-->
ಹಲವು ಬಾರಿ ಚೆಕ್ ಪ್ರಸ್ತುತಪಡಿಸಬಹುದೇ..? ಚೆಕ್ ಅಮಾನ್ಯ ಪ್ರಕರಣದ ವ್ಯಾಜ್ಯ ಕಾರಣ ಯಾವುದು?

ಹಲವು ಬಾರಿ ಚೆಕ್ ಪ್ರಸ್ತುತಪಡಿಸಬಹುದೇ..? ಚೆಕ್ ಅಮಾನ್ಯ ಪ್ರಕರಣದ ವ್ಯಾಜ್ಯ ಕಾರಣ ಯಾವುದು?

ಹಲವು ಬಾರಿ ಚೆಕ್ ಪ್ರಸ್ತುತಪಡಿಸಬಹುದೇ..? ಚೆಕ್ ಅಮಾನ್ಯ ಪ್ರಕರಣದ ವ್ಯಾಜ್ಯ ಕಾರಣ ಯಾವುದು?ಚೆಕ್‌ನ ಸಿಂಧುತ್ವ ಅವಧಿಯಲ್ಲಿ ಚೆಕ್‌ನ್ನು ಹಲವು ಬಾರಿ ನಗದೀಕರಣಕ್ಕೆ ಪ್ರಸ್ತುತಪಡಿಸಬಹುದು. ಒಂದು ವೇಳೆ, ಚೆಕ್ ಅಮಾನ್ಯಗೊಂಡರೆ, ಕೊನೆಯ ಬಾರಿ ಅಮಾನ್ಯಗೊಂಡ ಚೆಕ್ ಅಮಾನ್ಯ ಹಿಂಬರಹವು ಚೆಕ್ ಅಮಾನ್ಯ ಪ್ರಕರಣದ ವ್ಯಾಜ್ಯ ಕಾರಣವಾಗುತ್ತದೆ.


ಈ ಬಗ್ಗೆ ಇತ್ತೀಚಿಗೆ ಚತ್ತೀಸಘಡ ಹೈಕೋರ್ಟ್ ತೀರ್ಪು ನೀಡಿದ್ದು, ಅಂತಿಮವಾಗಿ ಪ್ರಸ್ತುತಪಡಿಸಿರುವ ಚೆಕ್ ಅಮಾನ್ಯದ ಹಿಂಬರವೇ ಎನ್‌.ಐ. ಆಕ್ಟ್‌ ಸೆಕ್ಷನ್ 138 ಪ್ರಕಾರ ದಾಖಲಾಗುವ ಪ್ರಕರಣಕ್ಕೆ ವ್ಯಾಜ್ಯ ಕಾರಣ (Cause of Action) ವಾಗುತ್ತದೆ ಎಂದು ಹೇಳಿದೆ.


ಚತ್ತೀಸಘಡ ಹೈಕೋರ್ಟ್‌ನ ನ್ಯಾ. ಗೌತಮ್ ಬಾಧುರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ. ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

Ads on article

Advertise in articles 1

advertising articles 2

Advertise under the article