Stamp Fee Hike: ಮುದ್ರಾಂಕ ಶುಲ್ಕದಲ್ಲಿ ಭಾರೀ ಏರಿಕೆ: ಅಫಿದಾವಿತ್ ಶುಲ್ಕ ಐದು ಪಟ್ಟು ಹೆಚ್ಚಳ!
Stamp Fee Hike: ಮುದ್ರಾಂಕ ಶುಲ್ಕದಲ್ಲಿ ಭಾರೀ ಏರಿಕೆ: ಅಫಿದಾವಿತ್ ಶುಲ್ಕ ಐದು ಪಟ್ಟು ಹೆಚ್ಚಳ!
ಸ್ಟ್ಯಾಂಪ್ ಫೀ (
ಕರ್ನಾಟಕದಲ್ಲಿ ಮುದ್ರಾಂಕ ಶುಲ್ಕದಲ್ಲಿ ಭಾರೀ ಏರಿಕೆ ಕಂಡುಬರಲಿದೆ. ಅಫಿದಾವಿತ್ ಶುಲ್ಕವನ್ನು ಈಗ ಇರುವ ರೂ. 20/- ದಿಂದ ರೂ. 100/-ಕ್ಕೆ ಏರಿಸಲು ನಿರ್ಧರಿಸಲಾಗಿದೆ.
ಈ ದರ ಏರಿಸುವ ಪ್ರಸ್ತಾಪಕ್ಕೆ ಅವಕಾಶ ಕಲ್ಪಿಸುವ 'ಕರ್ನಾಟಕ ಸ್ಟ್ಯಾಂಪ್ (ತಿದ್ದುಪಡಿ) ಮಸೂದೆ-2023'ನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ಇದಕ್ಕೆ ಸದನ ಅಂಗೀಕಾರ ದೊರೆತರೆ ಬೆಲೆಗಳು ಗಗನಕ್ಕೇರಲಿದೆ.
ಅಫಿದಾವಿತ್:
ಈಗ ಇರುವ ಬೆಲೆ: ರೂ. 20/-
ಏರಿಕೆಯಾದ ಬಳಿಕ: ರೂ. 100/-
ಚಿಟ್ ಫಂಡ್ ಒಪ್ಪಂದ
ಈಗ ಇರುವ ಬೆಲೆ: ರೂ. 100/-
ಏರಿಕೆಯಾದ ಬಳಿಕ: ರೂ. 500/-
ಸಾಲದ ಒಪ್ಪಂದ (1 ಲಕ್ಷದ ವರೆಗಿನ ಒಪ್ಪಂದ)
ಈಗ ಇರುವ ಬೆಲೆ: 0.1%
ಏರಿಕೆಯಾದ ಬಳಿಕ: 0.5%
ದತ್ತು ಪ್ರಮಾಣ ಪತ್ರ
ಈಗ ಇರುವ ಬೆಲೆ: ರೂ. 500/-
ಏರಿಕೆಯಾದ ಬಳಿಕ: ರೂ. 1000/-
ವಿವಾಹ ವಿಚ್ಚೇದನ ಪ್ರಮಾಣಪತ್ರ, ವಿಭಾಗಪತ್ರ, ಬಾಂಡ್, ಗುತ್ತಿಗೆ ಒಪ್ಪಂದ ಸಹ ಈ ಮಸೂದೆಯ ವ್ಯಾಪ್ತಿಗೆ ಬರುತ್ತದೆ. ಚಿಟ್ ಫಂಡ್ ಒಪ್ಪಂದ, ವಕೀಲರ ಪ್ರಮಾಣ ಮುದ್ರಾಂಕ ಶುಲ್ಕವನ್ನೂ ಹೆಚ್ಚಿಸುವ ಪ್ರಸ್ತಾಪ ಈ ತಿದ್ದುಪಡಿ ಮಸೂದೆಯಲ್ಲಿ ಇದೆ.