-->
ಟೀನೇಜ್ ಸೆಕ್ಸ್‌ ಬಗ್ಗೆ ಬೋಧನೆ: ಹೈಕೋರ್ಟ್‌  ಜಡ್ಜರಿಗೆ ಸುಪ್ರೀಂ ಕೋರ್ಟ್ ತಪರಾಕಿ- ಜಡ್ಜ್‌ಗಳು ಬೋಧನೆ ಮಾಡಬಾರದು ಎಂದು ನ್ಯಾಯಪೀಠ!

ಟೀನೇಜ್ ಸೆಕ್ಸ್‌ ಬಗ್ಗೆ ಬೋಧನೆ: ಹೈಕೋರ್ಟ್‌ ಜಡ್ಜರಿಗೆ ಸುಪ್ರೀಂ ಕೋರ್ಟ್ ತಪರಾಕಿ- ಜಡ್ಜ್‌ಗಳು ಬೋಧನೆ ಮಾಡಬಾರದು ಎಂದು ನ್ಯಾಯಪೀಠ!

ಟೀನೇಜ್ ಸೆಕ್ಸ್‌ ಬಗ್ಗೆ ಬೋಧನೆ: ಹೈಕೋರ್ಟ್‌ ಜಡ್ಜರಿಗೆ ಸುಪ್ರೀಂ ಕೋರ್ಟ್ ತಪರಾಕಿ- ಜಡ್ಜ್‌ಗಳು ಬೋಧನೆ ಮಾಡಬಾರದು ಎಂದು ನ್ಯಾಯಪೀಠ!





ಟೀನೇಜ್ ಸೆಕ್ಸ್‌ ಬಗ್ಗೆ ಬೋಧನಾತ್ಮಕ ಹೇಳಿಕೆಗಳನ್ನು ನೀಡಿದ್ದ ಕೊಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆ ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಗಿದೆ. ನ್ಯಾಯಮೂರ್ತಿಗಳು ವ್ಯಕ್ತಪಡಿಸಿರುವ ಹೇಳಿಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ, ಹೈಕೋರ್ಟ್ ಹೇಳಿಕೆಗಳು ಆಕ್ಷೇಪಾರ್ಹ ಮತ್ತು ಅನಗತ್ಯ ಎಂದು ವ್ಯಾಖ್ಯಾನಿಸಿದೆ.


ಹದಿಹರೆಯದ ಯುವತಿಯರು ಎರಡು ನಿಮಿಷದ ಸಂತೋಷಕ್ಕೆ ಶರಣಾಗುವ ಬದಲು ತಮ್ಮ ಲೈಂಗಿಕ ಕಾಮನೆಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಕೊಲ್ಕತ್ತಾ ಹೈಕೋರ್ಟ್ ನ್ಯಾ. ಚಿತ್ತರಂಜನ್ ದಾಸ್ ಮತ್ತು ಪಾರ್ಥಸಾರಥಿ ಸೇನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಡಿಸೆಂಬರ್ 7, 2023ರಂದು ಪ್ರಕರಣವೊಂದರ ವಿಚಾರಣೆ ನಡೆಸಿ ವಿವಾದಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿ ಆದೇಶ ಹೊರಡಿಸಿತ್ತು.


ಕೊಲ್ಕತ್ತಾ ಹೈಕೋರ್ಟ್‌ನ ಈ ಆಕ್ಷೇಪಾರ್ಹ ಹೇಳಿಕೆಗಳನ್ನೊಳಗೊಂಡ ತೀರ್ಪಿನ ಬಗ್ಗೆ ಸ್ವಯಂಪ್ರೇರಿತವಾಗಿ ಪ್ರಕರಣದ ದಾಖಲಿಸಿಕೊಂಡು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ, ಈ ಆದೇಶ ಹೊರಡಿಸಿದೆ.


ಹೈಕೋರ್ಟ್‌ನ ಆಕ್ಷೇಪಾರ್ಹ ಹೇಳಿಕೆಗಳು ಸಂವಿಧಾನದ 21ನೇ ವಿಧಿಯಾದ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿಗೆ ವಿರುದ್ಧವಾಗಿದೆ. ಹದಿಹರೆಯದವರಿಗೂ ಸಮಾನ ಹಕ್ಕು ಇದೆ ಎಂಬುದನ್ನು ಸುಪ್ರೀಂ ನ್ಯಾಯಪೀಠ ನೆನಪಿಸಿದೆ.


ಪ್ರಕರಣ: : In Re: Right to Privacy of Adolescent

ಸುಪ್ರೀಂ ಕೋರ್ಟ್‌, SMW 2/2023 Dated 08-12-2023


Ads on article

Advertise in articles 1

advertising articles 2

Advertise under the article