ವಿವಾದಿತ ತೀರ್ಪುಗಳ ಸರದಾರ ನ್ಯಾ. ಅಭಿಜಿತ್ ಜಡ್ಜ್ ಹುದ್ದೆಗೆ ರಾಜೀನಾಮೆ: ರಾಜಕೀಯ ಪ್ರವೇಶ ಸಾಧ್ಯತೆ
Sunday, March 3, 2024
ವಿವಾದಿತ ತೀರ್ಪುಗಳ ಸರದಾರ ನ್ಯಾ. ಅಭಿಜಿತ್ ಜಡ್ಜ್ ಹುದ್ದೆಗೆ ರಾಜೀನಾಮೆ: ರಾಜಕೀಯ ಪ್ರವೇಶ ಸಾಧ್ಯತೆ
ಹಲವು ವಿವಾದಾತ್ಮಕ ತೀರ್ಪುಗಳ ಮೂಲಕ ದೇಶದ ನ್ಯಾಯಾಂಗ ಕ್ಷೇತ್ರದಲ್ಲಿ ಸುದ್ದಿಗೆ ಗ್ರಾಸವಾಗಿದ್ದ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕೊಲ್ಕೊತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿರುವ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಮಂಗಳವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲಿದ್ದಾರೆ.
ಸರ್ಕಾರಿ ಅನುದಾನಿತ ಶಾಲೆಗಳ ಸಿಬ್ಬಂದಿ ನೇಮಕಾತಿ ಅವ್ಯವಹಾರದ ತನಿಖೆ ಸಡೆಸುವಂತೆ ಇ.ಡಿ. ಮತ್ತು ಸಿಬಿಐಗೆ ನಿರ್ದೇಶನ ನೀಡಿದ್ದರು.
ರಾಜೀನಾಮೆ ಬಳಿಕ ರಾಜಕೀಯ ಪ್ರವೇಶ ಮಾಡಲಿದ್ದಾರೆಯೇ..? ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಯಾವ ಸ್ಪಷ್ಟ ಉತ್ತರವನ್ನೂ ನೀಡಲಿಲ್ಲ...