-->
ಅಪಾರ್ಟ್‌ಮೆಂಟ್ ಅಸೋಸಿಯೇಷನ್ ನೋಂದಣಿ ಯಾವ ಕಾಯ್ದೆಯಡಿ ಮಾಡಬೇಕು?

ಅಪಾರ್ಟ್‌ಮೆಂಟ್ ಅಸೋಸಿಯೇಷನ್ ನೋಂದಣಿ ಯಾವ ಕಾಯ್ದೆಯಡಿ ಮಾಡಬೇಕು?

ಅಪಾರ್ಟ್‌ಮೆಂಟ್ ಅಸೋಸಿಯೇಷನ್ ನೋಂದಣಿ ಯಾವ ಕಾಯ್ದೆಯಡಿ ಮಾಡಬೇಕು?





ಅಪಾರ್ಟ್ಮೆಂಟ್ ನೋಂದಣಿ ಯನ್ನು ಓನರ್ ಶಿಪ್ ಕಾಯ್ದೆ ಅಡಿಯಲ್ಲಿ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.


ಕೇವಲ ವಸತಿ ಫ್ಲಾಟ್ ಗಳಷ್ಟೇ ಇರುವ ನಿರ್ವಹಣೆಯನ್ನು ನೋಡಿಕೊಳ್ಳಲು ಮಾಲೀಕರು ಕರ್ನಾಟಕ ಅಪಾರ್ಟ್ಮೆಂಟ್ ಓನರ್ಶಿಪ್ ಕಾಯ್ದೆ 1972 ಬದಲಾಗಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಅಡಿಯಲ್ಲಿ ಅಲ್ಲ ಎಂದು ಹೈಕೋರ್ಟ್ ನ್ಯಾಯ ಪೀಠ ಸ್ಪಷ್ಟಪಡಿಸಿದೆ.


ಕೆಂಗೇರಿ ಬಳಿಯ ಡಿಎಸ್ ಮ್ಯಾಕ್ಸ್ ಸ್ಟಾರ್ ಮಾಲೀಕರಾದ ಅರುಣ್ ಕುಮಾರ್ ಮತ್ತು ಇತರರು ಸಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗಡೆ ಅವರಿಂದ ಏಕ ಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಅರ್ಜಿದಾರರಿಗೆ ಸಂಘ ನೋಂದಾವಣೆ ಮಾಡಿಕೊಳ್ಳಲು ಪ್ರತಿವಾದಿ ಬಿಲ್ಡರ್ ಹಾಗೂ ಇನ್ನಿತರರು ಸಹಕಾರ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ ಹಾಗೂ ಸೊಸೈಟಿ ಕಾಯ್ದೆ ಅಡಿ ಸಂಘದ ನೋಂದಣಿಗೆ ಸಹಕಾರ ಸಂಘಗಳ ರಿಜಿಸ್ಟರ್ ನೀಡಿದ ಅನುಮತಿಯನ್ನು ಅದು ರದ್ದುಗೊಳಿಸಿದೆ.


ಅರ್ಜಿದಾರರು ಹೇಳಿರುವಂತೆ ಇದು ವಸತಿ ಸಂಕೀರ್ಣದ ಯೋಜನೆಯಾಗಿದ್ದು ಇದರಲ್ಲಿ ಯಾವುದೇ ವಾಣಿಜ್ಯ ಉದ್ದೇಶದ ಜಾಗವಿಲ್ಲ ಖರೀದಿದಾರರ ಪರವಾಗಿ ನೀಡಲಾಗಿರುವ ಕ್ರಯ ಪತ್ರ ಸೇಲ್ ಡಿಡಿಗಳಲ್ಲೂ ಅವುಗಳು ಕರ್ನಾಟಕ ಅಪಾರ್ಟ್ಮೆಂಟ್ ಓನರ್ ಶಿಪ್ ಕಾಯ್ದೆ 1972 ನೋಂದಣಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಫ್ಲ್ಯಾಟ್‌ಗಳ ನಿರ್ವಹಣೆ ಕೈಗೊಳ್ಳಲು ಅರ್ಜಿದಾರರು ಹಾಗೂ ಉದ್ದೇಶತ ಸಂಘದ ಸದಸ್ಯರು ಎಸೋಸಿಯೇಷನ್ ಅನ್ನು ಕರ್ನಾಟಕ ಅಪಾರ್ಟ್ಮೆಂಟ್ ಓನರ್ಶಿಪ್ ಆಕ್ಟ್ ಪ್ರಕಾರವೇ ನೊಂದಣಿ ಮಾಡಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.


ಈ ಪ್ರಕರಣದಲ್ಲಿ ವಾಣಿಜ್ಯ ಉದ್ದೇಶದ ಜಾಗವಿಲ್ಲ ಎಲ್ಲಾ ವಸತಿ ಫ್ಲ್ಯಾಟ್ಗಳೇ ಇರುವುದರಿಂದ ಸೊಸೈಟಿ ಕಾಯಿದೆ ಅನ್ವಯಿಸುವುದಿಲ್ಲ ಎಂದು ನ್ಯಾಯ ಪೀಠ ತನ್ನ ಆದೇಶದಲ್ಲಿ ಹೇಳಿದೆ

Ads on article

Advertise in articles 1

advertising articles 2

Advertise under the article