ವಕೀಲರು ಶುಲ್ಕವಾಗಿ ವ್ಯಾಜ್ಯ ಫಲದಲ್ಲಿ ಪಕ್ಷಕಾರರಿಂದ ಪಾಲು ಕೇಳುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ವಕೀಲರು ಶುಲ್ಕವಾಗಿ ವ್ಯಾಜ್ಯ ಫಲದಲ್ಲಿ ಪಕ್ಷಕಾರರಿಂದ ಪಾಲು ಕೇಳುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ವಕೀಲರು ತಮ್ಮ ಕಕ್ಷಿದಾರರಿಂದ (ಕ್ಲೈಂಟ್‌ಗಳಿಂದ) ದಾವೆಯ ಫಲಗಳಲ್ಲಿ ಯಾವುದೇ ಪಾಲನ್ನು ಶುಲ್ಕವಾಗಿ ಪಡೆಯಲು ಸಾಧ್ಯವಿಲ್ಲ ಎಂದು ಜಮ್ಮು ಕಾಶ್ಮೀರ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ಸಂಜಯ್ ಧರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ದಾವೆಯಲ್ಲಿ ಸಿಗುವ ಪರಿಹಾರ ಯಾ ಫಲದಲ್ಲಿ ವಕೀಲರು ಶುಲ್ಕವಾಗಿ ವ್ಯಾಜ್ಯ ಫಲದಲ್ಲಿ ಪಕ್ಷಕಾರರಿಂದ ಪಾಲು ಕೇಳುವಂತಿಲ್ಲ. ಒಂದು ವೇಳೆ, ಹಾಗೆ ವಕೀಲರು ವ್ಯಾಜ್ಯ ಫಲದಲ್ಲಿ ಪಾಲು ಕೇಳಿದರೆ ಅದು ವೃತ್ತಿಯ ದುರ್ನಡತೆಯಾಗಿರುತ್ತದೆ ಎಂದು ಹೈಕೋರ್ಟ್ ನ್ಯಾಯಪೀಠ ಬಣ್ಣಿಸಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ತನ್ನ ಕಕ್ಷಿದಾರರಿಂದ ಶುಲ್ಕವಾಗಿ ದಾವೆಯ ಫಲಗಳಲ್ಲಿ ಯಾವುದೇ ಪಾಲನ್ನು ವಕೀಲರು ಪಡೆಯಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.
ಪ್ರಕರಣವೊಂದರಲ್ಲಿ ತನಗೆ ನೀಡಲಾದ ಪರಿಹಾರದ ಒಂದು ಭಾಗವನ್ನು ವೃತ್ತಿಪರ ಶುಲ್ಕವಾಗಿ ನೀಡುವಂತೆ ತನ್ನ ವಕೀಲರು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕಥುವಾದಲ್ಲಿ ನಡೆದ ಮೋಟಾರು ಅಪಘಾತಕ್ಕೆ ಸಂಬಂಧಿಸಿದ ಪರಿಹಾರ ಕೋರಿ ವಿಮಾ ಪರಿಹಾರಗಳ ನ್ಯಾಯಮಂಡಳಿ (MACT)ಯಲ್ಲಿ ಅರ್ಜಿದಾರರು ದಾವೆ ಹೂಡಿದ್ದರು. ಸದ್ರಿ ಅರ್ಜಿಯನ್ನ ವಿಚಾರಣೆ ನಡೆಸಿದ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 2023 ರಲ್ಲಿ ಲೋಕ ಅದಾಲತ್ ಮೂಲಕ ಪರಿಹಾರವಾಗಿ ರೂ. 13.5 ಲಕ್ಷಗಳನ್ನು ಪರಿಹಾರವನ್ನು ಅರ್ಜಿದಾರರಿಗೆ ಘೋಷಿಸಿತ್ತು.
ನ್ಯಾಯಾಲಯ ಪರಿಹಾರದ ಮೊತ್ತದ ಒಂದು ಪಾಲನ್ನು ಠೇವಣಿ ಇಡುವಂತೆ ಆದೇಶಿಸಿತ್ತು. ತಮ್ಮ ವಕೀಲರು ಈ ಪರಿಹಾರ ಮೊತ್ತದ ನಿರ್ದಿಷ್ಟ ಶೇಕಡಾ ಮೊತ್ತವನ್ನು ಶುಲ್ಕವಾಗಿ ನೀಡುವಂತೆ ವಕೀಲರು ಒತ್ತಾಯಿಸುತ್ತಿದ್ಧಾರೆ ಎಂದು ಅರ್ಜಿದಾರರು ಆರೋಪಿಸಿದ್ದರು.
ಪ್ರಕರಣ: ಮುನ್ನಿ Vs ಪ್ರಿಸೈಡಿಂಗ್ ಆಫೀಸರ್, ಎಂಎಸಿಟಿ, ಕತುವಾ
ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್, WP(C) 682/2024 dated 28-03-2024