ಗಣಿ ವಿಜ್ಞಾನಿ ಹತ್ಯೆ ಕಲ್ಲು ಕ್ವಾರಿ ಮಾಫಿಯಾ ಕೃತ್ಯ?- ಮಹತ್ವದ ಮಾಹಿತಿ ಲಭ್ಯ!
ಗಣಿ ವಿಜ್ಞಾನಿ ಹತ್ಯೆ ಕಲ್ಲು ಕ್ವಾರಿ ಮಾಫಿಯಾ ಕೃತ್ಯ?- ಮಹತ್ವದ ಮಾಹಿತಿ ಲಭ್ಯ!
ಗಣಿ ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಅವರ ಹತ್ಯೆಯ ಹಿಂದೆ ಕಲ್ಲು ಕ್ವಾರಿ ಮಾಫಿಯಾ ಕೈವಾಡ ಇದೆ ಎಂಬ ಶಂಕೆ ದಟ್ಟವಾಗಿದೆ. ಇದಕ್ಕೆ ಪುಷ್ಟಿ ನೀಡುವ ಹಲವು ಮಹತ್ವದ ಅಂಶಗಳು ತನಿಖೆಯ ವೇಳೆ ಪತ್ತೆಯಾಗಿದ್ದು, ಪ್ರತಿಮಾ ಅವರ ವಾಹನದ ಹಳೆಯ ಚಾಲಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಹತ್ಯೆಗೀಡಾದ ಅಧಿಕಾರಿ ಪ್ರತಿಮಾ ವರದಿ ತಯಾರಿಸಿದ್ದರು. ಕಲ್ಲು ಕ್ವಾರಿಯನ್ನುನಿಲ್ಲಿಸಿದ್ದ ಕಾರಣ ಕಲ್ಲು ಕ್ವಾರಿ ಭೂ ಮಾಫಿಯಾದ ಕೆಂಗಣ್ಣಿಗೆ ಗುರಿಯಾಗಿದ್ದರು ಎನ್ನಲಾಗಿದೆ.
ಹುಣಸಮಾರನ ಹಳ್ಳಿ ಮತ್ತು ಸೊಣ್ಣಪ್ಪನ ಹಳ್ಳಿ ಗ್ರಾಮದ ಅಕ್ರಮ ಗಣಿಗಾರಿಕೆಯಲ್ಲಿ ಸರ್ಕಾರಕ್ಕೆ 25.35 ಲಕ್ಷ ರೂ. ನಷ್ಟವಾಗಿದೆ ಎಂದು ಸ್ಫೋಟಕ ವರದಿಯನ್ನು ನೀಡಿದ್ದೇ ಅವರ ಜೀವಕ್ಕೆ ಸಂಚಕಾರ ತಂದಿದೆ ಎನ್ನಲಾಗಿದೆ.
ಹುಣಸಮಾರನ ಹಳ್ಳಿ ಮತ್ತು ಸೊಣ್ಣಪ್ಪನ ಹಳ್ಳಿ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪದಲ್ಲಿ ಶಾಸಕರೊಬ್ಬರು ಸೇರಿ ನಾಲ್ವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಅಕ್ರಮ ಗಣಿಗಾರಿಕೆ ನಡೆದಿದೆ ಎನ್ನಲಾದ ಸ್ಥಳ ಪರಿಶೀಲನೆ ನಡೆಸಿದ್ದ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಇದರ ಜೊತೆಗೆ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಶಾಸಕ ಸೇರಿದಂತೆ ಇಬ್ಬರ ವಿರುದ್ಧ ದೇವನಹಳ್ಳಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ಕೂಡ ದಾಖಲಾಗಿತ್ತು.
ಈ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇಮೂವರನ್ನು ವಶಕ್ಕೆ ಪಡೆದುಕೊಂಡಿದ್ದು. ಈ ಪೈಕಿ ಪ್ರತಿಮಾ ಅವರ ವಾಹನದ ಚಾಲಕನಾಗಿದ್ದ ಕಿರಣ್ ಎಂಬಾತನೂ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.