-->
ದಿನಗುತ್ತಿಗೆ ಅವಧಿಗೂ ಗ್ರಾಚ್ಯುಟಿ ನೀಡಬೇಕು: ಕರ್ನಾಟಕ ಹೈಕೋರ್ಟ್ ತೀರ್ಪು

ದಿನಗುತ್ತಿಗೆ ಅವಧಿಗೂ ಗ್ರಾಚ್ಯುಟಿ ನೀಡಬೇಕು: ಕರ್ನಾಟಕ ಹೈಕೋರ್ಟ್ ತೀರ್ಪು

ದಿನಗುತ್ತಿಗೆ ಅವಧಿಗೂ ಗ್ರಾಚ್ಯುಟಿ ನೀಡಬೇಕು: ಕರ್ನಾಟಕ ಹೈಕೋರ್ಟ್ ತೀರ್ಪು





ಸರ್ಕಾರಿ ಸೇವೆ ಖಾಯಂಗೊಳ್ಳುವ ಮೊದಲು ಉದ್ಯೋಗಿ ದಿನಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸಿದ್ದರೆ ಅಂತಹ ಅವಧಿಗೂ ಗ್ರಾಚ್ಯುಟಿ ಪಾವತಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕ ಬಸವೇಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.


ಗ್ರ್ಯಾಚುಟಿ ಪಾವತಿ ಕಾಯ್ದೆ- 1972ರ ಪ್ರಕಾರ ಖಾಯಂ ನೌಕರ ಮತ್ತು ಗುತ್ತಿಗೆ ಅಡಿ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರರ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ ಅರ್ಜಿದಾರರಿಗೆ ನಾಲ್ಕು ವಾರಗಳಲ್ಲಿ ಬಾಕಿ ಇರುವ ಗ್ರ್ಯಾಚುಟಿ ಹಣಕ್ಕೆ ರೂ. 50 ಸಾವಿರ ವ್ಯಾಜ್ಯದ ವೆಚ್ಚವೂ ಸೇರಿದಂತೆ ರೂ. 2.44 ಲಕ್ಷ ರೂ. ಪಾವತಿ ಮಾಡಬೇಕು ಎಂದು ನ್ಯಾಯಪೀಠವು ನಿರ್ದೇಶನ ನೀಡಿತು.


ಪ್ರಕರಣದ ವಿವರ:

ಅರ್ಜಿದಾರ ಬಸವೇಗೌಡ ಅವರು ಮಂಡ್ಯ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ದಿನಗುತ್ತಿಗೆ ಆಧಾರದಲ್ಲಿ ಡಿ ದರ್ಜೆ ಉದ್ಯೋಗಿಯಾಗಿ 1971ರಲ್ಲಿ ನೇಮಕಗೊಂಡಿದ್ದರು. ಸರ್ಕಾರ ಅವರ ಸೇವೆಯನ್ನು 1990ರಲ್ಲಿ ಖಾಯಂ ಮಾಡಿತು. 2013ರಲ್ಲಿ ಅವರು ಸೇವಾ ನಿವೃತ್ತಿಯನ್ನು ಹೊಂದಿದ್ದರು.



ಸೇವೆ ಖಾಯಂ ಆದ ದಿನಂದಿಂದ ಅಂದರೆ, 1990ರಿಂದ 2013ರ ಮಧ್ಯದ ಅವಧಿಯನ್ನು ಮಾತ್ರವೇ ಅವರ ಗ್ರ್ಯಾಚುಟಿ ಅವಧಿಗೆ ಪರಿಗಣಿಸಲಾಗಿತ್ತು. ಇದರಿಂದ ಅವರಿಗೆ ದೊರಕಿದ್ದು ಕೇವಲ 1.92 ಲಕ್ಷ ರೂ. ಮಾತ್ರ.



ಸೇವೆ ಖಾಯಂ ಆಗುವುದಕ್ಕೂ ಮೊದಲಿನ ಅವಧಿ ಅಂದರೆ 1971-90 ಅವಧಿಯಲ್ಲಿ ಅವರು ದಿನಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ಅವಧಿಯನ್ನು ಗ್ರ್ಯಾಚುಟಿ ಲೆಕ್ಕಾಚಾರದಿಂದ ಹೊರಗಿಡಲಾಗಿತ್ತು. ಇದನ್ನು ಪ್ರಶ್ನಿಸಿ ಬಸವೇಗೌಡ ಅವರು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.



ಇದೀಗ ಕಾನೂನು ಹೋರಾಟದಲ್ಲಿ ಅವರು ಜಯಗಳಿಸಿದ್ದು, ಈ ತೀರ್ಪು ಇಂತಹ ಎಲ್ಲ ಪ್ರಕರಣಗಳಿಗೆ ಮಾದರಿಯಾಗಲಿದೆ.


Basave Gowda Vs State of Karnataka M Nagaprasanna Karnataka High Court, Dated 20-12-2023



Ads on article

Advertise in articles 1

advertising articles 2

Advertise under the article