-->
ವಕೀಲರ ಲೈಸನ್ಸ್‌ಗೂ ಮುನ್ನ ಪೊಲೀಸ್ ವೆರಿಫಿಕೇಶನ್ ಅಗತ್ಯ: ಹೈಕೋರ್ಟ್ ಇಂಗಿತ

ವಕೀಲರ ಲೈಸನ್ಸ್‌ಗೂ ಮುನ್ನ ಪೊಲೀಸ್ ವೆರಿಫಿಕೇಶನ್ ಅಗತ್ಯ: ಹೈಕೋರ್ಟ್ ಇಂಗಿತ

ವಕೀಲರ ಲೈಸನ್ಸ್‌ಗೂ ಮುನ್ನ ಪೊಲೀಸ್ ವೆರಿಫಿಕೇಶನ್ ಅಗತ್ಯ: ಹೈಕೋರ್ಟ್ ಇಂಗಿತ

ವಕೀಲರ ಪರಿಷತ್ತು ನವ ಪದವೀಧರರ ಹೆಸರನ್ನು ನೋಂದಣಿ ಮಾಡಿ ಸನದನ್ನು ನೀಡುವ (ಎನ್‌ರೋಲ್ ಮಾಡುವ) ಮುನ್ನ ಆ ವ್ಯಕ್ತಿಗೆ ಪೊಲೀಸ್ ವೆರಿಫಿಕೇಶನ್ ಮಾಡುವ ಅಗತ್ಯವಿದೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.


ನ್ಯಾ. ವಿನೋದ್ ದಿವಾಕರ್ ಮತ್ತು ನ್ಯಾ. ಎಸ್.ಡಿ. ಸಿಂಗ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಂತಹ ಒಂದು ಪ್ರಕ್ರಿಯೆಯನ್ನು ರಾಜ್ಯ ವಕೀಲರ ಪರಿಷತ್ತು ಆರಂಭಿಸಬೇಕು ಎಂದು ಅದು ನಿರ್ದೇಶನ ನೀಡಿದೆ.


ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ಪೊಲೀಸ್ ಇಲಾಖೆಯಿಂದ ಯಾವ ರೀತಿಯ ವೆರಿಫಿಕೇಶನ್ ಮತ್ತು ವರದಿ ಪಡೆಯಲಾಗುತ್ತದೆಯೋ ಅದೇ ರೀತಿಯ ಕ್ರಮಗಳು, ನಿಯಮಗಳನ್ನು ರೂಪಿಸಬೇಕಾಗುತ್ತದೆ. ವಕೀಲರಿಗೂ ಈ ಬಗ್ಗೆ ಸೂಕ್ತ ನಿಯಮ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಅದು ಸಲಹೆ ನೀಡಿದೆ.


ಅಪರಾಧಿಕ ಹಿನ್ನೆಲೆ ಉಳ್ಳವರು ಕಾನೂನು ವೃತ್ತಿಯಲ್ಲಿ ತೊಡಗದಂತೆ ನಿರ್ಬಂಧಿಸಲು ಹಾಗೂ ಕಾನೂನು ಪದವೀಧರರು ಕ್ರಿಮಿನಲ್ ಚಟುವಟಿಕೆಗಳಿಂದ ದೂರ ಇರುವಂತೆ ನೋಡಿಕೊಳ್ಳಲು ಇದು ಅನುಕೂಲವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.


ಕಾನೂನು ವೃತ್ತಿ ಆರಂಭಿಸಲು ಲೈಸನ್ಸ್‌ ಪಡೆದುಕೊಳ್ಳುವ ನಿಟ್ಟಿನಲ್ಲಿ ಅರ್ಜಿ ಹಾಕುವ ಸಂದರ್ಭದಲ್ಲೇ ಈ ಪ್ರಕ್ರಿಯೆ ನಡೆಯಬೇಕು. ಇದರಿಂದ ಅಪರಾಧಿಕ ಹಿನ್ನೆಲೆ ಇರುವ ವ್ಯಕ್ತಿಗಳನ್ನು ವೃತ್ತಿ ನಡೆಸದಂತೆ ನಿರ್ಬಂಧಿಸಬಹುದು. ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಘಟನೆಯ ವಿವರ:

ಉತ್ತರ ಪ್ರದೇಶದಲ್ಲಿ ವಕೀಲರಾಗಿ ನೋಂದಾಯಿಸಬೇಕು ಎಂದು ಕೋರಿ ಕಾನೂನು ಪದವೀಧರರೊಬ್ಬರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅವರು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಸೂಕ್ತ ವಿವರ ನೀಡಿರಲಿಲ್ಲ.


ಈ ಬಗ್ಗೆ ಪವನ್ ಕುಮಾರ್ ದುಬೆ ಎಂಬವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ರಿಟ್‌ನಲ್ಲಿ ಅರ್ಜಿ ಸಲ್ಲಿಸಿದ ವ್ಯಕ್ತಿ ವಿರುದ್ಧ ಇದ್ದ 14 ಕ್ರಿಮಿನಲ್ ಪ್ರಕರಣ ಬಗ್ಗೆ ಮಾಹಿತಿ ನೀಡಿದ್ದರು. ಈ ಪೈಕಿ ನಾಲ್ಕು ಪ್ರಕರಣಗಳಲ್ಲಿ ಆ ವ್ಯಕ್ತಿಗೆ ಶಿಕ್ಷೆ ವಿಧಿಸಲಾಗಿದೆ ಎಂಬುದನ್ನೂ ದಾಖಲೆ ಸಹಿತ ವಿವರಿಸಿದ್ದರು.


ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಕಾನೂನು ಪದವೀಧರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಈ ಪ್ರಕ್ರಿಯೆಯನ್ನು ಮೂರು ತಿಂಗಳಲ್ಲಿ ಮುಕ್ತಾಯಗೊಳಿಸಿ ವರದಿ ನೀಡಬೇಕು ಎಂದು ಆದೇಶ ನೀಡಿತು. ಇದೇ ಸಂದರ್ಭದಲ್ಲಿ, ವಕೀಲರಿಗೆ ಪೊಲೀಸ್ ವೆರಿಫಿಕೇಶನ್‌ನ ಅಗತ್ಯವನ್ನೂ ಒತ್ತಿ ಹೇಳಿತು.


Ads on article

Advertise in articles 1

advertising articles 2

Advertise under the article