ಕೋರ್ಟ್ ಫೀ ಪಾವತಿಸಿಲ್ಲ ಎಂಬ ಕಾರಣಕ್ಕೆ ದಾವೆಯನ್ನು ವಜಾ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್
ಕೋರ್ಟ್ ಫೀ ಪಾವತಿಸಿಲ್ಲ ಎಂಬ ಕಾರಣಕ್ಕೆ ದಾವೆಯನ್ನು ವಜಾ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್
ದಾವೆ ಸಲ್ಲಿಸುವ ವೇಳೆ ನ್ಯಾಯಾಲಯ ಶುಲ್ಕ (ಕೋರ್ಟ್ ಫೀ) ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯವು ಆ ದಾವೆಯನ್ನು ವಜಾ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
\ದಾವೆಯನ್ನು ಸಲ್ಲಿಸುವ ವೇಳೆ ಕೋರ್ಟ್ ಫೀ ಪಾವತಿ ಆಗದೇ ಇದ್ದರೆ, ಈ ಬಗ್ಗೆ ವಾದಿಯವರಿಗೆ ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠ ಹೇಳಿದೆ.
ಒಂದು ವೇಳೆ, ಕೋರ್ಟ್ ನಿರ್ದೇಶನವನ್ನು ವಾದಿ ಪಾಲಿಸಲು ತಪ್ಪಿದ್ದಲ್ಲಿ ವಾದಪತ್ರವನ್ನು ಸಿವಿಲ್ ಪ್ರಕ್ರಿಯಾ ಸಂಹಿತೆಯ ಆದೇಶ VII ನಿಯಮ 11(b) ಅಡಿ ತಿರಸ್ಕರಿಸಬಹುದು ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ: ಕೆ.ಎಚ್. ಮಲ್ಲಿಕಾರ್ಜುನ Vs ಶ್ರೀಮತಿ ಮಹಾಬುನ್ನಿ ಮತ್ತಿತರರು
ಕರ್ನಾಟಕ ಹೈಕೋರ್ಟ್ (ಧಾರವಾಡ ಪೀಠ) W.P. 100870/2024 Dated 14-02-2024
suit can not be dismissed for non-payment of court fee. Proper course is to calculate deficit court fee and call upon the plaintiff to pay the same. failing which to reject the plaint under order VII Rule 11(b) of CPC
-Justice Suraj Govindaraj, Honourable Karnataka High Court