-->
ನ್ಯಾಯಾಧೀಶರನ್ನು ಮೈ ಲಾರ್ಡ್‌, ಯುವರ್ ಲಾರ್ಡ್‌ಶಿಪ್ ಎಂದು ಕರೆಯಬೇಡಿ- ವಕೀಲರಿಗೆ ಸುಪ್ರೀಂ ಕೋರ್ಟ್‌ ಮನವಿ

ನ್ಯಾಯಾಧೀಶರನ್ನು ಮೈ ಲಾರ್ಡ್‌, ಯುವರ್ ಲಾರ್ಡ್‌ಶಿಪ್ ಎಂದು ಕರೆಯಬೇಡಿ- ವಕೀಲರಿಗೆ ಸುಪ್ರೀಂ ಕೋರ್ಟ್‌ ಮನವಿ

ನ್ಯಾಯಾಧೀಶರನ್ನು ಮೈ ಲಾರ್ಡ್‌, ಯುವರ್ ಲಾರ್ಡ್‌ಶಿಪ್ ಎಂದು ಕರೆಯಬೇಡಿ- ವಕೀಲರಿಗೆ ಸುಪ್ರೀಂ ಕೋರ್ಟ್‌ ಮನವಿ





ಕೋರ್ಟ್ ಕಲಾಪದ ವೇಳೆ ನ್ಯಾಯಾಂಗದ ಅಧಿಕಾರಿಯೂ ಆಗಿರುವ ವಕೀಲರು

ನ್ಯಾಯಾಧೀಶರನ್ನು ಅಥವಾ ಪೀಠಾಸೀನ ಅಧಿಕಾರಿಯನ್ನು ಮೈ ಲಾರ್ಡ್, ಯುವರ್ ಲಾರ್ಡ್‌ಶಿಪ್‌ ಎಂದು ಕರೆಯಬೇಡಿ. ಇದು ಗುಲಾಮಗಿರಿಯ ಸಂಕೇತವಾಗಿದ್ದು, ಅಂತಹ ಭಾವನೆಯನ್ನು ಪ್ರತಿನಿಧಿಸುತ್ತದೆ ಎಂದು ಸುಪ್ರೀಂ ಕೋರ್ಟ್ ವಕೀಲ ಸಮುದಾಯಕ್ಕೆ ಕಿವಿಮಾತು ಹೇಳಿದೆ.


"My Lord", "Your Lordship" ಎಂಬಂತಹ ಶಬ್ದಗಳಿಂದ ನ್ಯಾಯಪೀಠವನ್ನು ಸಂಬೋಧಿಸಬೇಡಿ. ಇದು ಗುಲಾಮಗಿರಿಯ ಸಂಕೇತ. ಬೇಕಿದ್ದರೆ ನನ್ನ ಅರ್ಧ ವೇತನ ಕೊಡುವೆ ಎಂದು ಸುಪ್ರೀಂ ಕೋರ್ಟ್‌ನ ವಿಭಾಗೀಯ ನ್ಯಾಯಪೀಠದ ನ್ಯಾಯಾಧೀಶರಲ್ಲಿ ಒಬ್ಬರಾದ ಪಿ. ಎಸ್. ನರಸಿಂಹ ಹೇಳಿದರು.


ಈ ಸಂದರ್ಭದಲ್ಲಿ ನ್ಯಾಯಪೀಠದ ಇನ್ನೊಬ್ಬ ನ್ಯಾಯಾಧೀಶರಾದ ಎ.ಎಸ್. ಬೋಪಣ್ಣ ಅವರೂ ಪೀಠಾಸೀನ ಅಧಿಕಾರಿಯಾಗಿದ್ದರು.


ಇಂತಹ ಶಬ್ದಗಳು ಶತಮಾನಗಳ ಹಿಂದಿನಿಂದ ಬಳಕೆಯಲ್ಲಿವೆ. ಇವು ವಸಾಹತುಶಾಹಿ ಮನೋಭೂಮಿಕೆಯನ್ನು ಪ್ರತಿನಿಧಿಸುತ್ತಿವೆ. ಇಂತಹ ಶಬ್ಧಗಳು ಈಗಲೂ ಬಳಕೆ ಮಾಡುವುದು ತರವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ನೀವು ಯಾಕೆ 'ಸರ್' ಎಂಬ ಶಬ್ದವನ್ನು ಬಳಕೆ ಮಾಡಬಾರದು ಎಂದು ಹಿರಿಯ ವಕೀಲರಿಗೆ ನ್ಯಾಯಪೀಠ ಸಲಹೆ ನೀಡಿತು.


ಪೀಠಾಸೀನ ಅಧಿಕಾರಿಗಳನ್ನು ಅಥವಾ ನ್ಯಾಯಾಧೀಶರನ್ನು "My Lord" ಮತ್ತು "Your Lordship" ಎಂಬ ಶಬ್ದಗಳನ್ನು ವಕೀಲರು ಸಂಬೋಧಿಸಬಾರದು ಎಂದು 2006ರಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿರ್ಣಯ ಕೈಗೊಂಡಿತ್ತು. ಆದರೆ, ಅದು ವಸ್ತುಶಃ ಕಾರ್ಯರೂಪಕ್ಕೆ ಬಂದಿಲ್ಲ.



Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200