ಭಾನುವಾರ, ಶನಿವಾರದ ರಜೆ ದಿನಗಳಲ್ಲೂ ರಿಜಿಸ್ಟ್ರಾರ್ ಕಚೇರಿ ಕಾರ್ಯನಿರ್ವಹಣೆ: ಸರ್ಕಾರ ಆದೇಶ
ಭಾನುವಾರ, ಶನಿವಾರದ ರಜೆ ದಿನಗಳಲ್ಲೂ ರಿಜಿಸ್ಟ್ರಾರ್ ಕಚೇರಿ ಕಾರ್ಯನಿರ್ವಹಣೆ: ಸರ್ಕಾರ ಆದೇಶ
ಉಪ ನೋಂದಣಿ ಕಚೇರಿಗಳು ಇನ್ನು ಮುಂದೆ ಎಲ್ಲ ಶನಿವಾರಗಳಲ್ಲೂ ಕಾರ್ಯನಿರ್ವಹಿಸಲಿದೆ. ಶನಿವಾರದ ರಜೆ ದಿನಗಳಲ್ಲೂ ಕರ್ತವ್ಯ ನಿರ್ವಹಿಸಬೇಕು ಎಂದು ಸಿಬ್ಬಂದಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಜಿಲ್ಲೆಯ ಚಾಮರಾಜಪೇಟೆ, ಇಂದಿರಾ ನಗರ, ರಾಜಾಜಿನಗರ, ಯಲಹಂಕ ಮತ್ತು ಜೆ.ಪಿ.ನಗರದ ಉಪ ನೋಂದಣಿ ಕಚೇರಿಗಳು ತಿಂಗಳ ಎಲ್ಲ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ.
ಇನ್ನು ಮುಂದೆ, ಈ ಕಚೇರಿಗಳಲ್ಲಿ ತಿಂಗಳ ಎಲ್ಲ ಭಾನುವಾರಗಳು, ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಈ ಕಚೇರಿಗಳಲ್ಲಿ ನೋಂದಾವಣೆ ಕಾರ್ಯ ನಡೆಯಲಿದೆ ಎಂದು ಮುದ್ರಾಂಕ ಇಲಾಖೆ ತಿಳಿಸಿದೆ.
ಆದರೆ, ರಜೆಯ ದಿನಗಳಲ್ಲೂ ಕೆಲಸ ನಿರ್ವಹಿಸಲು ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಜನರ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕರಿಗೆ ಅನುಕೂಲ ಒದಗಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.