-->
ವಕೀಲರ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ- ಡಿಜಿಪಿ ಮಟ್ಟದ ಅಧಿಕಾರಿ ನಿಗಾದಲ್ಲಿ ತನಿಖೆ: ಹೈಕೋರ್ಟ್ ನಿರ್ದೇಶನ

ವಕೀಲರ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ- ಡಿಜಿಪಿ ಮಟ್ಟದ ಅಧಿಕಾರಿ ನಿಗಾದಲ್ಲಿ ತನಿಖೆ: ಹೈಕೋರ್ಟ್ ನಿರ್ದೇಶನ

ವಕೀಲರ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ- ಡಿಜಿಪಿ ಮಟ್ಟದ ಅಧಿಕಾರಿ ನಿಗಾದಲ್ಲಿ ತನಿಖೆ: ಹೈಕೋರ್ಟ್ ನಿರ್ದೇಶನ





ಚಿಕ್ಕಮಗಳೂರಿನ ವಕೀಲ ಪ್ರೀತಮ್ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣವನ್ನು ಸಿಐಡಿ ತನಿಖೆನಡೆಸಬೇಕು ಮತ್ತು ಈ ತನಿಖೆಯನ್ನು ಡಿಐಜಿ ಮಟ್ಟದ ಅಧಿಕಾರಿಯ ನಿಗಾದಲ್ಲಿ ನಡೆಸುವುದಾಗಿ ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಲಿಖಿತವಾಗಿ ತಿಳಿಸಿದೆ.

ಈ ದೌರ್ಜನ್ಯ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಮುಖ್ಯ ನ್ಯಾ. ಪ್ರಸನ್ನ ಬಿ. ವರಾಳೆ ಮತ್ತು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿತು..


ಚಿಕ್ಕಮಗಳೂರು ವಕೀಲರ ಪರ ವಾದ ಮಂಡಿಸಿದ ಕೆ.ಎನ್. ಫಣೀಂದ್ರ ಮತ್ತು ಡಿ.ಆರ್. ರವಿಶಂಕರ್, ಪ್ರೀತಂ ಘಟನೆಯ ಬಳಿಕ ಚಿಕ್ಕಮಗಳೂರು ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಇತರೆ ವಕೀಲರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಪೊಲೀಸರೂ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ ಎಂದು ನ್ಯಾಯಪೀಠದ ಗಮನಸೆಳೆದರು.


ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕಾರ ಮಾಡಿ ಪ್ರತಿಭಟನೆ ನಡೆಸಿರುವ ಬಗ್ಗೆ ನ್ಯಾಯಪೀಠ ವಕೀಲರ ವಿವರಣೆ ಕೇಳಿತು. ವಕೀಲರು ಕಲಾಪ ಬಹಿಷ್ಕರಿಸುವುದಿಲ್ಲ, ಪ್ರತಿಭಟನೆ ಮುಂದುವರಿಸುವುದಿಲ್ಲ ಎಂದು ಫಣೀಂದ್ರ ಮತ್ತು ಹಿರಿಯ ವಕೀಲ ವಿವೇಕ್ ಸುಬ್ಬಾ ರೆಡ್ಡಿ ಅವರು ನ್ಯಾಯಪೀಠಕ್ಕೆ ಸಮಜಾಯಿಷಿ ನೀಡಿದರು.


ಪ್ರತಿಭಟನಾ ನಿರತ ಪೊಲೀಸರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ನ್ಯಾಯಪೀಠ ಅಟಾರ್ನಿ ಜನರಲ್ ಅವರ ವಿವರಣೆ ಕೋರಿತು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.


ಈ ಸಂದರ್ಭದಲ್ಲಿ ತನಿಖೆಯನ್ನು ಡಿಜಿಪಿ ಮಟ್ಟದ ಅಧಿಕಾರಿ ನಡೆಸಬೇಕು. ಡಿಜಿಪಿ ಮಟ್ಟದ ಅಧಿಕಾರಿ ನಿಗಾ ವಹಿಸಬೇಕು ಎಂದು ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.


Ads on article

Advertise in articles 1

advertising articles 2

Advertise under the article