-->
ಪ್ರಕರಣ ದಾಖಲಿಸುವ ದಿನ: ಇ-ಫೈಲಿಂಗ್ ದಿನವನ್ನೇ ಫೈಲಿಂಗ್ ದಿನವಾಗಿ ಪರಿಗಣಿಸಬೇಕು- ಮದ್ರಾಸ್ ಹೈಕೋರ್ಟ್‌

ಪ್ರಕರಣ ದಾಖಲಿಸುವ ದಿನ: ಇ-ಫೈಲಿಂಗ್ ದಿನವನ್ನೇ ಫೈಲಿಂಗ್ ದಿನವಾಗಿ ಪರಿಗಣಿಸಬೇಕು- ಮದ್ರಾಸ್ ಹೈಕೋರ್ಟ್‌

ಪ್ರಕರಣ ದಾಖಲಿಸುವ ದಿನ: ಇ-ಫೈಲಿಂಗ್ ದಿನವನ್ನೇ ಫೈಲಿಂಗ್ ದಿನವಾಗಿ ಪರಿಗಣಿಸಬೇಕು- ಮದ್ರಾಸ್ ಹೈಕೋರ್ಟ್‌

ಈಗಿನ ಅತ್ಯಾಧುನಿಕ ಡಿಜಿಟಲ್ ಯುಗದಲ್ಲಿ, ಚಾರ್ಜ್‌ಶೀಠ್ ಯಾ ಅಂತಿಮ ವರದಿಯ ಇ-ಫೈಲಿಂಗ್ ದಿನವನ್ನೇ ಕಡತದ ಫೈಲಿಂಗ್ ದಿನಾಂಕ ಎಂದು ಪರಿಗಣಿಸಬೇಕು ಎಂದು ಮದ್ರಾಸ್ ಹೈಕೋರ್ಟ್‌ ಸ್ಪಷ್ಟಪಡಿಸಿದೆ.ಇದೇ ವೇಳೆ, ಭೌತಿಕ ಕಡತ (Hard Copy) ಸಲ್ಲಿಕೆ ಆಗುವವರೆಗೂ ನ್ಯಾಯಪೀಠಕ್ಕೆ ಪ್ರಕರಣದ ಕಡತದ ಕಾಗದದ ಪ್ರತಿ ಲಭ್ಯ ಆಗುವವರೆಗೆ ಇದನ್ನು ಕಡತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗದು ಎಂದು ನ್ಯಾಯಪೀಠ ಹೇಳಿದೆ.ಸದ್ರಿ ಪ್ರಕರಣದಲ್ಲಿ ಅಂತಿಮ ವರದಿ/ ಚಾರ್ಜ್‌ ಶೀಟ್ ಸಲ್ಲಿಕೆಯ ಕಾಲಮಿತಿ ಹಿನ್ನೆಲೆಯಲ್ಲಿ ಅರ್ಜಿದಾರರು ಶಾಸನಬದ್ಧ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಚಾರ್ಜ್‌ಶೀಟ್‌ ಈಗಾಗಲೇ ಡಿಜಿಟಲ್ ರೂಪದಲ್ಲಿ ಸಲ್ಲಿಕೆಯಾಗಿದೆ ಎಂಬ ಕಾರಣದಿಂದ ವಿಚಾರಣಾ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು.ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಮದ್ರಾಸ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಎನ್. ಆನಂದ್ ವೆಂಕಟೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದ್ದು, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ.ಹಾರ್ಡ್‌ ಕಾಪಿ ನ್ಯಾಯಾಲಯಕ್ಕೆ ಆಗಮಿಸಿದ ದಿನವನ್ನು ಫೈಲಿಂಗ್ ದಿನವೆಂದು ಪರಿಗಣಿಸಲು ಸಾಧ್ಯವಿಲ್ಲ. ಎಲ್ಲ ಪ್ರಕರಣಗಳಲ್ಲೂ ಇ-ಫೈಲಿಂಗ್ ದಿನವನ್ನೇ ನೈಜ ಫೈಲಿಂಗ್ ದಿನ ಎಂದು ಪರಿಗಣಿಸಬೇಕಾಗಿದೆ. ಮತ್ತು ಭೌತಿಕ ಪ್ರತಿಗಳು ಲಭ್ಯವಾದ ದಿನವನ್ನು ಫೈಲಿಂಗ್‌ಗೆ ಅಳವಡಿಸಿದ ದಿನ ಎಂದು ಅಧಿಕೃತ ವೆಬ್‌ಸೈಟ್ / ಇ-ಕೋರ್ಟ್ಸ್‌ನಲ್ಲಿ ಪ್ರಕಟಿಸಬಹುದಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.ಭವಿಷ್ಯದಲ್ಲಿ ಈ ವಿಷಯದಲ್ಲಿ ಉಂಟಾಗಬಹುದಾದ ಗೊಂದಲವನ್ನು ನಿವಾರಿಸಲು ಈ ಪದ್ಧತಿಯನ್ನೇ ಏಕರೂಪದಲ್ಲಿ ಅಳವಡಿಸಿಕೊಳ್ಳಲು ತನ್ನ ಅಧೀನದಲ್ಲಿ ಇರುವ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ಈ ತೀರ್ಪು ಮೂಲಕ ನಿರ್ದೇಶನ ನೀಡಿದೆ.ಸದ್ರಿ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ನೀಡಿದ ವರದಿಯನ್ನು ನ್ಯಾಯಪೀಠ ಗಮನಿಸಿತು. ಎಲ್ಲಾ ಸಾಮಗ್ರಿಗಳೊಂದಿಗೆ ಅಂತಿಮ ವರದಿಯನ್ನು 13-11-2023 ರಂದು ಇ-ಫೈಲಿಂಗ್ ಪ್ರಕಾರದಲ್ಲಿ ಅಭಿಯೋಜನೆ ಸಲ್ಲಿಸಿದೆ. ಆದರೆ, ಭೌತಿಕ ಕಡತ 15-11-2023ರಂದು ಸಲ್ಲಿಸಲಾಗಿತ್ತು.


ನ್ಯಾಯಾಲಯದಲ್ಲಿ ನೈಜ ಕಡತ ಲಭ್ಯವಾಗಿದ್ದು ಅದೇ ದಿನವಾದ ಕಾರಣ 15-11-2023ರಂದೇ ಫೈಲಿಂಗ್ ನ್ನು ಕಡತಕ್ಕೆ ತೆಗೆದುಕೊಂಡ ದಿನ ಎಂದು ನಮೂದಿಸಲಾಗಿತ್ತು. ಆದರೆ, ಆರೋಪಿ ಎತ್ತಿದ ಅನುಮಾನಗಳು ಈ ಮೂಲಕ ಆಧಾರರಹಿತವಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಪ್ರಕರಣ: ವರುಣ್ Vs ತಮಿಳುನಾಡು ರಾಜ್ಯ

ಮದ್ರಾಸ್ ಹೈಕೋರ್ಟ್‌, Dated 01-02-2024

Ads on article

Advertise in articles 1

advertising articles 2

Advertise under the article