-->
ಕೋಚಿಂಗ್ ಸೆಂಟರ್‌ಗಳಿಗೆ ಹೊಸ ಮಾರ್ಗಸೂಚಿ: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಕೇಂದ್ರದ ಹೊಸ ಕಾರ್ಯತಂತ್ರ

ಕೋಚಿಂಗ್ ಸೆಂಟರ್‌ಗಳಿಗೆ ಹೊಸ ಮಾರ್ಗಸೂಚಿ: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಕೇಂದ್ರದ ಹೊಸ ಕಾರ್ಯತಂತ್ರ

ಕೋಚಿಂಗ್ ಸೆಂಟರ್‌ಗಳಿಗೆ ಹೊಸ ಮಾರ್ಗಸೂಚಿ: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಕೇಂದ್ರದ ಹೊಸ ಕಾರ್ಯತಂತ್ರ





ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಕೋಚಿಂಗ್ ಸೆಂಟರ್‌ಗಳಿಗೆ ಕೇಂದ್ರ ಸರ್ಕಾರ ಹೊಸ ನಿಯಮ, ಮಾರ್ಗಸೂಚಿಯನ್ನು ಹೊರಡಿಸಿದೆ.



16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದಾಖಲು ಮಾಡುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.


ಕೋಚಿಂಗ್ ಸೆಂಟರ್‌ಗಳಿಗೆ ಹೋಗುವ ಮಕ್ಕಳಲ್ಲಿ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಾಖಲಾಗಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಈ ಮಾರ್ಗಸೂಚಿಯನ್ನು ಹೊರಡಿಸಿದೆ.


ಗುಣಮಟ್ಟದ ಬೋಧಕ ಸಿಬ್ಬಂದಿ ಇರಬೇಕು, ನಿಯಮಿತವಾದ ಶುಲ್ಕ ವ್ಯವಸ್ಠೆಯನ್ನು ಪಾರದರ್ಶಕವಾಗಿ ರೂಪಿಸಬೇಕು, ಕೋಚಿಂಗ್ ಕೇಂದ್ರಗಳ ಚಟುವಟಿಕೆಗಳ ಮೇಲೆ ಪೂರ್ಣ ನಿಗಾ ಇಡಬೇಕು, ಇಂತಹ ಕೇಂದ್ರಗಳ ನೋಂದಣಿ ಜವಾಬ್ದಾರಿಯನ್ನು ಆಯಾ ರಾಜ್ಯ ಸರ್ಕಾರಗಳೇ ನಿಭಾಯಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.


ಒಂದು ಲಕ್ಷ ರೂ. ದಂಡ

ಕೋಚಿಂಗ್ ಸೆಂಟರ್‌ಗಳು ವಿದ್ಯಾರ್ಥಿಗಳಿಂದ ಅತಿಯಾದ ಶುಲ್ಕ ಪಡೆದರೆ ಒಂದು ಲಕ್ಷ ರೂ. ದಂಡ ವಿಧಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಅಷ್ಟೇ ಅಲ್ಲದೆ, ಕೋಚಿಂಗ್ ಸೆಂಟರ್‌ನ ನೋಂದಣಿಯನ್ನು ರದ್ದುಪಡಿಸುವ ಅಧಿಕಾರವನ್ನು ಕೂಡ ನೀಡಲಾಗಿದೆ.


ಮಾರ್ಗಸೂಚಿಯಲ್ಲಿ ಹೇಳಲಾದ ಪ್ರಮುಖ ಅಂಶಗಳು...

ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೋಚಿಂಗ್ ಸೆಂಟರ್‌ಗಳು ಸುಳ್ಳು ಭರವಸೆ ನೀಡುವಂತಿಲ್ಲ.


ಕೋಚಿಂಗ್ ಸೆಂಟರ್‌ಗಳು ವಿಧಿಸುವ ಶುಲ್ಕ, ಬೋಧನಾ ಶುಲ್ಕ ನ್ಯಾಯೋಚಿತವಾಗಿರಬೇಕು ಹಾಗೂ ತರಗತಿಗಳು ನಿಯಮಿತವಾಗಿ ನಡೆಯಬೇಕು


ಕೋಚಿಂಗ್ ಸೆಂಟರ್‌ಗಳು ಪದವಿಗಿಂತ ಕಡಿಮೆ ಶಿಕ್ಷಣ ಇರುವ ಟ್ಯೂಟರ್‌ಗಳು ನೇಮಿಸುವಂತಿಲ್ಲ.

ದ್ವಿತೀಯ ಪಿಯು ನಂತರದ ವಿದ್ಯಾರ್ಥಿಗಳಿಗೆ ಮಾತ್ರ ಕೋಚಿಂಗ್ ಸೆಂಟರ್‌ಗಳು ಪ್ರವೇಶ ಕಲ್ಪಿಸಬೇಕು


ವಿದ್ಯಾರ್ಥಿ ಕೋರ್ಸ್‌ನ ಪೂರ್ತಿ ಶುಲ್ಕ ಪಾವತಿಸಿ ಅರ್ಧಕ್ಕೆ ನಿಲ್ಲಿಸಿದರೆ 10 ದಿನದಲ್ಲಿ ಹಣ ಮರುಪಾವತಿಸಬೇಕು. ಹಾಸ್ಟೆಲ್ ಇದ್ದರೆ ಹಾಸ್ಟೆಲ್ ಶುಲ್ಕ, ಮೆಸ್ ಶುಲ್ಕವನ್ನು ಮರುಪಾವತಿಸಬೇಕು.


ಕೋಚಿಂಗ್ ಸೆಂಟರ್‌ಗಳು ತಮ್ಮ ತರಗತಿಗೆ ವಿದ್ಯಾರ್ಥಿಯನ್ನು ನೋಂದಣಿ ಮಾಡುವಾಗ ಪ್ರತಿ ವಿದ್ಯಾರ್ಥಿಗೆ ಸಾಕಷ್ಟು / ಕನಿಷ್ಟ ಸ್ಥಳಾವಕಾಶ ಇರುವಂತೆ ನೋಡಿಕೊಳ್ಳಬೇಕು

ಕೋಚಿಂಗ್ ಸೆಂಟರ್‌ಗಳು ವಿದ್ಯಾರ್ಥಿಗಳ ಫಲಿತಾಂಶ ಆಧರಿಸಿ ಪ್ರತ್ಯಕ್ಷ ಯಾ ಪರೋಕ್ಷ ಜಾಹೀರಾತು ನೀಡುವಂತಿಲ್ಲ.


Ads on article

Advertise in articles 1

advertising articles 2

Advertise under the article