-->
30 ವರ್ಷ ಹಿಂದಿನ ಪ್ರಕರಣ 10 ನಿಮಿಷದಲ್ಲೇ ಇತ್ಯರ್ಥ: ಆರೋಪಿ ಖುಲಾಸೆ- ಸುಪ್ರೀಂ ತೀರ್ಪು!

30 ವರ್ಷ ಹಿಂದಿನ ಪ್ರಕರಣ 10 ನಿಮಿಷದಲ್ಲೇ ಇತ್ಯರ್ಥ: ಆರೋಪಿ ಖುಲಾಸೆ- ಸುಪ್ರೀಂ ತೀರ್ಪು!

30 ವರ್ಷ ಹಿಂದಿನ ಪ್ರಕರಣ 10 ನಿಮಿಷದಲ್ಲೇ ಇತ್ಯರ್ಥ: ಆರೋಪಿ ಖುಲಾಸೆ- ಸುಪ್ರೀಂ ತೀರ್ಪು!
ಮೂರು ದಶಕಗಳ ಹಿಂದೆ ನಡೆದಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ದ್ವಿಸದಸ್ಯ ನ್ಯಾಯಪೀಠ ಕೇವಲ 10 ನಿಮಿಷದಲ್ಲೇ ಇತ್ಯರ್ಥಗೊಳಿಸಿದ್ದು, ಆರೋಪಿ ಪತಿಯನ್ನು ಪತ್ನಿಯ ಆತ್ಮಹತ್ಯೆ ಪ್ರಕರಣದಿಂದ ಖುಲಾಸೆಗೊಳಿಸಿ ತೀರ್ಪು ನೀಡಿದೆ.


1993ರಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೊಂದರಲ್ಲಿ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಪತಿಗೆ ವಿಧಿಸಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಆರೋಪಿಗಳು ಸುದೀರ್ಘ ಕಾಲ ವಿಚಾರಣೆ ಎದುರಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.


ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯೇ ಆರೋಪಿಗೆ ಸ್ವತಃ ಶಿಕ್ಷೆಯಾಗಿ ಪರಿಣಮಿಸಬಹುದು. ಈ ಪ್ರಕರಣದಲ್ಲಿ ನಿಜವಾಗಿ ಅದೇ ನಡೆದಿದೆ. ಐಪಿಸಿ ಸೆಕ್ಷನ್ 306ರಡಿಯಲ್ಲಿ ಮೇಲ್ಮನವಿದಾರನ ವಿರುದ್ಧದ ಶಿಕ್ಷೆ ಸಮರ್ಥನೀಯವಲ್ಲ ಎಂಬ ಅನಿವಾರ್ಯ ತೀರ್ಮಾನಕ್ಕೆ ಬರಲು ಈ ನ್ಯಾಯಾಲಯಕ್ಕೆ 10 ನಿಮಿಷಕ್ಕಿಂತ ಹೆಚ್ಚು ಸಮಯ ಹಿಡಿಸಲಿಲ್ಲ. ಮೇಲ್ಮನವಿದಾರನ ವಿಚಾರಣೆ 1993ರಲ್ಲಿ ಆರಂಭವಾಗಿದ್ದು, ಅದು 2024ರ ವರೆಗೆ ತಲುಪಿದೆ. ಆದರೆ, ಅದು ಸುಮಾರು ವರ್ಷಗಳ ಯಾತನೆ ಎಂದು ನ್ಯಾಯಪೀಠ ಕೆಳ ನ್ಯಾಯಾಲಯಗಳ ವಿಳಂಬ ನ್ಯಾಯಪ್ರಕ್ರಿಯೆ ಬಗ್ಗೆ ಬೇಸರ ವ್ಯಕ್ತಪಡಿಸಿತು.ಆರು ತಿಂಗಳ ಮಗು ಇದ್ದ ವಿವಾಹಿತೆ ಸಾವನ್ನಪ್ಪಿದ್ದಾಳೆ ಎಂಬುದು ಸೂಕ್ಷ್ಮವಾಗಿ ಪರಿಶೀಲಿಸುವಂಥ ಅಂಶವಾಗಿದ್ದು, ಯಾವುದೇ ಅಪರಾಧಕ್ಕೆ ಶಿಕ್ಷೆಯಾಗದೇ ಇರಬಾರದು. ಆದರೆ, ಇದೇ ವೇಳೆ, ಆರೋಪಿಯ ಅಪರಾಧವನ್ನು ಕಾನೂನು ಪ್ರಕಾರವೇ ನಿರ್ಧರಿಸಬೇಕು ಎಂದು ಅಭಿಪ್ರಾಯಪಟ್ಟಿತು.


2008ರಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನೀಡಿದ್ದ ತೀರ್ಪು ವಿರುದ್ಧ ಪತಿ ನರೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿತು.ಪ್ರಕರಣ: ನರೇಶ್ ಕುಮಾರ್ Vs ಹರ್ಯಾಣ ಸರ್ಕಾರ

ಸುಪ್ರೀಂ ಕೋರ್ಟ್‌, Crl.A. 1722/2010 Dated 22-02-2024


Ads on article

Advertise in articles 1

advertising articles 2

Advertise under the article