-->
ವಯಸ್ಕರ ವಿವಾಹೇತರ ಲೈಂಗಿಕ ಸಂಬಂಧ ಯಾವುದೇ ಅಪರಾಧವಲ್ಲ: ಹೈಕೋರ್ಟ್

ವಯಸ್ಕರ ವಿವಾಹೇತರ ಲೈಂಗಿಕ ಸಂಬಂಧ ಯಾವುದೇ ಅಪರಾಧವಲ್ಲ: ಹೈಕೋರ್ಟ್

ವಯಸ್ಕರ ವಿವಾಹೇತರ ಲೈಂಗಿಕ ಸಂಬಂಧ ಯಾವುದೇ ಅಪರಾಧವಲ್ಲ: ಹೈಕೋರ್ಟ್





ವಯಸ್ಕ ಜೋಡಿಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅದು ಕಾನೂನಿನ ಅಡಿಯಲ್ಲಿ ಅಪರಾಧವಾಗಲಾರದು ಎಂದು ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿದೆ.


ಈ ತೀರ್ಪು ಪ್ರಕಟಿಸಿದ ನ್ಯಾ. ಬೀರೇಂದ್ರ ಕುಮಾರ್ ಅವರಿದ್ದ ನ್ಯಾಯಪೀಠ, ಈ ಹಿಂದೆ ವಯಸ್ಕರ ವಿವಾಹೇತರ ಲೈಂಗಿಕ ಸಂಬಂಧ ಅಪರಾಧವಾಗಿತ್ತು. ಐಪಿಸಿ ಸೆಕ್ಷನ್ 497ರಡಿಯಲ್ಲಿ ವ್ಯಭಿಚಾರವಾಗಿತ್ತು. ಆದರೆ, 2018ರ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ವಿವಾಹೇತರ ಸಂಬಂಧ ವ್ಯಭಿಚಾರವಲ್ಲ ಎಂದು ತೀರ್ಪು ನೀಡಿದೆ ಎಂಬುದನ್ನು ಉಲ್ಲೇಖಿಸಿತು.


ಎಸ್. ಖುಷ್ಬೂ Vs ಕನ್ನಿಯಮ್ಮಾಳ್ ಮತ್ತಿತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿರುವಂತೆಯೇ, ವಯಸ್ಕರು ವಿವಾಹೇತರು ಸ್ವ ಇಚ್ಚೆಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಕಾನೂನಾತ್ಮಕ ಅಪರಾಧ ಎನಿಸಿಕೊಳ್ಳುವುದಿಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿತು.


ಸಾಮಾಜಿಕ ನೈತಿಕತೆಗಿಂತ ಸಾಂವಿಧಾನಿಕ ನೈತಿಕತೆಗೆ ಆದ್ಯತೆ ನೀಡಬೇಕು ಎಂದು ನವತೇಜ್ ಸಿಂಗ್ ಜೋಹರ್ VS ಭಾರತ ಸರ್ಕಾರ ಪ್ರಕರಣ ಹಾಗೂ ಶಫಿನ್ ಜಹಾನ್ Vs ಅಶೋಕನ್ ಕೆ.ಎಂ. ಪ್ರಕರಣದಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿದ ವಿಚಾರಣಾ ನ್ಯಾಯಾಲಯ ಎಫ್‌ಐಆರ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು..


ಮದುವೆಯನ್ನು ಸಾಬೀತುಪಡಿಸದ ಹೊರತು ಹಾಗೂ ಲಿವ್ ಇನ್ ರಿಲೇಶನ್ ನಂತಹ ಸಂಬಂಧಗಳು ಐಪಿಸಿ ಸೆಕ್ಷನ್ 494ರಡಿ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿದೆ.


ಪ್ರಕರಣ: ಯಡ್ರಾಮ್ ಮತ್ತಿತರರು Vs ರಾಜಸ್ತಾನ ಸರ್ಕಾರ ಮತ್ತಿತರರು

ರಾಜಸ್ತಾನ ಹೈಕೋರ್ಟ್

Ads on article

Advertise in articles 1

advertising articles 2

Advertise under the article