-->
ಬರ ಪರಿಹಾರ: ಕರ್ನಾಟಕಕ್ಕೆ ಸುಪ್ರೀಂ ನ್ಯಾಯ: ರಾಜ್ಯದ ಬೇಡಿಕೆ 18171 ಕೋಟಿ ರೂ., ಕೇಂದ್ರದ ಭರವಸೆ 3454 ಕೋಟಿ ರೂ.; ಸುಪ್ರೀಂಗೆ ಸಿದ್ದರಾಮಯ್ಯ ಧನ್ಯವಾದ

ಬರ ಪರಿಹಾರ: ಕರ್ನಾಟಕಕ್ಕೆ ಸುಪ್ರೀಂ ನ್ಯಾಯ: ರಾಜ್ಯದ ಬೇಡಿಕೆ 18171 ಕೋಟಿ ರೂ., ಕೇಂದ್ರದ ಭರವಸೆ 3454 ಕೋಟಿ ರೂ.; ಸುಪ್ರೀಂಗೆ ಸಿದ್ದರಾಮಯ್ಯ ಧನ್ಯವಾದ

ಬರ ಪರಿಹಾರ: ಕರ್ನಾಟಕಕ್ಕೆ ಸುಪ್ರೀಂ ನ್ಯಾಯ: ರಾಜ್ಯಬೇಡಿಕೆ 18171 ಕೋಟಿ ರೂ., ಕೇಂದ್ರದ ಭರವಸೆ 3454 ಕೋಟಿ ರೂ.; ಸುಪ್ರೀಂಗೆ ಧನ್ಯವಾದ ಹೇಳಿದ ಸಿದ್ದರಾಮಯ್ಯ





ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ಬೆನ್ನಲ್ಲೇ ಕರ್ನಾಟಕಕ್ಕೆ ತಡೆ ಹಿಡಿದಿದ್ದ ಬರ ಪರಿಹಾರದ 3454 ಕೋಟಿ ರೂ. ಮೊತ್ತವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.


ರಾಜ್ಯದಲ್ಲಿ ಬರ ಪರಿಹಾರ ನೀಡಿಲ್ಲ ಎಂದು ತಿಂಗಳ ಹಿಂದೆಯೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು.


ಈ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರದ ವಿಳಂಬ ಮತ್ತು ತಾರತಮ್ಯದ ಧೋರಣೆಗೆ ಛೀಮಾರಿ ಹಾಕಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸರ್ಕಾರ ಎರಡು ವಾರದಲ್ಲಿ ಹಣ ಬಿಡುಗಡೆ ಮಾಡುವುದಾಗಿ ಅಫಿಡವಿಟ್ ಹಾಕಿತ್ತು.


ಈ ಮಧ್ಯೆ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ನಾಯಕರು ಕರ್ನಾಟಕಕ್ಕೆ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಬಹಿರಂಗ ಹೇಳಿಕೆ ನೀಡುತ್ತಲೇ ಬಂದಿದ್ದರು. ಆದರೆ, ಯಾವುದೇ ಪುರಾವೆ ಇಲ್ಲದೆ ಈ ರೀತಿಯ ಹೇಳಿಕೆಗೆ ರಾಜ್ಯದ ಕಾಂಗ್ರೆಸ್ ನಾಯಕರು ಚುನಾವಣಾ ಸಮಯದಲ್ಲೇ ತಕ್ಕ ತಿರುಗೇಟು ನೀಡಿದ್ದರು. 'ಚೊಂಬು' ಅಭಿಯಾನವನ್ನು ಪರಿಣಾಮಕಾರಿಯಾಗಿಯೇ ಚುನಾವಣಾ ಅಸ್ತ್ರವನ್ನಾಗಿ ಬಳಸಿದ್ದರು.



Ads on article

Advertise in articles 1

advertising articles 2

Advertise under the article