-->
ಕಾನೂನು ಪದವಿ ಪಡೆದಿದ್ದರೂ ನೀಡದ ಸನದು: ವಕೀಲರ ಪರಿಷತ್‌ ಆದೇಶ ರದ್ದು ಮಾಡಿದ ಕರ್ನಾಟಕ ಹೈಕೋರ್ಟ್‌!

ಕಾನೂನು ಪದವಿ ಪಡೆದಿದ್ದರೂ ನೀಡದ ಸನದು: ವಕೀಲರ ಪರಿಷತ್‌ ಆದೇಶ ರದ್ದು ಮಾಡಿದ ಕರ್ನಾಟಕ ಹೈಕೋರ್ಟ್‌!

ಕಾನೂನು ಪದವಿ ಪಡೆದಿದ್ದರೂ ನೀಡದ ಸನದು: ವಕೀಲರ ಪರಿಷತ್‌ ಆದೇಶ ರದ್ದು ಮಾಡಿದ ಕರ್ನಾಟಕ ಹೈಕೋರ್ಟ್‌!

ಸರಕಾರಿ ಸೇವೆಯಲ್ಲಿದ್ದ ಸಂದರ್ಭದಲ್ಲಿ ತಮ್ಮ ಸೇವಾವಧಿಯಲ್ಲಿ ಕಾನೂನು ಪದವಿ ಪಡೆದಿದ್ದರೂ ಸರಕಾರಿ ನೌಕರರೊಬ್ಬರಿಗೆ ಸನದು ನೀಡಲು ಅನುಮತಿ ನಿರಾಕರಿಸಿದ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಆದೇಶವನ್ನು ರದ್ದು ಮಾಡಿ ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.


ಕಾನೂನು ಪದವಿ ತರಗತಿಗಳಿಗೆ ಹಾಜರಾಗಿರುವ ದಾಖಲೆಗಳನ್ನು ಹಾಜರುಪಡಿಸಿಲ್ಲ ಎಂಬ ಕಾರಣಕ್ಕೆ ಅವರ ವಕೀಲಿಕೆ ಸನದು ನೋಂದಣಿ ನಿರಾಕರಿಸಿದ್ದ ರಾಜ್ಯ ವಕೀಲರ ಪರಿಷತ್ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.


ಬೀದರ್ ನ ಸಿವಿಲ್ ನ್ಯಾಯಾಲಯದ ನಿವೃತ್ತ ಸಹಾಯಕ ರಿಜಿಸ್ಟರ್ ಶೆಲ್ಹನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ ಅಶೋಕ್ ಎಸ್ ಕೀಳಾಗಿ ಅವರಿಂದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.


2018ರಲ್ಲಿ ನಿವೃತ್ತರಾದ ನಂತರ ವಕೀಲರಾಗಿ ನೋಂದಾಯಿಸಲು ಶೆಲ್ಹನ್ ರಾಜ್ಯ ವಕೀಲರ ಪರಿಷತ್ತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಶೆಲ್ಹನ್ ಅವರು ಪದವಿ ಪ್ರಮಾಣ ಪತ್ರ ಪಡೆಯಲು ಅರ್ಹರಲ್ಲ ಎಂದು ಕಾರಣ ನೀಡಿ ವಕೀಲರ ಪರಿಷತ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು

ಈ ಆದೇಶವನ್ನು ಪ್ರಶ್ನಿಸಿ ಫಿಲಂ ಹೈಕೋರ್ಟ್ ಮೊರೆ ಹೋಗಿದ್ದರು.


ಅರ್ಜಿದಾರರ ಪರ ಎಚ್ ಎಲ್ ಪ್ರದೀಪ್ ಕುಮಾರ್, ರಾಜ್ಯ ವಕೀಲರ ಪರಿಷತ್ ಪರ ಜಿ ನಟರಾಜ್ ಮತ್ತು ಭಾರತೀಯ ವಕೀಲರ ಪರಿಷತ್ ಪರವಾಗಿ ಶ್ರೀಧರ್ ಪ್ರಭು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.


ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅರ್ಜಿದಾರರಿಗೆ ತಾತ್ಕಾಲಿಕ ಪದವಿ ಹಾಗೂ ಘಟಿಕೋತ್ಸವದ ಪ್ರಮಾಣ ಪತ್ರವನ್ನು ನೀಡಿರುವಾಗ, ಅರ್ಜಿದಾರರು ಕಾನೂನು ಪದವಿ ಪ್ರಮಾಣ ಪತ್ರ ಪಡೆಯಲು ಅರ್ಹರಲ್ಲ ಎಂದು ಹೇಳಲಾಗದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.ಅರ್ಜಿದಾರರು ಟೈಪಿಸ್ಟ್ ಆಗಿ ನ್ಯಾಯಾಂಗ ಇಲಾಖೆಗೆ ಸೇರಿದ್ದರು ಮತ್ತು ಸೇವಾ ಅವಧಿಯಲ್ಲಿ ಕಾನೂನು ಪದವಿಯನ್ನು ಪೂರೈಸಿದ್ದರು. ಇವರಿಗೆ ಗುಲ್ಬರ್ಗ ವಿಶ್ವವಿದ್ಯಾನಿಲಯದಿಂದ ಪದವಿ ಮತ್ತು ಘಟಿಕೋತ್ಸವದ ಪ್ರಮಾಣ ಪತ್ರ ಪ್ರಧಾನ ಮಾಡಲಾಗಿತ್ತು.


ನಿವೃತ್ತಿಯ ನಂತರ ಶೆಲ್ಹನ್ ಅವರು ವಕೀಲರಾಗಿ ನೋಂದಣಿ ಮಾಡಲು ಕೆಎಸ್‌ಬಿಸಿಗೆ ಅರ್ಜಿ ಹಾಕಿದಾಗ, ಕಾನೂನು ಪದವಿ ತರಗತಿಗಳಿಗೆ ಹಾಜರಾಗಿರುವ ದಾಖಲೆಗಳನ್ನು ಹಾಜರುಪಡಿಸಿಲ್ಲ ಎಂಬ ಕಾರಣಕ್ಕಾಗಿ ವಕೀಲಿಕೆ ಸನದು ನೋಂದಣಿ ನಿರಾಕರಿಸಿ ರಾಜ್ಯ ವಕೀಲರ ಪರಿಷತ್ತು ಆದೇಶ ಹೊರಡಿಸಿತು.


ಅರ್ಜಿದಾರಯಿಂದ ಹೊಸದಾಗಿ ನೋಂದಣಿಗೆ ಅರ್ಜಿ ಪಡೆದು ಈ ಪ್ರಕ್ರಿಯೆಯನ್ನು ತೊರೆತವಾಗಿ ಪೂರ್ಣಗೊಳಿಸಿ ಎಂದು ಕರ್ನಾಟಕ ಹೈಕೋರ್ಟ್ ತನ್ನ ಆದೇಶದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ನಿರ್ದೇಶನ ನೀಡಿದೆAds on article

Advertise in articles 1

advertising articles 2

Advertise under the article