-->
ಒಂದೇ ಊರಿನಲ್ಲಿ ಒಂದೇ ರೀತಿಯ ಸಹಕಾರ ಸಂಘದ ನೋಂದಣಿ: ಹೈಕೋರ್ಟ್ ಮಹತ್ವದ ತೀರ್ಪು

ಒಂದೇ ಊರಿನಲ್ಲಿ ಒಂದೇ ರೀತಿಯ ಸಹಕಾರ ಸಂಘದ ನೋಂದಣಿ: ಹೈಕೋರ್ಟ್ ಮಹತ್ವದ ತೀರ್ಪು

ಒಂದೇ ಊರಿನಲ್ಲಿ ಒಂದೇ ರೀತಿಯ ಸಹಕಾರ ಸಂಘದ ನೋಂದಣಿ: ಹೈಕೋರ್ಟ್ ಮಹತ್ವದ ತೀರ್ಪು


ಒಂದು ಪ್ರದೇಶದಲ್ಲಿ ಸಹಕಾರ ಸಂಘ ಅಸ್ತಿತ್ವದಲ್ಲಿ ಇದೆ ಎಂಬ ಕಾರಣಕ್ಕೆ ಅದೇ ಪ್ರದೇಶದಲ್ಲಿ ಅದೇ ರೀತಿಯ ಮತ್ತೊಂದು ಸಹಕಾರ ಸಂಘದ ನೋಂದಣಿಯನ್ನು ನಿರಾಕರಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ನ್ಯಾ. ಹೇಮಂತ್ ಚಂದನಗೌಡರ್‌ ಅವರಿದ್ದ ಕರ್ನಾಟಕ ಹೈಕೋರ್ಟ್‌ನ ಧಾರವಾಡದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.


ಅರ್ಜಿದಾರರಾದ ಅಶ್ವಿನ್ ಎರಡನೇ ಪ್ರತಿವಾದಿಯವರಿಗೆ ಅರ್ಜಿಯೊಂದನ್ನು ಸಲ್ಲಿಸಿ ತಮ್ಮ ಸಹಕಾರ ಸೊಸೈಟಿಯೊಂದರ ನೋಂದಾವಣಿಗೆ ಕೋರಿಕೊಂಡಿದ್ದರು. ಅದನ್ನು ಅವರು ಸಹಕಾರ ಸಂಘಗಳ ಉಪ ನಿಬಂಧಕರಿಗೆ ಕಳಿಸಿದ್ದರು. ಅವರು ಈ ಅರ್ಜಿಯನ್ನು ಪುರಸ್ಕರಿಸಲು ನಿರ್ಧಾರವನ್ನು ಒದಗಿಸಲು ವಿನಂತಿಸಿದ್ದರು. ಆ ಬಳಿಕ, ಎರಡನೇ ಪ್ರತಿವಾದಿಯವರು, ಇಂತಹ ಸೊಸೈಟಿ ಈ ಪ್ರದೇಶದಲ್ಲಿ ಈಗಾಗಲೇ ನೋಂದಾವಣಿಯಾಗಿದೆ ಎಂಬ ಷರಾದೊಂದಿಗೆ ಅರ್ಜಿಯನ್ನು ನಿರಾಕರಿಸಿದರು.


ಈ ಆದೇಶದಿಂದ ಬಾಧಿತರಾದ ಅರ್ಜಿದಾರರು ಹೈಕೋರ್ಟ್ ಮೊರೆ ಹೋದರು. ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, ಈಗಾಗಲೇ ಸೊಸೈಟಿ ನೋಂದಾವಣಿಯಾಗಿದ್ದರೂ ಇನ್ನೊಂದು ಇಂಥದ್ದೇ ಸೊಸೈಟಿಯನ್ನು ನೋಂದಾವಣೆ ಮಾಡಲು ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.


ಕರ್ನಾಟಕ ಹೈಕೋರ್ಟ್‌ನ ಈ ಹಿಂದಿನ ತೀರ್ಪುಗಳೂ ಇದನ್ನು ಸ್ಪಷ್ಟಪಡಿಸಿದ್ದು, ಸಹಕಾರ ಸಂಘಗಳ ಕಾಯ್ದೆ ಸೆಕ್ಷನ್ 7 ಮತ್ತು ನಿಯಮ 3Bರ ಪ್ರಕಾರ ನೋಂದಾವಣೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸಬಹುದು ಎಂದು ಹೇಳಿ ಅರ್ಜಿದಾರರ ಅರ್ಜಿಯನ್ನು ಪುರಸ್ಕರಿಸಿದೆ.


ಒಂದು ವೇಳೆ, ಒಂದೇ ಪ್ರಕಾರದ ಸಹಕಾರ ಸೊಸೈಟಿಯು ಆ ಪ್ರದೇಶದಲ್ಲಿ ಅಸ್ತಿತ್ವದಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿ, ಅರ್ಜಿದಾರ ಸೊಸೈಟಿಯ ಸದಸ್ಯರ ಹಕ್ಕುಗಳಿಗೆ ಯಾವುದೇ ತೊಂದರೆಯಾಗದ ಹಾಗೆ ಅದನ್ನು ಪರಿಶೀಲಿಸಬೇಕು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಪ್ರತಿವಾದಿಯ ಆದೇಶವನ್ನು ರದ್ದುಪಡಿಸಿ ಅರ್ಜಿಯನ್ನು ಪುರಸ್ಕರಿಸಿದೆ]


Registration of a co-operative society can not be denied for the reason that similar type of co-operative society is already existed in the same area- Justice Hemant Chandanagoudar, H'ble Karnataka High Court


ಅಶ್ವಿನ್ Vs ಕರ್ನಾಟಕ ಸರ್ಕಾರ

ಕರ್ನಾಟಕ ಹೈಕೋರ್ಟ್‌, WP 100696/2024 (CS-RES), dated 06-02-2024Ads on article

Advertise in articles 1

advertising articles 2

Advertise under the article