-->
ಆರ್ಡರ್ ಮಾಡಿದ 'ಐಸ್‌ಕ್ರೀಂ' ಪೂರೈಸದ ಸ್ವಿಗ್ಗಿಗೆ ಭಾರೀ ದಂಡ: ಗ್ರಾಹಕ ನ್ಯಾಯಾಲಯದ ಆದೇಶ

ಆರ್ಡರ್ ಮಾಡಿದ 'ಐಸ್‌ಕ್ರೀಂ' ಪೂರೈಸದ ಸ್ವಿಗ್ಗಿಗೆ ಭಾರೀ ದಂಡ: ಗ್ರಾಹಕ ನ್ಯಾಯಾಲಯದ ಆದೇಶ

ಆರ್ಡರ್ ಮಾಡಿದ 'ಐಸ್‌ಕ್ರೀಂ' ಪೂರೈಸದ ಸ್ವಿಗ್ಗಿಗೆ ಭಾರೀ ದಂಡ: ಗ್ರಾಹಕ ನ್ಯಾಯಾಲಯದ ಆದೇಶ

ಐಸ್‌ಕ್ರೀಂ ಅರ್ಡರ್ ಮಾಡಿ ಹಣ ಪಾವತಿ ಮಾಡಿದ್ದರೂ ಗ್ರಾಹಕನಿಗೆ ಐಸ್‌ಕ್ರೀಂ ಪೂರೈಕೆ ಮಾಡದ ಸ್ವಿಗ್ಗಿ ಕಂಪೆನಿಗೆ ಬೆಂಗಳೂರಿನ ಗ್ರಾಹಕ ನ್ಯಾಯಾಲಯ ಭಾರೀ ಮೊತ್ತದ ದಂಡವನ್ನು ವಿಧಿಸಿದೆ.


ಕಳೆದ ವರ್ಷದ ಜನವರಿ 26ರಂದು ಗ್ರಾಹಕರೊಬ್ಬರು ಕ್ರೀಮ್ ಸ್ಟೋನ್ ಐಸ್ ಕ್ರೀಂ ರೆಸ್ಟೊರೆಂಟ್‌ನಿಂದ ನಟ್ಟಿ ಡೆತ್ ಬೈ ಚಾಕೊಲೆಟ್ ಐಸ್‌ ಕ್ರೀಂಗಾಗಿ ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ್ದರು.


ಆರ್ಡರ್ ಮಾಡಿದ ಐಸ್ ಕ್ರೀಂ ನ್ನು ಪೂರೈಕೆ ಮಾಡದಿದ್ದರೂ ಸ್ವಿಗ್ಗಿ ಆಪ್‌ನಲ್ಲಿ ಡೆಲಿವರಿ ಮಾಡಲಾಗಿದೆ ಎಂಬುದಾಗಿ ನಮೂದಾಗಿತ್ತು. ಈ ಬಗ್ಗೆ ಗ್ರಾಹಕರು ತಗಾದೆ ತೆಗೆದಿದ್ದರು. ಆದರೂ, ತನ್ನ ಗ್ರಾಹಕರಿಗೆ ಆರ್ಡರ್ ಮೊತ್ತ ಮರುಪಾವತಿಸಲು ಸ್ವಿಗ್ಗಿ ವಿಫಲರಾದ ಕಾರಣ, ಸದ್ರಿ ಗ್ರಾಹಕರು ನ್ಯಾಯಾಲಯದ ಮೊರೆ ಹೋಗಿದ್ದರು.


ಗ್ರಾಹಕ ಮತ್ತು ಥರ್ಡ್ ಪಾರ್ಟಿ ರೆಸ್ಟೊರೆಂಟ್ ಇಲ್ಲವೇ ವ್ಯಾಪಾರಿಗಳ ನಡುವೆ ತಾನು ಮಧ್ಯಸ್ಥಿಕೆದಾರನಾಗಿದ್ದು, ಮಾಹಿತಿ ತಂತ್ರಜ್ಙಾನ ಕಾಯ್ದೆಯ ಪ್ರಕಾರ ತನಗೆ ಹೊಣೆಗಾರಿಕೆಯಿಂದ ರಕ್ಷಣೆ ಇದೆ ಎಂದು ಸ್ವಿಗ್ಗಿ ವಾದ ಮಂಡಿಸಿತ್ತು. ತನ್ನ ಡೆಲಿವರಿ ಬಾಯಿ ಮಾಡಿದ್ದಾನೆ ಎನ್ನಲಾದ ತಪ್ಪಿಗೆ ತನ್ನನ್ನು ಹೊಣೆಗಾರನಾಗಿ ಮಾಡುವಂತಿಲ್ಲ ಎಂದು ಅದು ವಾದಿಸಿತ್ತು.


ಆಪ್ ಪ್ರಕಾರ ಆರ್ಡರ್ ಮಾಡಿದ ಐಟಮ್ ಡೆಲಿವರಿ ಆಗಿದೆ. ಈ ಆರ್ಡರ್ ಪೂರೈಕೆ ಆಗಿದೆಯೇ ಎಂಬುದನ್ನು ಮರು ಪರಿಶೀಲಿಸುವ ಸ್ಥಿತಿಯಲ್ಲಿ ತಾನು ಇಲ್ಲ ಎಂಬುದಾಗಿ ಸ್ವಿಗ್ಗಿ ಹೇಳಿಕೆ ನೀಡಿತ್ತು.


ವಾದ ಆಲಿಸಿದ ಗ್ರಾಹಕ ಆಯೋಗದ ಅಧ್ಯಕ್ಷ ವಿಜಯ ಕುಮಾರ್ ಎಂ. ಪಾವಲೆ, ವಿ. ಅನುರಾಧ ಮತ್ತು ರೇಣುಕಾದೇವಿ ದೇಶಪಾಂಡೆ ಅವರಿದ್ದ ನ್ಯಾಯಪೀಠ, ಮಾಹಿತಿ ತಂತ್ರಜ್ಙಾನ ಕಾಯ್ದೆಯಡಿ ಮಧ್ಯವರ್ತಿಯಾಗಿ ತನಗೆ ಹೊಣೆಗಾರಿಕೆಯಿಂದ ರಕ್ಷಣೆ ಇದೆ ಎಂಬ ಸ್ವಿಗ್ಗಿ ವಾದವನ್ನು ತಿರಸ್ಕರಿಸಿತು. ಈ ವಿನಾಯಿತಿ ಮಾಹಿತಿಯ ಪ್ರಸಾರಕ್ಕೆ ಮಾತ್ರ, ಸರಕು-ಸೇವೆಗಳ ಮಾರಾಟಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಿತು. ಅಲ್ಲದೆ, ಲೀಗಲ್ ನೋಟೀಸ್‌ಗೆ ಪ್ರತಿಕ್ರಿಯೆ ನೀಡದಿರುವ ಸ್ವಿಗ್ಗಿಯ ಇರಾದೆಯನ್ನೂ ನ್ಯಾಯಪೀಠ ಗಮನಿಸಿತು.


ಸೇವಾ ನ್ಯೂನ್ಯತೆ, ಅಕ್ರಮ ವ್ಯಾಪಾರಿ ಅಭ್ಯಾಸ ಕುರಿತ ಸ್ವಿಗ್ಗಿ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದ ಗ್ರಾಹಕ ನ್ಯಾಯಾಲಯ, ದೂರುದಾರ ಗ್ರಾಹಕರಿಗೆ ಪರಿಹಾರವಾಗಿ ರೂ. 3,000/- ದಾವಾ ವೆಚ್ಚವಾಗಿ 2000/- ಪಾವತಿಸುವಂತೆ ಆದೇಶ ನೀಡಿತು.
Ads on article

Advertise in articles 1

advertising articles 2

Advertise under the article