ಪಾಕಿಸ್ತಾನಕ್ಕೆ ವಾಟ್ಸ್ಯಾಪ್‌ನಲ್ಲಿ ಶುಭ ಕೋರುವುದು ಅಪರಾಧವಲ್ಲ: ಸುಪ್ರೀಂ ಕೋರ್ಟ್
ಪಾಕಿಸ್ತಾನಕ್ಕೆ ವಾಟ್ಸ್ಯಾಪ್‌ನಲ್ಲಿ ಶುಭ ಕೋರುವುದು ಅಪರಾಧವಲ್ಲ: ಸುಪ್ರೀಂ ಕೋರ್ಟ್
ಪಾಕಿಸ್ತಾನ ಸೇರಿದಂತೆ ಬೇರೆ ಬೇರೆ ದೇಶಗಳ ಸ್ವಾತಂತ್ಯ ದಿನದಂದು ಅಲ್ಲಿನ ನಾಗರಿಕರಿಗೆ ಶುಭಾಶಯ ಕೋರಲು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಹಕ್ಕಿದೆ. ಇದು ಮೂಲಭೂತ ಹಕ್ಕು. ಹಾಗಾಗಿ, ಅನ್ಯ ದೇಶಕ್ಕೆ ಶುಭ ಕೋರಿದರೆ ಅದು ಭಾರತೀಯ ದಂಡ ಸಂಹಿತೆಯಡಿ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪಾಕಿಸ್ತಾನಕ್ಕೆ ಶುಭಾಶಯ ಕೋರಿದ ಕಾಶ್ಮೀರದ ಪ್ರಾಧ್ಯಾಪಕರ ವಿರುದ್ಧ ದಾಖಲಾಗಿದ್ದ ದ್ವೇಷ ಭಾಷಣದ ಪ್ರಕರಣದ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಅಭಯ ಶ್ರೀನಿವಾಸ ಓಕ ಮತ್ತು ನ್ಯಾ. ಉಜ್ಜಲ್ ಭುಯಾನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಇದರೊಂದಿಗೆ, ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯ ಮೂಲಕ ಕಲ್ಪಿಸಲಾಗಿದ್ದ ವಿಶೇಷ ಮಾನ್ಯತೆಯನ್ನು ರದ್ದುಪಡಿಸಿದ ಮತ್ತು ಪಾಕಿಸ್ತಾನಕ್ಕೆ ಶುಭಾಶಯ ಕೋರಿದ ಕಾಲೇಜು ಪ್ರಾಧ್ಯಾಪಕರ ವಿರುದ್ದ ಸಲ್ಲಿಸಲಾಗಿರುವ ದ್ವೇಷ ಭಾಷಣ ಪ್ರಕರಣವನ್ನು ರದ್ದುಪಡಿಸಿದೆ.
ಸಂವಿಧಾನದ 19ನೇ ವಿಧಿಯಡಿ ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ಯ ಇದೆ. ಇದು ಸಂವಿಧಾನ ಪ್ರತಿ ಪ್ರಜೆಗೆ ನೀಡುವ ಮೂಲಭೂತ ಹಕ್ಕು. ಈ ಹಕ್ಕಿನಡಿ ಅನ್ಯ ದೇಶದ ಸ್ವಾತಂತ್ಯ ದಿನದಂದು ಶುಭಾಶಯ ಕೋರಬಹುದು. ಅದು ಐಪಿಸಿ ಯಡಿ ಅಪರಾಧವಲ್ಲ. ಬದಲಾಗಿ, ಒಂದು ಸದ್ಭಾವನೆಯ ಸಂಕೇತ. ಮೇಲ್ಮನವಿದಾರರು ನಿರ್ದಿಷ್ಟ ಧರ್ಮಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಅವರ ಉದ್ದೇಶವನ್ನು ಆರೋಪಿಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.