-->
ವಕೀಲರು ಅಸ್ವಸ್ಥರಾಗಿದ್ದರೂ ವಾಯ್ದೆ ನೀಡದ ನ್ಯಾಯಾಧೀಶರು: ನ್ಯಾಯಮೂರ್ತಿಗಳ ವಿರುದ್ಧ ಹೈಕೋರ್ಟ್ ಸಿಜೆಗೆ ವಕೀಲರ ಸಂಘದ ಪತ್ರ

ವಕೀಲರು ಅಸ್ವಸ್ಥರಾಗಿದ್ದರೂ ವಾಯ್ದೆ ನೀಡದ ನ್ಯಾಯಾಧೀಶರು: ನ್ಯಾಯಮೂರ್ತಿಗಳ ವಿರುದ್ಧ ಹೈಕೋರ್ಟ್ ಸಿಜೆಗೆ ವಕೀಲರ ಸಂಘದ ಪತ್ರ

ವಕೀಲರು ಅಸ್ವಸ್ಥರಾಗಿದ್ದರೂ ವಾಯ್ದೆ ನೀಡದ ನ್ಯಾಯಾಧೀಶರು: ನ್ಯಾಯಮೂರ್ತಿಗಳ ವಿರುದ್ಧ ಹೈಕೋರ್ಟ್ ಸಿಜೆಗೆ ವಕೀಲರ ಸಂಘದ ಪತ್ರ





ಪ್ರಕರಣವೊಂದರಲ್ಲಿ ವಾದಿಯವರ ಪರ ವಾದ ಮಂಡಿಸಬೇಕಿದ್ದ ವಕೀಲರು ಅನಾರೋಗ್ಯಕ್ಕೆ ತುತ್ತಾಗಿದ್ದು, ಇದನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರೂ ಪ್ರಕರಣವನ್ನು ಮುಂದೂಡಲು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ನಿರಾಕರಿಸಿದ್ದು ವಕೀಲರ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.


ವಾಯ್ದೆ ನೀಡಲು ನಿರಾಕರಿಸಿದ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎ ಬದ್ರುದ್ದೀನ್ ಅವರ ವರ್ತನೆಗೆ ಕೇರಳ ಹೈಕೋರ್ಟ್ ವಕೀಲರ ಸಂಘ ಕೆಎಚ್‌ಸಿಎ ಅಸಮಾಧಾನ ವ್ಯಕ್ತಪಡಿಸಿದ್ದು ಈ ಬಗ್ಗೆ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಜೆ ದೇಸಾಯಿ ಅವರಿಗೆ ಪತ್ರ ಬರೆದಿದೆ.


ತಮ್ಮ ಬೆನ್ನು ಹುರಿಗೆ ಗಂಭೀರ ಗಾಯವಾಗಿದ್ದರೂ ಪಕೀಲ ಜಯಕುಮಾರ್ ನಂಬುವುದು ಟಿವಿ ಅವರು ವಾದಿಸುತ್ತಿದ್ದ ಪ್ರಕರಣವನ್ನು ವಾಯಿದೆ ಮಾಡಲು ಅಥವಾ ಮುಂದೂಡಲು ನ್ಯಾಯಮೂರ್ತಿ ಬದ್ರುದ್ದೀನ್ ಅವರು ನಿರಾಕರಿಸಿದ್ದರು.


ನ್ಯಾಯಮೂರ್ತಿಯವರ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿವಿಧ ವಕೀಲರು, ನ್ಯಾಯಮೂರ್ತಿಗಳ ನಡೆ ವಕೀಲರ ಸಮುದಾಯಕ್ಕೆ ಮಾಡಿದ ಅಪಮಾನಕರ ಮತ್ತು ಅವರು ಸಂವೇದನಾ ರಹಿತವಾಗಿ ವರ್ತಿಸಿದ್ದಾರೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.


ವಕೀಲರ ಸಮುದಾಯ ಮತ್ತು ನ್ಯಾಯಾಂಗ ಅಧಿಕಾರಿಗಳು ನ್ಯಾಯಾಂಗದ ಎರಡು ಕಣ್ಣುಗಳಿದ್ದಂತೆ. ಎರಡು ಸಮುದಾಯವೂ ಸಭ್ಯತೆಯನ್ನು ಮೀರಿದ ವರ್ತಿಸಬಾರದು. ಇಂತಹ ಘಟನೆಗಳನ್ನು ನಿಗ್ರಹಿಸುವುದಕ್ಕೆ ನ್ಯಾಯಾಲಯದ ಎಲ್ಲಾ ಕಲಾಪಗಳನ್ನು ಕಡ್ಡಾಯವಾಗಿ ವಿಡಿಯೋ ರೆಕಾರ್ಡಿಂಗ್ ಮಾಡುವಂತೆ ಕೇರಳ ಹೈಕೋರ್ಟ್ ವಕೀಲರ ಸಂಘ ತಮ್ಮ ಪತ್ರದಲ್ಲಿ ಮುಖ್ಯ ನ್ಯಾಯಮೂರ್ತಿಯವರನ್ನು ಒತ್ತಾಯಿಸಿದೆ.


ಅದು ಸಾಧ್ಯವಾಗುವವರೆಗೆ ತಾವೇ ವಿಡಿಯೋ ಚಿತ್ರೀಕರಣ ಮಾಡುವಂತೆ ತನ್ನ ಸದಸ್ಯರಿಗೆ ಸಂಘ ಸಲಹೆ ನೀಡಿದೆ. ಈ ಘಟನೆಯಿಂದ ವಕೀಲರ ಸಮುದಾಯ ತೀವ್ರ ಅಸಮಾಧಾನಗೊಂಡಿದೆ ಮತ್ತು ನ್ಯಾಯಾಂಗ ಅಧಿಕಾರಿಗಳ ವರ್ತನೆಯ ಬಗ್ಗೆ ಬೇಸರಗೊಂಡಿದೆ ಎಂದು ವಕೀಲರ ಸಂಘ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಗಮನ ಸೆಳೆದಿದೆ.



Ads on article

Advertise in articles 1

advertising articles 2

Advertise under the article