-->
ವಾಟ್ಸ್ಯಾಪ್‌ ಬಳಕೆದಾರರೇ ಎಚ್ಚರಿಕೆ!- ಈ ರೀತಿ ನಿಮ್ಮನ್ನು ವಂಚಿಸಬಹುದು

ವಾಟ್ಸ್ಯಾಪ್‌ ಬಳಕೆದಾರರೇ ಎಚ್ಚರಿಕೆ!- ಈ ರೀತಿ ನಿಮ್ಮನ್ನು ವಂಚಿಸಬಹುದು

ವಾಟ್ಸ್ಯಾಪ್‌ ಬಳಕೆದಾರರೇ ಎಚ್ಚರಿಕೆ!- ಈ ರೀತಿ ನಿಮ್ಮನ್ನು ವಂಚಿಸಬಹುದು

ವಾಟ್ಸ್ಯಾಪ್‌ ಬಳಸಿಕೊಂಡು ವಿವಿಧ ರೀತಿಯಲ್ಲಿ ವಂಚನೆ ನಡೆಸುವ ತಂಡಗಳು ದೇಶಾದ್ಯಂತ ಸಕ್ರಿಯವಾಗಿದ್ದು, ವಾಟ್ಸ್ಯಾಪ್‌ ಬಳಸುವವರು ಇದನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು ಎಂದು ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗಳು ಅಲಾರ್ಮ್‌ ಸೂಚನೆ ನೀಡಿದ್ದಾರೆ.


ಮೋಸ ಮಾಡಲೆಂದೇ ಇಂತಹ ಹಲವು ತಂಡಗಳು, ಸ್ಪ್ಯಾಮ್, ಹ್ಯಾಕಿಂಗ್ ತಂಡಗಳು ಸಕ್ರಿಯವಾಗಿದ್ದು, ಕೃತಕ ಬುದ್ದಿಮತ್ತೆಯನ್ನು ಬಳಸಿ ಇಂತಹ ಕೃತ್ಯಕ್ಕೆ ಮುಂದಾಗಬಹುದು.ನಿಮ್ಮನ್ನು ಹೇಗೆಲ್ಲ ವಂಚಿಸಬಹುದು!- ಇಲ್ಲಿದೆ ಒಂದು ಕಿರು ವಿವರ:

ಹೂಡಿಕೆ ಯೋಜನೆಗಳಿವೆ, ಹಣ ಹೂಡಿ ಎಂಬ ಆಕರ್ಷಕ ಯೋಜನೆಯನ್ನು ಅನಾಮಧೇಯರು ನಿಮ್ಮ ಮುಂದಿಡಬಹುದು


ಉದ್ಯೋಗದ ಭರವಸೆ ನೀಡಬಹುದು. ನೀವು ಇರುವಲ್ಲೇ ಕೇವಲ ಮೊಬೈಲ್‌ ಬಳಸಿ ಲಕ್ಷಾಂತರ ಹಣ ಸಂಪಾದಿಸಬಹುದು ಎಂಬ ಆಮಿಷ ಒಡ್ಡಬಹುದು


ಮಿಸ್ಡ್ ಕಾಲ್, ವೀಡಿಯೋ ಕಾಲ್ ಮಾಡಿ ನಿಮ್ಮ ವಾಟ್ಸ್ಯಾಪ್‌ ಹ್ಯಾಕ್ ಮಾಡಬಹುದು

ಸ್ಕ್ರೀನ್ ಶೇರಿಂಗ್, ಹೈಜಾಕಿಂಗ್ ಮೊದಲಾದ ಏಳು ಬಗೆಯ ಹ್ಯಾಕಿಂಗ್ ಮೂಲಕ ನಿಮ್ಮ ಫೋನ್‌ ಬಳಸಿ ನಿಮ್ಮನ್ನು ಹ್ಯಾಕರ್‌ಗಳು ವಂಚಿಸಬಹುದು


ವಂಚಕರು ಜನರ ವಾಟ್ಸ್ಯಾಪ್‌ ಖಾತೆಗೆ ಅನಧಿಕೃತವಾಗಿ ಪ್ರವೇಶ ಪಡೆದು ಹೈಜಾಕ್ ಮಾಡಿ ಅವರ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಇರುವ ವ್ಯಕ್ತಿಗಳನ್ನು ಸಂಪರ್ಕಿಸಿ ಹಣ ನೀಡುವಂತೆ ಮನವಿ ಮಾಡುತ್ತಾರೆ. ಮೋಸಗಾರರು ಎಲ್ಲಿದ್ದಾರೆ? ಹೇಗೆ ಕಾರ್ಯಾಚರಿಸುತ್ತಾರೆ ಗೊತ್ತೇ..?

ವಿಯೆಟ್ನಾಂ, ಕೆನ್ಯಾ, ಇಥಿಯೋಪಿಯಾ ಮತ್ತು ಮಲೇಷ್ಯಾ ದೇಶಗಳ ಕೋಡ್‌ಗಳನ್ನು ಬಳಸಿ ಹ್ಯಾಕರ್‌ಗಳು ಮಿಸ್ಡ್ ಕಾಲ್ ಮಾಡಬಹುದು. ಹಾಗಾಗಿ ಈ ದೇಶಗಳ ಕೋಡ್ ಹೊಂದಿರುವ ಸಂಖ್ಯೆಯ ದೂರವಾಣಿ ಕರೆಗಳನ್ನು ಸ್ವೀಕರಿಸಬಾರದು.


ಸಕ್ರಿಯ ಬಳಕೆದಾರರನ್ನು ಗುರುತಿಸಲು ಹ್ಯಾಕರ್‌ಗಳು ಕೋಡ್ ಸ್ಕ್ರಿಪ್ಟೆಡ್ ಚಾಟ್‌ಗಳನ್ನು ಬಳಸುತ್ತಾರೆ ಎಂದು ಪೊಲೀಸ್ ಇಲಾಖೆ ಗುರುತಿಸಿದೆ.


ಕಂಪೆನಿಗಳ ಸಿಇಓ, ಮುಖ್ಯ ಹಣಕಾಸು ಅಧಿಕಾರಿ, ಬ್ಯಾಂಕ್ ಅಧಿಕಾರಿ, ಪೊಲೀಸ್ ಯಾ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಬಳಕೆದಾರರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾರೆ.


ಗ್ರಾಹಕರ ಖಾಸಗಿ ಮಾಹಿತಿಗಳನ್ನು ಪಡೆದು ಅವರ ಸಾಮಾಜಿಕ ಜಾಲತಾಣಗಳಲ್ಲಿ ಇರುವ ಖಾತೆಯನ್ನು ಹೋಲುವ ಬೇರೆ ಖಾತೆಗಳನ್ನು ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂಬುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗಳು ಮಾಹಿತಿ ಕಲೆ ಹಾಕಿವೆ.

Ads on article

Advertise in articles 1

advertising articles 2

Advertise under the article