-->
ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗ: ಮ್ಯಾಜಿಸ್ಟ್ರೇಟರ ವಿರುದ್ಧ ಹೈಕೋರ್ಟ್‌ಗೆ ಸಂತ್ರಸ್ತೆ ದೂರು- ಕ್ರಮಕ್ಕೆ ನಿರಾಕರಿಸಿದ ವಿಭಾಗೀಯ ನ್ಯಾಯಪೀಠ!

ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗ: ಮ್ಯಾಜಿಸ್ಟ್ರೇಟರ ವಿರುದ್ಧ ಹೈಕೋರ್ಟ್‌ಗೆ ಸಂತ್ರಸ್ತೆ ದೂರು- ಕ್ರಮಕ್ಕೆ ನಿರಾಕರಿಸಿದ ವಿಭಾಗೀಯ ನ್ಯಾಯಪೀಠ!

ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗ: ಮ್ಯಾಜಿಸ್ಟ್ರೇಟರ ವಿರುದ್ಧ ಹೈಕೋರ್ಟ್‌ಗೆ ಸಂತ್ರಸ್ತೆ ದೂರು- ಕ್ರಮಕ್ಕೆ ನಿರಾಕರಿಸಿದ ವಿಭಾಗೀಯ ನ್ಯಾಯಪೀಠ!





ಜೆಎಂಎಫ್‌ಸಿ ನ್ಯಾಯಾಲಯದ ಮ್ಯಾಜಿಸ್ಟ್ರೇಟರು ತಮ್ಮ ಆದೇಶದಲ್ಲಿ ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿರುವ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿ ವಿಭಾಗೀಯ ಪೀಠದ ಮುಂದೆಯೂ ದಾಖಲಾದ ಘಟನೆ ಕೇರಳ ಹೈಕೋರ್ಟ್‌ನಲ್ಲಿ ನಡೆದಿದೆ.


ಅತ್ಯಾಚಾರ ಸಂತ್ರಸ್ತೆಯ ಗುರುತು ಸಿಗದಂತೆ ಸಂತ್ರಸ್ತೆಯ ಹೆಸರನ್ನು ತಕ್ಷಣ ಅಳಿಸುವಂತೆ ನ್ಯಾ. ದೇವನ್ ರಾಮಚಂದ್ರನ್ ಅವರಿದ್ದ ಏಕಸದಸ್ಯ ಪೀಠ ನಿರ್ದೇಶನ ನೀಡಿದ್ದರು, ಮ್ಯಾಜಿಸ್ಟ್ರೇಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಅರ್ಜಿದಾರರ ಮನವಿಯನ್ನು ವಜಾಗೊಳಿಸಿತ್ತು.


ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಕೇರಳ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠದ ಮುಂದೆ ಅರ್ಜಿ ಸಲ್ಲಿಸಿದ್ದು, ಏಕಸದಸ್ಯ ಪೀಠದ ಆದೇಶವನ್ನು ನ್ಯಾ. ಎ.ಜೆ. ದೇಸಾಯಿ ಮತ್ತು ನ್ಯಾ. ವಿ.ಜಿ. ಅರುಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಎತ್ತಿಹಿಡಿದಿದೆ.


ಪ್ರಕರಣದ ಹಿನ್ನೆಲೆ..:

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ಸೈಜು ಎ.ವಿ. ಎಂಬವರಿಗೆ ಜಾಮೀನು ನೀಡಲಾಗಿದ್ದು, ಈ ಜಾಮೀನು ರದ್ದುಗೊಳಿಸುವಂತೆ ಕೋರಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕಟ್ಟಕಡದ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಜಾಮೀನನ್ನು ರದ್ದುಗೊಳಿಸಲು ಮ್ಯಾಜಿಸ್ಟ್ರೇಟರು ತಮ್ಮ ಆದೇಶದಲ್ಲಿ ಆಕಸ್ಮಿಕವಾಗಿ (ಕಣ್ತಪ್ಪಿನಿಂದಾಗಿ) ಸಂತ್ರಸ್ತೆಯ ಐಡೆಂಟಿಟಿಯನ್ನು ಬಹಿರಂಗಪಡಿಸಿದ್ದರು.


ಅತ್ಯಾಚಾರ ಸಂತ್ರಸ್ತರ ಐಡೆಂಟಿಟಿ ಬಹಿರಂಗಪಡಿಸುವಂತಿಲ್ಲ ಎಂಬ ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಹಾಗೂ "ನಿಪುಣಾ ಸಕ್ಸೇನಾ ಮತ್ತಿತರರು ಹಾಗೂ ಭಾರತ ಸರ್ಕಾರ" ನಡುವಿನ ಪ್ರಕರಣದಲ್ಲಿ ಸುಪ್ರೀಮ ಕೋರ್ಟ್ ನೀಡಿದನ್ನು ತೀರ್ಪನ್ನು ಈ ಆದೇಶ ಉಲ್ಲಂಘಿಸಿದೆ ಎಂದು ಅತ್ಯಾಚಾರ ಸಂತ್ರಸ್ತೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ತಮ್ಮ ಅರ್ಜಿಯಲ್ಲಿ ಮ್ಯಾಜಿಸ್ಟ್ರೇಟರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಮನವಿಯನ್ನೂ ಮಾಡಿದ್ದರು.


ಈ ಅರ್ಜಿಯನ್ನು ತಕ್ಷಣ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ನ್ಯಾ. ದೇವನ್ ರಾಮಚಂದ್ರನ್ ಅವರಿದ್ದ ಏಕಸದಸ್ಯ ಪೀಠ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದಲ್ಲಿ ಹೆಸರನ್ನು ತಕ್ಷಣ ಅಳಿಸಿಹಾಕಲು ಆದೇಶ ಹೊರಡಿಸಿತು. ಆದರೆ, ಅರ್ಜಿದಾರರ ಇನ್ನೊಂದು ಮನವಿಯನ್ನು ಪುರಸ್ಕರಿಸಲು ನಿರಾಕರಿಸಿ ಮ್ಯಾಜಿಸ್ಟ್ರೇಟರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ.


ಅತ್ಯಾಚಾರದಂತಹ ಅಪರಾಧದಲ್ಲಿ ಸಂತ್ರಸ್ತರಾದವರ ಐಡೆಂಟಿಟಿ (ಗುರುತು-ಪರಿಚಯ) ಬಹಿರಂಗ ಪಡಿಸುವುದು ಅಪರಾಧ ಎಂದು ಪರಿಗಣಿಸುವ ಸೆಕ್ಷನ್ 228A, ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವ ಪ್ರಸಾರ (ಮುದ್ರಣ ಮತ್ತು ಪ್ರಸಾರ) ಮಾಡುವವರಿಗೆ ಮಾತ್ರ ಅನ್ವಯಿಸುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.


ನ್ಯಾಯಾಲಯ ತನ್ನ ವಿಚಾರಣೆಯಲ್ಲಿ ನಡೆಯುವ ಕಣ್ತಪ್ಪಿನ ಪ್ರಕ್ರಿಯೆಗಳಿಗೆ ಅಥವಾ ಅಜಾಗರೂಕತೆಯಿಂದ ಮಾಹಿತಿ ಬಹಿರಂಗವಾಗುವ ಸಂದರ್ಭದಲ್ಲಿ ಈ ಕಲಂನ್ನು ಅನ್ವಯಿಸಲು ಬರುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. 


ಜೊತೆಗೆ ನ್ಯಾಯಾಧೀಶರ (ಸಂರಕ್ಷಣಾ) ಕಾಯ್ದೆಯಡಿ ನ್ಯಾಯಾಧೀಶರಿಗೆ ನೀಡಲಾದ ಸಂಪೂರ್ಣ ರಕ್ಷಣೆಯನ್ನು ತೀರ್ಪು ಸ್ಪಷ್ಟವಾಗಿ ಉಲ್ಲೇಖಿಸಿ ಮ್ಯಾಜಿಸ್ಟ್ರೇಟರ ವಿರುದ್ಧ ಕ್ರಮಕ್ಕೆ ನಿರಾಕರಿಸಿತ್ತು.


ಏಕಸದಸ್ಯಪೀಠದ ಈ ಆದೇಶವನ್ನು ನ್ಯಾ. ಎ.ಜೆ. ದೇಸಾಯಿ ಮತ್ತು ನ್ಯಾ. ವಿ.ಜಿ. ಅರುಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಕೂಡ ಎತ್ತಿಹಿಡಿಯಿತು.




Ads on article

Advertise in articles 1

advertising articles 2

Advertise under the article