-->
ಡೇಟಿಂಗ್ ಆಪ್‌ನಲ್ಲಿ ಭೇಟಿ: ಲವ್, ಸೆಕ್ಸ್, ದೋಖಾ ಆರೋಪ- ಅತ್ಯಾಚಾರ ಆರೋಪಿಗೆ ದೆಹಲಿ ಹೈಕೋರ್ಟ್‌ ಜಾಮೀನು

ಡೇಟಿಂಗ್ ಆಪ್‌ನಲ್ಲಿ ಭೇಟಿ: ಲವ್, ಸೆಕ್ಸ್, ದೋಖಾ ಆರೋಪ- ಅತ್ಯಾಚಾರ ಆರೋಪಿಗೆ ದೆಹಲಿ ಹೈಕೋರ್ಟ್‌ ಜಾಮೀನು

ಡೇಟಿಂಗ್ ಆಪ್‌ನಲ್ಲಿ ಭೇಟಿ: ಲವ್, ಸೆಕ್ಸ್, ದೋಖಾ ಆರೋಪ- ಅತ್ಯಾಚಾರ ಆರೋಪಿಗೆ ದೆಹಲಿ ಹೈಕೋರ್ಟ್‌ ಜಾಮೀನು





ಲವ್, ಸೆಕ್ಸ್, ದೋಖಾ ಆರೋಪದಲ್ಲಿ ಮಹಿಳೆಯ ಅತ್ಯಾಚಾರ ನಡೆಸಿದ್ದಾರೆ ಎನ್ನಲಾದ ಆರೋಪಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.


ನ್ಯಾ. ವಿಕಾಸ್ ಮಹಾಜನ್ ಅವರಿದ್ದ ಏಕಸದಸ್ಯ ಪೀಠ ಈ ಜಾಮೀನು ನೀಡಿದ್ದು, ಈ ಪ್ರಕರಣದಲ್ಲಿ ಪರಸ್ಪರ ಸಮ್ಮತಿಯ ಸೆಕ್ಸ್ ನಡೆದಿದ್ದು, ಇವರಿಬ್ಬರ ನಡುವೆ ವಿನಿಯಮವಾದ ಸಂದೇಶಗಳ ಮೂಲಕ ಇವರಿಗೆ ಮದುವೆಯ ಉದ್ದೇಶ ಇರಲಿಲ್ಲ ಎಂಬುದನ್ನು ತೋರಿಸುತ್ತಿದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳೀದೆ.


ಆರೋಪಿ ಮತ್ತು ದೂರುದಾರ ಮಹಿಳೆ ಮದುವೆಯ ಉದ್ದೇಶದಿಂದ ಭೇಟಿಯಾಗಿಲ್ಲ. ಮೆಟ್ರಿಮೋನಿಯಲ್ ಆಪ್‌ನಲ್ಲಿ ಪರಸ್ಪರ ಭೇಟಿಯಾಗದೆ ಡೇಟಿಂಗ್ ಆಪ್ ಮೂಲಕ ಪರಿಚಯವಾಗಿದೆ ಎಂಬುದನ್ನು ನ್ಯಾಯಪೀಠ ಗಮನಿಸಿದೆ.


ಆರೋಪಿಯ ಮೊಬೈಲ್‌ನಲ್ಲಿ ದೂರುದಾರರ ಅಶ್ಲೀಲ ಚಿತ್ರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದಿಂದ ರಿಟ್ರೀವ್ ಮಾಡಲಾಗಿದೆ. ಪಾಟೀ ಸವಾಲಿನಲ್ಲಿ ಈ ಚಿತ್ರಗಳನ್ನು ಆಕೆಯ ಸಮ್ಮತಿಯ ಮೇರೆಗೆ ಪಡೆದುಕೊಳ್ಳಲಾಗಿದೆ ಎಂಬುದನ್ನು ದೂರುದಾರರೇ ಒಪ್ಪಿಕೊಂಡಿದ್ದಾರೆ.



ಇನ್ನು, ಆರೋಪಿ ತಮ್ಮ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಸತ್ಯ ಮರೆಮಾಚಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಈತನ ಶೈಕ್ಷಣಿಕ ಅರ್ಹತೆ ಗೊತ್ತಾದ ನಂತರವೂ ದೂರುದಾರರು ಆತನ ಜೊತೆಗೆ ಹಲವು ರಾತ್ರಿಗಳನ್ನು ಏಕಾಂತದಲ್ಲಿ ಕಳೆದಿದ್ದು, ಪದೇ ಪದೇ ಲೈಂಗಿಕ ಸಂಪರ್ಕ ಹೊಂದಿರುವ ಬಗ್ಗೆ ಆಕೆಯೇ ಸ್ವತಃ ಒಪ್ಪಿಕೊಂಡಿದ್ದಾರೆ. ಇದು ಆಕೆಯ ಮನೋಇಂಗಿತವನ್ನು ಎತ್ತಿ ತೋರಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.



ಪಾಟೀ ಸವಾಲಿನಲ್ಲಿ ಮದುವೆಯ ಬಗ್ಗೆ ಯಾವುದೇ ಸುಳ್ಳು ಭರವಸೆ ಮತ್ತು ತಪ್ಪು ಕಲ್ಪನೆಗಳನ್ನು ನೀಡಿ ಲೈಂಗಿಕ ಕ್ರಿಯೆಗೆ ಒಪ್ಪಿಗೆ ಪಡೆದುಕೊಂಡಿದ್ದಾರೆ ಎಂಬುದಾಗಿ ಕಾಣಿಸುತ್ತಿಲ್ಲ. ಆಕೆಯ ಸಮ್ಮತಿಯಿಂದಲೇ ಆತ ದೂರುದಾರರ ಅಶ್ಲೀಲ ಚಿತ್ರಗಳನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಪರಸ್ಪರ ಒಮ್ಮದಿಂದ ಲೈಂಗಿಕ ಕ್ರಿಯೆ ನಡೆದಿದೆ ಎಂಬುದನ್ನು ದೂರುದಾರರು ಹೇಳಿಕೊಂಡಿರುವುದರಿಂದ ಇಲ್ಲಿ ಅತ್ಯಾಚಾರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿಲ್ಲ.


ಇನ್ನು, ಆರೋಪಿ ದೂರುದಾರರಿಂದ ರೂ. 25,000/- ಸಾಲ ಪಡೆದು ಮರಳಿಸಿಲ್ಲ ಎಂದು ದೂರಲಾಗಿದೆ. ಆರೋಪಿಯು ಈ ಹಣವನ್ನು ಆಕೆಯ ಒಪ್ಪಿಗೆ ಮೇರೆಗೆ ರೂಮ್‌ ಬುಕ್ಕಿಂಗ್ ಹಾಗೂ ಇತರ ಖರ್ಚುಗಳನ್ನು ಮಾಡಿದ್ದಾಗಿ ಹೇಳಿದ್ದು, ಇದಕ್ಕೆ ದೂರುದಾರರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಈ ಹಣಕಾಸಿನ ವ್ಯವಹಾರದ ನಂತರವೂ ದೊಡ್ಡ ಮೊತ್ತದ ಹಣವನ್ನು ಆಕೆ ಆತನಿಗೆ ನೀಡಿರುವುದನ್ನು ನ್ಯಾಯಪೀಠ ಗಮನಿಸಿದೆ.


ಈ ಎಲ್ಲ ಅಂಶಗಳನ್ನು ಗಮನಿಸಿದ ನ್ಯಾಯಪೀಠ, ಆರೋಪಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

Ads on article

Advertise in articles 1

advertising articles 2

Advertise under the article