AIBE ಪರೀಕ್ಷೆ ಪಾಸ್ ಆಗದೇ ವಕಾಲತ್ತಿಗೆ ಸಹಿ ಹಾಕಿದ್ರೆ ವಕೀಲರ ಸನದು ರದ್ದು!
AIBE ಪರೀಕ್ಷೆ ಪಾಸ್ ಆಗದೇ ವಕಾಲತ್ತಿಗೆ ಸಹಿ ಹಾಕಿದ್ರೆ ವಕೀಲರ ಸನದು ರದ್ದು!
ರಾಜ್ಯದಲ್ಲಿ ವಕೀಲರಾಗಿ ನೋಂದಾಯಿಸಿಕೊಂಡ ಎಲ್‌ಎಲ್‌ಬಿ ಪದವೀಧರರಿಗೆ ಒಂದು ಮಹತ್ವದ ಸೂಚನೆ.
ಎನ್‌ರೋಲ್ ಆಗಿ AIBE ಪರೀಕ್ಷೆ ಪಾಸ್ ಆಗದೇ ಇದ್ದವರು ತಮ್ಮ ಸಹವರ್ತಿಗಳ ಜೊತೆಗೆ ಆಗಲೀ, ವೈಯಕ್ತಿಕ ನೆಲೆಯಲ್ಲಿ ಆಗಲೀ ವಕಾಲತ್ತಿಗೆ ಸಹಿ ಹಾಕುವ ಹಾಗಿಲ್ಲ.
ಒಂದು ವೇಳೆ, ವಕಾಲತ್ತಿಗೆ ಸಹಿ ಹಾಕಿದ್ರೆ ಅಂಥ ವಕೀಲರ ಸನದು ರದ್ದು ಆಗಲಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು ಅವರು ಎಚ್ಚರಿಕೆ ನೀಡಿದ್ಧಾರೆ.
2010ರ ಜುಲೈ ಹಾಗೂ ನಂತರದಲ್ಲಿ ಕಾನೂನು ಪದವಿ ಪಡೆದವರು ಎರಡು ವರ್ಷಗಳ ತನಕ ಕೋಟು ಧರಿಸಿ ನ್ಯಾಯಾಲಯಕ್ಕೆ ಬರಬಹುದು. ಆದರೆ, ವಕಾಲತ್ತಿಗೆ ಸಹಿ ಹಾಕುವಂತಿಲ್ಲ. ಅಷ್ಟೇ ಅಲ್ಲ, ವಕೀಲರ ಡ್ರೆಸ್(ಧಿರಸು)ನಲ್ಲಿ ವಕೀಲಿಕೆ ನಡೆಸಲು ಅವಕಾಶ ಇಲ್ಲ ಎಂದು ಅವರು ಹೇಳಿದ್ದಾರೆ.
ಈ ಎರಡು ವರ್ಷಗಳ ಅವಧಿಯಲ್ಲಿ ಅವರು AIBE ಪರೀಕ್ಷೆ ಪಾಸ್ ಮಾಡಬೇಕು. ಇಲ್ಲದಿದ್ದರೆ, ವಕೀಲರ ಡ್ರೆಸ್ ಹಾಕಿ ವಕೀಲಿಕೆ ಮಾಡಲೂ ಅವಕಾಶ ಇಲ್ಲ. ಇಂತಹ ಕೃತ್ಯ ನಡೆಸುತ್ತಿದ್ದ ಯಲಬುರ್ಗಾದ ವಕೀಲ ಆನಂದ ಎ. ಉಳ್ಳಾಗಡ್ಡಿ ಅವರ ಸನ್ನದನ್ನು ಅಮಾನತು ಮಾಡಲಾಗಿದೆ ಎಂಬುದನ್ನು ವಿಶಾಲ್ ರಘು ನೆನಪಿಸಿದ್ದಾರೆ.