ಮುಸ್ಲಿಂ ಮಹಿಳೆಯರ ಅವಹೇಳನ: ಡಾ. ಪ್ರಭಾಕರ ಭಟ್ ಬಂಧನ ಬೇಡ, ತನಿಖೆಗೆ ಸಹಕಾರ ನೀಡುವಂತೆ ಹೈಕೋರ್ಟ್ ತಾಕೀತು!
ಮುಸ್ಲಿಂ ಮಹಿಳೆಯರ ಅವಹೇಳನ: ಡಾ. ಪ್ರಭಾಕರ ಭಟ್ ಬಂಧನ ಬೇಡ, ತನಿಖೆಗೆ ಸಹಕಾರ ನೀಡುವಂತೆ ಹೈಕೋರ್ಟ್ ತಾಕೀತು!
ಮೈಸೂರಿನ ಶ್ರೀರಂಗಪಟ್ಟಣದಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಶ್ರೀರಂಗಪಟ್ಟಣ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.
ಇದೇ ವೇಳೆ, ಕಲ್ಲಡ್ಕ ಅವರನ್ನು ಬಂಧಿಸಬಾರದು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ತನಿಖೆಗೆ ಪೂರ್ಣ ಸಹಕಾರ ನೀಡುವಂತೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ನಿರ್ದೇಶನ ನೀಡಿದೆ.
ನ್ಯಾ. ರಾಜೇಶ್ ರೈ ಕೆ ಅವರಿದ್ದ ರಜಾಕಾಲೀನ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಪ್ರಭಾಕರ್ ಭಟ್ ಅಸ್ವಸ್ಥರು, ವಯೋವೃದ್ಧರು ಎಂದ ವಕೀಲ:
ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಅಸ್ವಸ್ಥರಾಗಿದ್ದಾರೆ. ಜೊತೆಗೆ ವಯೋವೃದ್ಧರು ಕೂಡ ಎಂದು ಅವರ ಪರ ವಕೀಲ ಅರುಣ ಶ್ಯಾಮ್ ನ್ಯಾಯಪೀಠದ ಮುಂದೆ ವಾದಿಸಿದ್ದಾರೆ.
ಸರ್ಕಾರ ಭಟ್ಟರ ವಿರುದ್ಧ ರೌಡಿಶೀಟರ್ ತೆರೆಯುವ ಸಾಧ್ಯತೆ ಇದೆ. ಹೀಗಾರಿ ಅವರ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿಗೆ ತಡೆ ನೀಡಬೇಕು ಎಂದು ಅರುಣ ಶ್ಯಾಂ ಮನವಿ ಮಾಡಿದರು.