ಸಾರ್ವಜನಿಕ ಬಳಕೆಯ ಭೂಮಿ ವಶ ಮಾಡದಿದ್ದರೆ ಸರ್ಕಾರದ ಹಕ್ಕು ರದ್ದು: ಕರ್ನಾಟಕ ಹೈಕೋರ್ಟ್
ಸಾರ್ವಜನಿಕ ಬಳಕೆಯ ಭೂಮಿ ವಶ ಮಾಡದಿದ್ದರೆ ಸರ್ಕಾರದ ಹಕ್ಕು ರದ್ದು: ಕರ್ನಾಟಕ ಹೈಕೋರ್ಟ್
ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಭೂಮಿಯನ್ನು ಸರ್ಕಾರ ಯಾ ಸಕ್ಷಮ ಪ್ರಾಧಿಕಾರ ವಶಕ್ಕೆ ಪಡೆಯದಿದ್ದರೆ ಆಗ ಅಂತಹ ಭೂಮಿಯ ಮೇಲಿನ ಸರ್ಕಾರದ ಹಕ್ಕು ರದ್ದಾಗಲಿದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ ಉದ್ಯಾನ, ಸ್ಮಶಾನ ಮತ್ತು ಆಟದ ಮೈದಾನ ಸೇರಿದಂತೆ ಸಾರ್ವಜನಿಕ ಬಳಕೆಗೆ ಮೀಸಲಿರಿಸಿದ ಜಾಗವನ್ನು ಐದು ವರ್ಷಗಳಲ್ಲಿ ಸರ್ಕಾರ ಅಥವಾ ಸಕ್ಷಮ ಪ್ರಾಧಿಕಾರ ಸ್ವಾದೀನ ಪಡಿಸದೇ ಇದ್ದರೆ, ಆ ಕಾಯ್ದಿರಿಸಿದ ಜಾಗದ ಮೇಲಿನ ಹಕ್ಕು ರದ್ದಾಗಲಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ನ್ಯಾ. ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ಬೆಂಗಳೂರಿನ ಜಯಮಹಲ್ ಮುಖ್ಯ ರಸ್ತೆಯಲ್ಲಿ ಇರುವ ಜಯಮಹಲ್ ಪ್ಯಾಲೇಸ್ ಹೊಟೇಲ್ ಮಾಲೀಕ ದಿ. ಜ್ಯೋತೇಂದ್ರ ಸಿಂಹಜಿ ವಿಕ್ರಮ್ ಸಿಂಹಜಿ ಅವರ ಕಾನೂನುಬದ್ಧ ವಾರೀಸುದಾರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿತು.
ಪ್ರಕರಣದ ವಿವರ:
ಅರ್ಜಿದಾರರ ಭೂಮಿಯನ್ನು ಪರಿಷ್ಕೃತ ಕ್ರಿಯಾ ಯೋಜನೆಯಡಿ 2007ರ ಜೂನ್ 25ರಂದು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ-ಬಿಡಿಎ ಆದೇಶ ಹೊರಡಿಸಿತ್ತು.
ಈ ಅವಧಿ 2012ರ ಜೂನ್ 24ಕ್ಕೆ ಕೊನೆಗೊಂಡಿದೆ. ಭೂಮಿಯನ್ನು ಈ ಐದು ವರ್ಷಗಳ ಕಾಲ ಬಿಡಿಎ ಸ್ವಾದೀನಕ್ಕೆ ಪಡೆದುಕೊಳ್ಳುವ ಯಾವುದೇ ಪ್ರಕ್ರಿಯೆ ನಡೆಸಿಲ್ಲ. ಈ ಕಾರಣದಿಂದ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಾಗವು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ-1961 (KTCP Act) ಸೆಕ್ಷನ್ 12(1)(c) ಅನ್ವಯ ಹಕ್ಕು ರದ್ದಾಗಲಿದೆ ಎಂದು ನ್ಯಾಯಪೀಠ ಹೇಳಿದೆ.