಲಕ್ಷ ರೂ. ಅನುದಾನ ಪಡೆದಿದ್ದರು. ನಕಲಿ ಪ್ರಕರಣಗಳಿಗೆ ನೆರವಾಗಲು ಸಾರ್ವಜನಿಕರ ಹಣವನ್ನು ನೀಡಲಾಗಿದೆ ಎಂಬುದು ದಾಖಲೆಗಳ ಮೂಲಕ ಸಾಬೀತಾಗಿದೆ.


ಸರ್ಕಾರದ ಸಹಾಯದಿಂದ ನಕಲಿ ಪ್ರಕರಣಗಳನ್ನು ನಡೆಸಲಾಗುತ್ತಿದೆ ಎಂಬುದನ್ನು ಪರಿಗಣಿಸಿದ ನ್ಯಾಯಪೀಠ, ಆಕ್ಷೇಪಾರ್ಹ ಪ್ರಕ್ರಿಯೆ ನಡೆಸಲು ದೂರುದಾರನಿಗೆ ಸಮಾಜ ಕಲ್ಯಾಣ ಇಲಾಖೆ ನೀಡಿರುವ ಹಣವನ್ನು ದೂರುದಾರ ಚಂದ್ರುರಾಠೋಡ್ ಅವರಿಂದ ವಸೂಲೆ ಮಾಡುವಂತೆ ಇಲಾಖೆಗೆ ಆದೇಶ ನೀಡಿದೆ.


ಇಂತಹ ಪ್ರಕರಣಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯದ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ನೈಜ ಪ್ರಕರಣಗಳಿಗೆ ಹಿನ್ನಡೆ ಆಗುತ್ತಿದೆ. ನಕಲಿ ಪ್ರಕರಣಗಳಿಂದ ನೈಜ ಪ್ರಕರಣಗಳು ಕಳೆದುಹೋಗುತ್ತಿವೆ. ಈ ನೆಲೆಯಲ್ಲಿ ಸಹಾಯಧನ ನೀಡುವುದಕ್ಕೂ ಮುನ್ನ ದಾಖಲೆಗಳನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಪರಿಶೀಲಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದೆ.


ಪ್ರಕರಣ: ಶಿವಲಿಂಗಪ್ಪ ಬಿ. ಕಕೆರೆಮಲಮಟ್ಟಿ Vs ಕರ್ನಾಟಕ ಮತ್ತಿತರರು

ಕರ್ನಾಟಕ ಹೈಕೋರ್ಟ್ (ಧಾರವಾಡ ಪೀಠ), CrP 100396/2022 Dated 23-09-2023


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200