-->
ನ್ಯಾಯವಾದಿ ಚೈತ್ರಾ ಗೌಡ ಸಾವು: ಸಮಗ್ರ ತನಿಖೆಗೆ ವಕೀಲರ ಸಂಘದ ಆಗ್ರಹ

ನ್ಯಾಯವಾದಿ ಚೈತ್ರಾ ಗೌಡ ಸಾವು: ಸಮಗ್ರ ತನಿಖೆಗೆ ವಕೀಲರ ಸಂಘದ ಆಗ್ರಹ

ನ್ಯಾಯವಾದಿ ಚೈತ್ರಾ ಗೌಡ ಸಾವು: ಸಮಗ್ರ ತನಿಖೆಗೆ ವಕೀಲರ ಸಂಘದ ಆಗ್ರಹ






ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿದ್ದ ಚೈತ್ರಾ ಗೌಡ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಂಜಯನಗರದ ಬಳಿ ಇರುವ ಅಣ್ಣಯ್ಯ ಲೇಔಟ್‌ನಲ್ಲಿ ನಡೆದಿದೆ.


ಕೆಎಎಸ್‌ ಅಧಿಕಾರಿ ಶಿವಕುಮಾರ್ ಅವರ ಪತ್ನಿಯಾಗಿರುವ ಚೈತ್ರಾ 2016ರಲ್ಲಿ ಮದುವೆಯಾಗಿದ್ದರು. ಐದು ವರ್ಷದ ಹೆಣ್ಣುಮಗಳನ್ನು ಹೊಂದಿರುವ ಚೈತ್ರಾ ಅವರ ಮೃತದೇಹ ಫ್ಯಾನ್‌ವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಶವದ ಬಳಿ ಇದ್ದ ಡೆತ್‌ನೋಟ್‌ನಲ್ಲಿ ನನಗೆ ಜೀವನ ಸಾಕಾಗಿದೆ. I am just leaving ಎಂದು ಬರೆಯಲಾಗಿದೆ.


ತಾನು ಕಳೆದ ಕೆಲವು ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ. ಅದರಿಂದ ಆಚೆ ಬರಲು ಪ್ರಯತ್ನ ನಡೆಸುತ್ತಿದ್ದೇನೆ. ಆದರೆ ಸಾಧ್ಯವಾಗಲಿಲ್ಲ. ಹಾಗಾಗಿ, ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ, ಲೈಫ್ ಎಂಜಾಯ್ ಮಾಡಿ ಎಂದು ಚೈತ್ರಾ ಬರೆದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಚೈತ್ರಾ ಸಾವು: ಸಮಗ್ರ ತನಿಖೆಗೆ ವಕೀಲರ ಸಂಘದ ಆಗ್ರಹ

ವಕೀಲೆ, ಬ್ಯಾಡ್ಮಿಂಟನ್ ಆಟಗಾರ್ತಿ ಚೈತ್ರಾ ಗೌಡ ಸಾವಿನ ಪ್ರಕರಣದ ಸಮಗ್ರ ತನಿಖೆ ನಡೆಯಬೇಕು ಎಂದು ವಕೀಲರ ಸಂಘ ಆಗ್ರಹಿಸಿದೆ.


ಅವರು ಅಂತಹ ಮನೋಸ್ಥಿತಿಯವರಲ್ಲ. ಅವರದ್ದು ಸದೃಢ ಮನಸ್ಥಿತಿ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸ್ವಭಾವದವರಲ್ಲ. ಗಟ್ಟಿ ಮನಸ್ಸಿನ ಮಹಿಳೆ ಎಂದು ವಕೀಲರ ಸಂಘ ಹೇಳಿದ್ದು, ಸಾವಿನ ಸಮಗ್ರ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.


Ads on article

Advertise in articles 1

advertising articles 2

Advertise under the article