ಸೈಟ್ ಹಂಚಿಕೆಯಾಗಿದ್ದೂ ನೋಂದಣಿಯಾಗಿದ್ದರೆ ಮಾತ್ರ ಹಕ್ಕು ಲಭ್ಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಸೈಟ್ ಹಂಚಿಕೆಯಾಗಿದ್ದೂ ನೋಂದಣಿಯಾಗಿದ್ದರೆ ಮಾತ್ರ ಹಕ್ಕು ಲಭ್ಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಸರ್ಕಾರ, ಪ್ರಾಧಿಕಾರ ಯಾ ಯಾವುದೇ ಸಂಘ ಸಂಸ್ಥೆ ಅಥವಾ ಇತರ ಮೂಲದಿಂದ ಸೈಟ್ ಹಂಚಿಕೆಯಾಗಿದ್ದರೂ ಅದು ನೋಂದಣಿಯಾಗಿದ್ದರೆ ಮಾತ್ರ ಅದು ಮಾನ್ಯವಾಗುತ್ತದೆ ಮತ್ತು ಆ ಆಸ್ತಿ ಮೇಲೆ ಹಕ್ಕು ಲಭ್ಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆದಿಲಕ್ಷ್ಮಮ್ಮ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ನ್ಯಾಯಪೀಠ, ನಿವೇಶನದ ಹಂಚಿಕೆಯು ಆ ನಿವೇಶನದ ಮೇಲೆ ಹಕ್ಕು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.
1976-77ರಲ್ಲಿ ಬಿಡಿಎ ಕೆ. ತಿಪ್ಪಣ್ಣ ಎಂಬವರಿಗೆ ನಿವೇಶನ ಹಂಚಿಕೆ ಮಾಡಿತ್ತು. ಆದರೆ, ಆ ನಿವೇಶನದ ನೋಂದಣಿಗೂ ಮುನ್ನ ಅವರು ಮೃತಪಟ್ಟರು. ಆನಂತರ ಪ್ರಾಧಿಕಾರಕ್ಕೆ ಹಣ ಪಾವತಿಸಿದ ನಂತರ ಮೂಲ ಹಂಚಿಕೆದಾರರ ಪತ್ನಿ ಲಕ್ಷ್ಮಮ್ಮ ಹೆಸರಿಗೆ ಬಿಡಿಎ ನಿವೇಶನ ನೋಂದಣಿ ಮಾಡಲಾಯಿತು.
ಹಿಂದೂ ಉತ್ತರಾಧಿಕಾರತ್ವದ ಕಾಯ್ದೆ ಸೆಕ್ಷನ್ 8ರ ಪ್ರಕಾರ ಸದ್ರಿ ನಿವೇಶನದ ಮೂಲ ಮಾಲೀಕರು ಲಕ್ಷ್ಮಮ್ಮ ಅವರಾಗಿದ್ದು, ಕೆ. ತಿಪ್ಪಣ್ಣ ಅವರಿಗೆ ನಿವೇಶನ ಹಂಚಿಕೆ ಮಾಡಲಾಗಿದ್ದರೂ ಅದು ನೋಂದಣಿ ಆಗಿಲ್ಲದ ಕಾರಣ ತಿಪ್ಪಣ್ಣ ಅವರಿಗೆ ಆಸ್ತಿ ಮೇಲೆ ಯಾವುದೇ ಹಕ್ಕು ಲಭಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.