-->
ಏಕಸದಸ್ಯ ಪೀಠ Vs ವಿಭಾಗೀಯ ಪೀಠ ಜಟಾಪಟಿಗೆ ಸುಪ್ರೀಂ ಮಧ್ಯಪ್ರವೇಶ: ಏನಿದು ಕೊಲ್ಕೊತ್ತಾ ಹೈಕೋರ್ಟ್‌ನ ಪ್ರಕರಣ?

ಏಕಸದಸ್ಯ ಪೀಠ Vs ವಿಭಾಗೀಯ ಪೀಠ ಜಟಾಪಟಿಗೆ ಸುಪ್ರೀಂ ಮಧ್ಯಪ್ರವೇಶ: ಏನಿದು ಕೊಲ್ಕೊತ್ತಾ ಹೈಕೋರ್ಟ್‌ನ ಪ್ರಕರಣ?

ಏಕಸದಸ್ಯ ಪೀಠ Vs ವಿಭಾಗೀಯ ಪೀಠ ಜಟಾಪಟಿಗೆ ಸುಪ್ರೀಂ ಮಧ್ಯಪ್ರವೇಶ: ಏನಿದು ಕೊಲ್ಕೊತ್ತಾ ಹೈಕೋರ್ಟ್‌ನ ಪ್ರಕರಣ?

ಪ್ರಕರಣವೊಂದರ ವಿಚಾರಣೆಯಲ್ಲಿ ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠಗಳು ಪರಸ್ಪರ ಮುಸುಕಿನ ಗುದ್ದಾಟ ನಡೆಸಿದ ವಿಲಕ್ಷಣ ಪ್ರಸಂಗವೊಂದು ಕೊಲ್ಕೊತ್ತಾ ಹೈಕೋರ್ಟ್‌ನಲ್ಲಿ ನಡೆದಿದ್ದು, ಈ ಎರಡು ದಿನಗಳ ಘಟನೆಯಲ್ಲಿ ಎರಡು ನ್ಯಾಯಪೀಠಗಳ ನಡುವಿನ ಸಮರ ಇದೀಗ ಸುಪ್ರೀಂ ಕೋರ್ಟ್‌ ಅಂಗಣಕ್ಕೆ ಕಾಲಿಟ್ಟಿದೆ.


ಕೊಲ್ಕೊತ್ತಾ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠದ ತಡೆಯಾಜ್ಞೆಯನ್ನು ನಿರ್ಲಕ್ಷಿಸಬೇಕು ಎಂದು ಏಕಸದಸ್ಯ ಪೀಠ ಆದೇಶ ಹೊರಡಿಸಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸಿದೆ.


ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾ. ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ಅನಿರುದ್ಧ ಭೋಸ್ ಅವರಿದ್ದ ಐದು ಸದಸ್ಯರ ವಿಸ್ತೃತದ ನ್ಯಾಯಾಧೀಶರ ನ್ಯಾಯಪೀಠ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.


ವಿಭಾಗೀಯ ನ್ಯಾಯಪೀಠದ ಮುಖ್ಯಸ್ಥರಾಗಿರುವ ನ್ಯಾ. ಸೌಮೇನ್ ಸೇನ್ ಅವರು ರಾಜ್ಯದ ರಾಜಕೀಯ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಏಕಸದಸ್ಯ ನ್ಯಾಯಪೀಠದ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ, ಸೌಮೇನ್ ಸೆನ್ ನೇತೃತ್ವದ ವಿಭಾಗೀಯ ಪೀಠದ ಆದೇಶವನ್ನು ನಿರ್ಲಕ್ಷಿಸುವಂತೆ ಆದೇಶ ಹೊರಡಿಸಿದ್ದು ವಿವಾದಕ್ಕೆ ಕಾರಣವಾಗಿದೆ.ಘಟನೆಯ ವಿವರ:

ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಂಚಿಕೆಯು ವ್ಯಾಪಕವಾಗಿ ನಡೆಯುತ್ತಿದೆ ಎಂದು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಹಲವಾರು ವ್ಯಕ್ತಿಗಳು ಇಂತಹ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ ಎಂದು ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ. ಗಂಗೋಪಾಧ್ಯಾಯ, ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಆದೇಶಿಸಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐಗೆ ನೀಡುವಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ಆದೇಶ ನೀಡಿತ್ತು.


ಈ ಆದೇಶ ಹೊರಡಿಸಿದ ಕೆಲವೇ ನಿಮಿಷಗಳಲ್ಲಿ ವಿಭಾಗೀಯ ನ್ಯಾಯಪೀಠದ ಮುಂದೆ ಅಡ್ವಕೇಟ್ ಜನರಲ್ ಅವರು ವಿಷಯವನ್ನು ಪ್ರಸ್ತಾಪಿಸಿದರು. ವಿಭಾಗೀಯ ನ್ಯಾಯಪೀಠ ಅದೇ ದಿನ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.


ಮತ್ತೆ ಅದೇ ದಿನ, ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಗಂಗೋಪಾಧ್ಯಾಯ, ವಿಭಾಗೀಯ ಪೀಠದ ತಡೆಯಾಜ್ಞೆ ಬಗ್ಗೆ ಮಾಹಿತಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿ ಪ್ರಕರಣದ ದಾಖಲೆಯನ್ನು ಸಿಬಿಐಗೆ ನೀಡಬೇಕೆಂದು ಮತ್ತೆ ಆದೇಶ ಹೊರಡಿಸಿದರು.


ತದನಂತರ, ಪುನರಪಿ ಇದೇ ಪ್ರಕರಣದ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ಆದೇಶವನ್ನು ಬದಿಗೆ ಸರಿಸಿ ಆದೇಶ ಹೊರಡಿಸಿತು.


ಮರುದಿನ ಮತ್ತೆ ಅದೇ ವಿಷಯವನ್ನು ಕೈಗೆತ್ತಿಕೊಂಡ ಏಕಸದಸ್ಯ ನ್ಯಾಯಪೀಠ, ಮೇಲ್ಮನವಿ ಮೆಮೋ ಇಲ್ಲದಿದ್ದಾಗ ತಮ್ಮ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ಯಾವ ನಿಯಮ ಅನುಮತಿಸುತ್ತದೆ ಎಂದು ಎ.ಜಿ. ಅವರನ್ನು ಪ್ರಶ್ನಿಸಿದರು. ಆಗ, ಈ ಪ್ರಶ್ನೆಗೆ ಉತ್ತರಿಸಲು ನನಗೆ ಯಾವುದೇ ಜವಾಬ್ದಾರಿ ಇಲ್ಲ ಎಂದು ಹೇಳಿದರು. ವಿಭಾಗೀಯ ನ್ಯಾಯಪೀಠವನ್ನು ನೋಡುವುದಿಲ್ಲರೆ ಏಕಸದಸ್ಯ ನ್ಯಾಯಪೀಠ ಕೆಳ ಹಂತದ ನ್ಯಾಯಾಲಯವಾಗಿದೆ ಎಂಬುದನ್ನು ನ್ಯಾಯಮೂರ್ತಿಗಳು ಆದೇಶದಲ್ಲಿ ದಾಖಲಿಸಿಕೊಂಡರು.


ತನ್ನ ಆದೇಶವನ್ನು ತಡೆಹಿಡಿಯಲು ವಿಭಾಗೀಯ ನ್ಯಾಯಪೀಠಕ್ಕೆ ಯಾವುದೇ ತುರ್ತು ಅಗತ್ಯ ಇಲ್ಲ ಎಂಬುದನ್ನು ಉಲ್ಲೇಖಿಸಿದ ನ್ಯಾ. ಗಂಗೋಪಾಧ್ಯಾಯ, ವಿಭಾಗೀಯ ನ್ಯಾಯಪೀಠದ ಆದೇಶದಲ್ಲಿ ತುರ್ತಿಗೆ ಕಾರಣವಾದ ಯಾವುದೇ ಅಂಶದ ಮಾಹಿತಿ ಇಲ್ಲ. ರಾಜ್ಯದ ರಾಜಕೀಯ ಪಕ್ಷದೆಡೆಗೆ ಯಾರು ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಏಕಸದಸ್ಯ ಪೀಠದ ನ್ಯಾ. ಗಂಗೋಪಾಧ್ಯಾಯಾ ಪ್ರಶ್ನಿಸಿದರು. ಹಾಗೂ, ವಿಭಾಗೀಯ ನ್ಯಾಯಪೀಠದ ಆದೇಶವನ್ನು ನಿರ್ಲಕ್ಷಿಸಿ, ಸಿಬಿಐ ತಕ್ಷಣ ತನಿಖೆ ಪ್ರಾರಂಭಿಸಬೇಕು ಎಂದು ಆದೇಶಿಸಿದರು.

Ads on article

Advertise in articles 1

advertising articles 2

Advertise under the article