-->
ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಆಧಾರರಹಿತ ಆರೋಪ, ಅನಧಿಕೃತ ಗೈರು: ಮ್ಯಾಜಿಸ್ಟ್ರೇಟ್ ವಜಾ ಆದೇಶ ಎತ್ತಿಹಿಡಿದ ಹೈಕೋರ್ಟ್‌

ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಆಧಾರರಹಿತ ಆರೋಪ, ಅನಧಿಕೃತ ಗೈರು: ಮ್ಯಾಜಿಸ್ಟ್ರೇಟ್ ವಜಾ ಆದೇಶ ಎತ್ತಿಹಿಡಿದ ಹೈಕೋರ್ಟ್‌

ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಆಧಾರರಹಿತ ಆರೋಪ, ಅನಧಿಕೃತ ಗೈರು: ಮ್ಯಾಜಿಸ್ಟ್ರೇಟ್ ವಜಾ ಆದೇಶ ಎತ್ತಿಹಿಡಿದ ಹೈಕೋರ್ಟ್‌





ಹೈಕೋರ್ಟ್‌ನ ಆಡಳಿತಾತ್ಮಕ ನ್ಯಾಯಾಧೀಶರು ಮತ್ತು ಪ್ರಧಾನ ಜಿಲ್ಲಾ ನ್ಯಾಯಾಧೀಶರ ವಿರುದ್ಧ ಅಸಂಬದ್ಧ ಪತ್ರ ಬರೆದು ಅನಧಿಕೃತ ಗೈರು ಹಾಜರಾಗಿದ್ದ ಮ್ಯಾಜಿಸ್ಟ್ರೇಟ್‌ ಅವರನ್ನು ವಜಾಗೊಳಿಸಿದ ಕ್ರಮವನ್ನು ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿದೆ.


ನ್ಯಾ. ಬೀರೇನ್ ವೈಷ್ಣವ್ ಮತ್ತು ನಿಶಾ ಠಾಕೂರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಹೈಕೋರ್ಟ್‌ನ ಆಡಳಿತಾತ್ಮಕ ನ್ಯಾಯಾಧೀಶರು ಮತ್ತು ಪ್ರಧಾನ ಜಿಲ್ಲಾ ನ್ಯಾಯಾಧೀಶರ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದ ಮತ್ತು ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಆಗಿದ್ದ ನೀಲೇಶ್ ಭಾಯ್ ಚೌಹಾಣ್ ಅವರನ್ನು ವಜಾಗೊಳಿಸಲಾಗಿತ್ತು.



ಸಾಮಾನ್ಯ ನೌಕರರ ಅನಧಿಕೃತ ಗೈರುಹಾಜರಾತಿನ್ನು ಬೇರೆಯೇ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಆದರೆ, ಇದೇ ಮಾನದಂಡವನ್ನು ನ್ಯಾಯಾಂಗ ಅಧಿಕಾರಿಗೆ ಅನ್ವಯಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.


ವಜಾಗೊಂಡ ಮ್ಯಾಜಿಸ್ಟ್ರೇಟ್‌ ಅವರು ರಜೆಗೆ ತೆರಳುವ ಮುನ್ನ "ನಿರ್ದಿಷ್ಟ ಸಮಸ್ಯೆಯನ್ನು ಬಗೆಹರಿಸದ ಹೊರತು ಅನಿರ್ದಿಷ್ಟಾವಧಿ ಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ" ಎಂದು ಹೇಳಿದ್ದರು ಎಂಬುದನ್ನು ನ್ಯಾಯ ಪೀಠ ಗಮನಿಸಿತು. ಇಂತಹ ವರ್ತನೆ, ನಡವಳಿಕೆ ಒಬ್ಬ ನ್ಯಾಯಾಂಗ ಅಧಿಕಾರಿಗೆ ಸೂಕ್ತವಲ್ಲ ಎಂದು ಅದು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.



ಘಟನೆಯ ವಿವರ:

ನೀಲೇಶ್ ಭಾಯ್ ಚೌಹಾಣ್ ಅವರು 24-04-2013ರಿಂದ 10-05-2013ರ ವರೆಗೆ ವೇತನ ಸಹಿತ ರಜೆಯಲ್ಲಿ ಇದ್ದರು. ಈ ಅವಧಿಯಲ್ಲಿ ವಡೋದರಾದ ವಕೀಲರು ಪ್ರತಿಭಟನೆ ನಡೆಸಿದ್ದರು. ಈ ಸುದ್ದಿಯನ್ನು ಓದಿ ತಿಳಿದ ಮ್ಯಾಜಿಸ್ಟ್ರೇಟ್‌ ಆದ ನೀಲೇಶ್ ಈ ವಿಚಾರವನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ವೈಯಕ್ತಿಕವಾಗಿ ಭೇಟಿ ನೀಡಿ ಮಾಹಿತಿ ನೀಡಿದರು.


ಇದಾದ ನಂತರದ ಬೆಳವಣಿಗೆಯಲ್ಲಿ ಹೈಕೋರ್ಟ್‌ನ ಆಡಳಿತಾತ್ಮಕ ನ್ಯಾಯಾಧೀಶರು ಮತ್ತು ಪ್ರಧಾನ ಜಿಲ್ಲಾ ನ್ಯಾಯಾಧೀಶರ ವಿರುದ್ಧ ಅಸಂಬದ್ಧ ಪತ್ರ ಬರೆದು ನ್ಯಾಯಾಂಗ ವ್ಯವಸ್ಥೆ ಕೊಳೆತ ಸ್ಥಿತಿಯಲ್ಲಿ ಇದೆ. ಇದನ್ನು ಸರಿಪಡಿಸದ ಹೊರತು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿ, 13-05-2013ರಿಂದ 11-07-2013ರ ವರೆಗೆ ಅನಧಿಕೃತ ರಜೆ ತೆಗೆದುಕೊಂಡಿದ್ದರು.


ಅವರು ಬರೆದ ಪತ್ರದಲ್ಲಿ ಬಳಸಿದ್ದ ಕೆಟ್ಟ ಹಾಗೂ ಆಕ್ಷೇಪಾರ್ಹ ಭಾಷೆ ಮತ್ತು ಅನಧಿಕೃತ ಗೈರು ಹಾಜರಾತಿ ಹಿನ್ನೆಲೆಯಲ್ಲಿ ಅವರನ್ನು 2015ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು.

ಈ ಆದೇಶವನ್ನು ಪ್ರಶ್ನಿಸಿ 2016ರಲ್ಲಿ ನೀಲೇಶ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು.


ಪ್ರಕರಣ: ನೀಲೇಶ್ ಭಾಯ್ ಚೌಹಾಣ್ Vs ರಿಜಿಸ್ಟ್ರಾರ್ ಜನರಲ್

SCA 4024.2016, Dated 18-12-2023




Ads on article

Advertise in articles 1

advertising articles 2

Advertise under the article