-->
ಸಹಕಾರ ಸಂಘಗಳಲ್ಲಿ ಮೀಸಲಾತಿ ವ್ಯವಸ್ಥೆ: ರಾಜ್ಯ ಸರ್ಕಾರದ ಕ್ರಾಂತಿಕಾರಿ ಹೆಜ್ಜೆ

ಸಹಕಾರ ಸಂಘಗಳಲ್ಲಿ ಮೀಸಲಾತಿ ವ್ಯವಸ್ಥೆ: ರಾಜ್ಯ ಸರ್ಕಾರದ ಕ್ರಾಂತಿಕಾರಿ ಹೆಜ್ಜೆ

ಸಹಕಾರ ಸಂಘಗಳಲ್ಲಿ ಮೀಸಲಾತಿ ವ್ಯವಸ್ಥೆ: ರಾಜ್ಯ ಸರ್ಕಾರದ ಕ್ರಾಂತಿಕಾರಿ ಹೆಜ್ಜೆ

ರಾಜ್ಯದ ಸಹಕಾರ ಸಂಘಗಳಲ್ಲಿ ಮೀಸಲಾತಿ ವ್ಯವಸ್ಥೆ ಜಾರಿಗೆ ತೀರ್ಮಾನಿಸುವ ಮೂಲಕ ರಾಜ್ಯ ಸರಕಾರ ಕ್ರಾಂತಿಕಾರಕ ಹೆಜ್ಜೆ ಇಟ್ಟಿದೆ.


ಕರ್ನಾಟಕ ಸಹಕಾರ ಸಂಘಗಳು ತಿದ್ದುಪಡಿ ವಿಜಯಕ 2024ಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅನುಮೋದನೆ ನೀಡಿದೆ ಈ ಮೂಲಕ ರಾಜ್ಯದ 25000 ಅಧಿಕ ಸಹಕಾರ ಹಾಗೂ ಸೌಹಾರ್ದ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಮೀಸಲಾತಿಗೆ ಅವಕಾಶ ಮಾಡಿಕೊಡಲಾಗಿದೆ.


ಚುನಾವಣೆ ಆಯ್ಕೆ ಮತ್ತು ನಾಮಕರಣದಲ್ಲಿ ಮೀಸಲು ಅನ್ವಯವಾಗಲಿದೆ ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಇದನ್ನು ಜಾರಿಗೆ ತರಲಾಗಿದೆ ಬಹಳ ದಿನಗಳಿಂದ ಇದರ ಬಗ್ಗೆ ಬೇಡಿಕೆ ಇತ್ತು ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.


ಈಗಾಗಲೇ ಇದೆ ಕೆಲವು ಕಡೆ ವೃತ್ತಿಪರರಿಗೆ ಅವಕಾಶ ಇದೆ ಇತರೆ ಹಿಂದುಳಿದ ವರ್ಗಗಳಿಗೂ ಮೀಸಲು ಈಗ ಅನ್ವಯವಾಗಲಿದೆ ಸ್ಥಳೀಯ ಸಂಸ್ಥೆಗಳಲ್ಲಿ ಇರುವಂತೆ ಇಲ್ಲಿಯೂ ಮೀಸಲು ಪ್ರಮಾಣ ಇರುತ್ತದೆ ಎಷ್ಟು ಮೀಸಲು ಎಂಬುದನ್ನು ಸರಕಾರ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ.


ಪ್ರಾಥಮಿಕ ಸಹಕಾರ ಸಂಘಗಳ ಆಡಳಿತ ಮಂಡಳಿಯಲ್ಲಿ ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಅದೇ ರೀತಿ ಮಾಧ್ಯಮಿಕ ಫೆಡರಲ್ ಮತ್ತು ಅಪೇಕ್ಷೆ ಸಹಕಾರ ಸಂಘಗಳ ಆಡಳಿತ ಮಂಡಳಿಯಲ್ಲಿಯೂ ಮೀಸಲಾತಿ ಕಲ್ಪಿಸಲು ಇದೀಗ ಅವಕಾಶ ನೀಡಲಾಗುತ್ತಿದೆ.


ಸಹಕಾರ ಸಂಘಗಳ ಕಾಯ್ದೆ ಅಡಿಯಲ್ಲಿ ನೆರವು ಪಡೆದ ಸಂಘದ ಪರಿಭಾಷೆಯಲ್ಲಿ ಸ್ಪಷ್ಟತೆ ತರುವ ಹಾಗೂ ಪರಿಭಾಷೆ ವ್ಯಾಪ್ತಿ ವಿಸ್ತರಿಸುವುದು ಇದರ ಮೂಲ ಉದ್ದೇಶ. ಈ ಮೂಲಕ ಸಂಘದ ಸದಸ್ಯರು ನಿಗದಿತ ಸಾಮಾನ್ಯ ಸಭೆ ಕನಿಷ್ಠ ಸೇವೆ ಬಳಸಿಕೊಳ್ಳುವುದನ್ನು ಕೈ ಬಿಡುವ ಮೂಲಕ ಆಡಳಿತ ಮಂಡಳಿ ಚುನಾವಣೆಗಳಲ್ಲಿ ಎಲ್ಲ ಸದಸ್ಯರಿಗೂ ಸಮಾನವಾಗಿ ಮತದಾನದ ಹಕ್ಕು ನೀಡಲು ಈ ತಿದ್ದುಪಡಿ ಮಹತ್ವದ್ದಾಗಿದೆ.


ಅದೇ ರೀತಿ, ಚುನಾವಣಾ ಪ್ರಾಧಿಕಾರವನ್ನು ರದ್ದುಪಡಿಸಿ ನಿಬಂಧಕರ ಮೇಲುಸ್ತುವಾರಿಯಲ್ಲಿ ಯಾ ಆಧೀನದಲ್ಲಿ ಸಹಕಾರ ಚುನಾವಣೆ ವಿಭಾಗವನ್ನು ಆರಂಭಿಸಲು ಈ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ.

Ads on article

Advertise in articles 1

advertising articles 2

Advertise under the article