ಮಹಿಳಾ ಪೊಲೀಸ್ ಅಧಿಕಾರಿಗೆ "ಡಾರ್ಲಿಂಗ್" ಎಂದು ಕರೆದಾತನಿಗೆ 3 ತಿಂಗಳ ಜೈಲು: ಕೊಲ್ಕತ್ತಾ ಹೈಕೋರ್ಟ್
ಮಹಿಳಾ ಪೊಲೀಸ್ ಅಧಿಕಾರಿಗೆ ಡಾರ್ಲಿಂಗ್ ಎಂದು ಕರೆದಾತನಿಗೆ ಮೂರು ತಿಂಗಳ ಜೈಲು: ಕೊಲ್ಕತ್ತಾ ಹೈಕೋರ್ಟ್
ಡಾರ್ಲಿಂಗ್ ಎನ್ನುವುದು ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧ. ಕಾಯ್ದೆಯ ಸೆಕ್ಷನ್ 354A(1)(iv) ಅಡಿ ಈ ಪದ ಬಳಕೆಯು ಲೈಂಗಿಕ ಕಿರುಕುಳ ನೀಡಿದ ಅಪರಾಧ ವಾಗಿದೆ ಎಂದು ಕೊಲ್ಕೊತ್ತಾ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾ. ಜಯ್ ಸೇನ್ ಗುಪ್ತಾ ಅವರಿದ್ದ ಕೊಲ್ಕತ್ತಾ ಹೈಕೋರ್ಟ್‌ನ ಪೋರ್ಟ್ ಬ್ಲೇರ್ ವಿಭಾಗೀಯ ಪೀಠದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಅಪರಿಚಿತ ಮಹಿಳೆಯನ್ನು ಡಾರ್ಲಿಂಗ್ ಎಂದು ಕರೆಯುವಂತಿಲ್ಲ. ಅಪರಿಚಿತ ಮಹಿಳೆಗೆ ಲೈಂಗಿಕ ಬಣ್ಣದ ಪದ ಬಳಕೆ ಒಪ್ಪತಕ್ಕದ್ದಲ್ಲ.ಅದು ಕ್ರಿಮಿನಲ್ ಅಪರಾಧ. ಸೆಕ್ಷನ್ 354A ಮತ್ತು 509 ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ತೀರ್ಪಿನಲ್ಲಿ ಹೇಳಿದೆ.
ಸದ್ರಿ ಪ್ರಕರಣದಲ್ಲಿ ಜನಕ್ ರಾಮ್ ಎಂಬಾತ ಮಹಿಳಾ ಪೊಲೀಸ್‌ಗೆ ಡಾರ್ಲಿಂಗ್ ಎಂಬ ಪದ ಬಳಕೆ ಮಾಡಿದ್ದ. "ಕ್ಯಾ ಡಾರ್ಲಿಂಗ್, ಚಲನ್ ಕರ್ನೇ ಆಯಿ ಹೈ ಕ್ಯಾ?" (ಏನ್ ಡಾರ್ಲಿಂಗ್, ದಂಡ ವಿಧಿಸಲು ಬಂದಿದ್ದಿಯಾ..?) ಎಂದು ಹೇಳಿದ್ದ.
2023ರ ನವೆಂಬರ್ ತಿಂಗಳಲ್ಲಿ ದುರ್ಗಾ ಪೂಜೆಯ ಪ್ರಯುಕ್ತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲ ಮಹಿಳಾ ಪೊಲೀಸರು ಲಾಲ್ ಟಿರ್ಕಿ ಎಂಬಲ್ಲಿ ಕರ್ತವ್ಯ ನಿರತರಾಗಿದ್ದರು. ಈ ಸಂದರ್ಭದಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಜನಕ್ ರಾಮ್ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.
ಇದನ್ನು ವಿಚಾರಣೆ ನಡೆಸಿದ್ದ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ ಮೂರು ತಿಂಗಳ ಜೈಲು ಮತ್ತು ತಲಾ ರೂ. 500ಗಳ ದಂಡವನ್ನು ವಿಧಿಸಿತ್ತು.
ಈ ಬಗ್ಗೆ ಆತ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿಯನ್ನೂ ಮಾಡಿದ್ದ. ಆದರೆ, ಸೆಷನ್ಸ್ ನ್ಯಾಯಾಲಯ ಆತನ ಮನವಿಯನ್ನು ತಿರಸ್ಕರಿಸಿ ಶಿಕ್ಷೆಯನ್ನು ಖಾಯಂಗೊಳಿಸಿತ್ತು.