-->
ನ್ಯಾಯಮೂರ್ತಿಗಳತ್ತ ಫೈಲ್‌ ಎಸೆದು ದುರ್ನಡತೆ ತೋರಿದ ವಕೀಲ: ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕರ್ನಾಟಕ ಹೈಕೋರ್ಟ್ ನಿರ್ದೇಶನ

ನ್ಯಾಯಮೂರ್ತಿಗಳತ್ತ ಫೈಲ್‌ ಎಸೆದು ದುರ್ನಡತೆ ತೋರಿದ ವಕೀಲ: ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕರ್ನಾಟಕ ಹೈಕೋರ್ಟ್ ನಿರ್ದೇಶನ

ನ್ಯಾಯಮೂರ್ತಿಗಳತ್ತ ಫೈಲ್‌ ಎಸೆದು ದುರ್ನಡತೆ ತೋರಿದ ವಕೀಲ: ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕರ್ನಾಟಕ ಹೈಕೋರ್ಟ್ ನಿರ್ದೇಶನ




ತಮ್ಮ ಕಕ್ಷಿದಾರರ ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ಆಕ್ರೋಶಗೊಂಡ ವಕೀಲರು ನ್ಯಾಯಮೂರ್ತಿ ವಿರುದ್ಧ ತಿರುಗಿಬಿದ್ದುದಲ್ಲದೆ ಕಡತಗಳನ್ನು ಎಸೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ವಕೀಲರ ವಿರುದ್ಧ ಕ್ರಿಮಿನಲ್ ನಿಂದನೆ ಪ್ರಕರಣ ದಾಖಲಿಸಲು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ.



ಇದು ನ್ಯಾಯಾಂಗದ ಘನತೆಯ ಪ್ರಶ್ನೆಯಾಗಿದ್ದು, ವಕೀಲರ ದುರ್ನಡತೆ ಮತ್ತು ದುರಹಂಕಾರಿ ಕೃತ್ಯವು ನ್ಯಾಯಾಲಯದ ಘನತೆ ಮತ್ತು ಪಾವಿತ್ರ್ಯತೆಗೆ ಚ್ಯುತಿ ಉಂಟು ಮಾಡಿದೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ.



ಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಮಾತುಗಳ ಜೊತೆಗೆ ಕಠಿಣ ಮತ್ತು ಆಕ್ಷೇಪಾರ್ಹದ ಮಾತುಗಳನ್ನು ಆರೋಪಿ ವಕೀಲ ಎಂ. ವೀರಭದ್ರಯ್ಯ ಆಡಿದ್ದು, ಜೊತೆಗೆ ಕಡತಗಳನ್ನೂ ಬಿಸಾಡಿದ್ದಾರೆ ಎಂದು ನ್ಯಾ. ಕೆ.ಎಸ್. ಹೇಮಲೇಖಾ ಅವರು ತಮ್ಮ ಆದೇಶದಲ್ಲಿ ದಾಖಲಿಸಿಕೊಂಡಿದ್ದಾರೆ.



ಆರೋಪಿ ವಕೀಲರನ್ನು ಹಲವು ಬಾರಿ ಗಮನಿಸಿದ್ದು, ಅವರ ದುರಹಂಕಾರ ಪ್ರವೃತ್ತಿಯನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ವಕೀಲರ ಈ ಕೃತ್ಯ ಮತ್ತು ನಡತೆಯಿಂದಾಗಿ ನ್ಯಾಯಾಲಯದ ಘನತೆಗೆ ಚ್ಯುತಿ ಬಂದಿದೆ. ಇದು ನ್ಯಾಯಾಂಗ ಪ್ರಕ್ರಿಯೆ ಅಥವಾ ನ್ಯಾಯದಾನಕ್ಕೆ ಅಡ್ಡಿ ಉಂಟು ಮಾಡಿದೆ. ವಕೀಲರ ಕೃತ್ಯವು ನ್ಯಾಯಾಲಯದ ಸಾಮಾನ್ಯ ಪ್ರಕ್ರಿಯೆ ಮತ್ತು ಕಾರ್ಯವಿಧಾನದಲ್ಲಿ ಹಸ್ತಕ್ಷೇಪ ಮಾಡುವುದರ ಜೊತೆಗೆ ನ್ಯಾಯಾಲಯದ ಘನತೆಗೆ ಹಾನಿ ಮಾಡಿದೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ.


ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ವೀರಭದ್ರಯ್ಯ ಅವರು ಕಡತಗಳನ್ನು ಬಿಸಾಡಿ ದುರ್ನಡತೆ ತೋರಿದ್ದಾರೆ.


ನ್ಯಾಯಪೀಠಕ್ಕೆ ನಿರ್ದೇಶನ ನೀಡುವ ರೀತಿಯಲ್ಲಿ ಪೀಠದ ಬಗ್ಗೆ ಏಕವಚನ ಬಳಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೀಠವು ಮಾತಿನ ಬಗ್ಗೆ ಎಚ್ಚರ ವಹಿಸುವಂತೆ ಎಚ್ಚರಿಸಿದೆ. ಇದಕ್ಕೆ ಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವೀರಭದ್ರಯ್ಯ ಹೇಳಿದ್ದು, ಕಡತ ಎಸೆದು ಕೋರ್ಟ್‌ನಿಂದ ಹೊರ ಹೋಗಿದ್ದಾರೆ.\


ಪ್ರಕರಣದ ಅರ್ಹತೆಗೆ ಸಂಬಂಧಿಸಿದಂತೆ ವಾದ ಮಾಡುವಂತೆ ಹಲವು ಬಾರಿ ನ್ಯಾಯಪೀಠ ಸೂಚಿಸಿದ್ದರೂ, ನ್ಯಾಯಪೀಠದ ಸೂಚನೆಯನ್ನು ಬದಿಗೊತ್ತಿ ಏರುಧ್ವನಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.


ಆದೇಶ ಮಾಡುವಾಗ ಮಧ್ಯಪ್ರವೇಶಿಸಿ, ನಿರಂತರವಾಗಿ ನ್ಯಾಯಾಲಯದ ಪ್ರಕ್ರಿಯೆ ಅಡ್ಡಿಪಡಿಸಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.




Ads on article

Advertise in articles 1

advertising articles 2

Advertise under the article