-->
GPA ರದ್ದು ಮಾಡುವ ಅಧಿಕಾರ ನೋಂದಣಾಧಿಕಾರಿಗೆ ಇಲ್ಲ- ಕರ್ನಾಟಕ ಹೈಕೋರ್ಟ್‌

GPA ರದ್ದು ಮಾಡುವ ಅಧಿಕಾರ ನೋಂದಣಾಧಿಕಾರಿಗೆ ಇಲ್ಲ- ಕರ್ನಾಟಕ ಹೈಕೋರ್ಟ್‌

GPA ರದ್ದು ಮಾಡುವ ಅಧಿಕಾರ ನೋಂದಣಾಧಿಕಾರಿಗೆ ಇಲ್ಲ- ಕರ್ನಾಟಕ ಹೈಕೋರ್ಟ್‌





ನೋಂದಾಯಿತ ಜನರಲ್ ಪವರ್ ಆಫ್ ಅಟಾರ್ನಿ(GPA)ಯನ್ನು ಕ್ಯಾನ್ಸಲೇಷನ್ ಆಫ್ GPA ಎಂಬ ಹೆಸರಿನಲ್ಲಿ ದ್ದು ಮಾಡುವ ಅಧಿಕಾರ ನೋಂದಣಾಧಿಕಾರಿಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.



ಬೆಳಗಾವಿಯ ಸಬ್‌ ರಿಜಿಸ್ಟ್ರಾರ್ ಅವರ ಹಿಂಬರಹದ ವಿರುದ್ಧ ಬಾಗಲಕೋಟೆಯ ಮಧುಮತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾ. ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.



ಬಾಗಲಕೋಟೆಯ ಮಧುಮತಿ ಹಾಗೂ ತಮ್ಮ ಪತಿಯ ಹೆಸರಿನಲ್ಲಿ ಜಂಟಿಯಾಗಿ ನೋಂದಾಯಸಲಾಗಿದ್ದ ಜಿಪಿಎಯನ್ನು ರದ್ದುಗೊಳಿಸಲು ಬಯಸಿದ್ದರು. ಆದರೆ, ಅದನ್ನು ನಿರಾಕರಿಸಿ ಬೆಳಗಾವಿಯ ಸಬ್‌ ರಿಜಿಸ್ಟ್ರಾರ್ ಅವರ ಹಿಂಬರಹ ನೀಡಿದ್ದರು.



ಅಗತ್ಯ ಪೂರಕ ದಾಖಲೆಗಳ ಜೊತೆಗೆ ನೋಂದಣಿಗೆ ನೀಡಲಾದ ದಾಖಲೆಯನ್ನು ನೋಂದಾಯಿಸುವುದಿಲ್ಲ ಎಂದು ಹೇಳಲು ರಿಜಿಸ್ಟ್ರಾರ್ ಯಾ ಸಬ್‌ ರಿಜಿಸ್ಟ್ರಾರ್‌ ಅವರಿಗೆ ಯಾವ ಅಧಿಕಾರವೂ ಇಲ್ಲ. ಆದರೆ, 1908ರ ರಿಜಿಸ್ಟ್ರೇಷ್ ಕಾಯ್ದೆ ಪ್ರಕಾರ ರಿಜಿಸ್ಟ್ರಾರ್ ಯಾ ಸಬ್‌ ರಿಜಿಸ್ಟ್ರಾರ್‌ ಅವರಿಗೆ ನೋಂದಾಯಿತ ದಾಖಲೆಯನ್ನು ರದ್ದುಗೊಳಿಸುವ ಅಧಿಕಾರವೂ ಇಲ್ಲ ಎಂದು ನ್ಯಾಯಪೀಠ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.



ಕ್ರಯ ಪತ್ರ ಅಥವಾ ಡೀಡ್‌ಅನ್ನು ರದ್ದುಗೊಳಿಸುವುದು ಅದನ್ನು ವಜಾ ಮಾಡುವುದಕ್ಕೆ ಸಮಾನವಾದದ್ದು. ಒಮ್ಮೆ ಒಬ್ಬ ವ್ಯಕ್ತಿ ದಾಖಲೆಯನ್ನು ನೋಂದಾಯಿಸಿದರೆ ಮತ್ತು ನಂತರ ಅದನ್ನು ರದ್ದುಗೊಳಿಸಲು ಬಯಸಿದರೆ ಆಗ ಆ ಪ್ರಕರಣವನ್ನು ಭಾರತೀಯ ಒಪ್ಪಂದ ಕಾಯ್ದೆ ಸೆಕ್ಷನ್ 62ರ ಅಡಿಯಲ್ಲಿ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.



ಡೀಡ್‌ ರದ್ದು ಮಾಡಬೇಕಾದರೆ ಅದನ್ನು ಉಭಯ ಪಕ್ಷಕಾರರು ಮಾಡಬೇಕಾಗುತ್ತದೆ. ಒಮ್ಮೆ ನೋಂದಾಯಿತ ದಾಖಲೆಯನ್ನು ಎಕ್ಸಿಕ್ಯೂಟ್ ಮಾಡಲಾಯಿತೆಂದರೆ, ಅದನ್ನು ರದ್ದುಗೊಳಿಸಲು ಆ ವ್ಯಕ್ತಿ ಬಯಸಿದರೆ ಆಗ ವಿಶೇಷ ಪರಿಹಾರ ಕಾಯ್ದೆಯ ಸೆಕ್ಷನ್ 31ರ ಅಡಿ ಲಭ್ಯವಿರುವ ಪರಿಹಾರವನ್ನು ಅವರು ಕಂಡುಕೊಳ್ಳಬೇಕಾಗುತ್ತದೆ. ಆದರೆ, ಭಾರತೀಯ ನೋಂದಣಿ ಕಾಯ್ದೆ 1908ರಲ್ಲಿ ಅದಕ್ಕೆ ಯಾವುದೇ ಪರಿಹಾರ ಇರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.



ಈ ಕಾರಣದಿಂದ ರಿಜಿಸ್ಟ್ರಾರ್ ಯಾ ಸಬ್‌ ರಿಜಿಸ್ಟ್ರಾರ್‌ ಅವರಿಗೆ ಜಿಪಿಎ ರದ್ದುಗೊಳಿಸುವ ಅಧಿಕಾರ ಇರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಕಾನೂನು ಇಲ್ಲದ ಕಾರಣ ನೋಂದಣಾಧಿಕಾರಿಗೆ ನೋಂದಾಯಿತ ದಾಖಲೆ ರದ್ದುಗೊಳಿಸುವ ಅಧಿಕಾರ ಇದೆ ಎಂದು ಊಹಿಸಿಕೊಂಡು ಕಾರ್ಯನಿರ್ವಹಿಸುವಂತಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200