-->
ಕಕ್ಷಿದಾರ ಮಹಿಳೆಯನ್ನು ಲಾಡ್ಜ್‌ಗೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್: ಬಲವಂತದ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಸರ್ಕಾರಿ ವಕೀಲ ಶ್ರೀರಾಮ ಅರೆಸ್ಟ್‌!

ಕಕ್ಷಿದಾರ ಮಹಿಳೆಯನ್ನು ಲಾಡ್ಜ್‌ಗೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್: ಬಲವಂತದ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಸರ್ಕಾರಿ ವಕೀಲ ಶ್ರೀರಾಮ ಅರೆಸ್ಟ್‌!

ಕಕ್ಷಿದಾರ ಮಹಿಳೆಯನ್ನು ಲಾಡ್ಜ್‌ಗೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್: ಬಲವಂತದ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಸರ್ಕಾರಿ ವಕೀಲ ಶ್ರೀರಾಮ ಅರೆಸ್ಟ್‌!

ರೂಮಿಗೆ ಬಾ ಎಂದು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ಸರ್ಕಾರಿ ವಕೀಲ ಶ್ರೀರಾಮ ಎಂಬಾತ ಪೊಲೀಸರ ಅತಿಥಿಯಾಗಿದ್ಧಾನೆ. ಪ್ರಕರಣವೊಂದರಲ್ಲಿ ಆದೇಶದ ಪ್ರತಿ ಕೇಳಲು ತನ್ನ ಕಚೇರಿಗೆ ಬಂದಿದ್ದ ಕಕ್ಷಿದಾರರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಬಲವಂತವಾಗಿ ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ.


ಈ ಘಟನೆ ನಡೆದದ್ದು ಬೆಂಗಳೂರಿನ ಕಾಟನ್‌ಪೇಟೆಯಲ್ಲಿ. ಆರೋಪಿ ಶ್ರೀರಾಮನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ಧಾರೆ.


ಪ್ರಕರಣವೊಂದರಲ್ಲಿ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನೀಡಿತ್ತು. ಈ ಜಾಮೀನು ರದ್ದು ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಉದ್ದೇಶದಿಂದ ಆ ಜಾಮೀನು ಆದೇಶದ ಪ್ರತಿಯನ್ನುಪಡೆಯಲು 32 ವರ್ಷದ ಮಹಿಳೆಯೊಬ್ಬರು ಪಬ್ಲಿಕ್ ಪ್ರಾಸಿಕ್ಯೂಟರ್‌ ಕಚೇರಿಗೆ ಆಗಮಿಸಿದ್ದರು.


ಸರ್ಕಾರಿ ವಕೀಲ ಶ್ರೀರಾಮ ಅವರನ್ನು ಮಹಿಳೆ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಕಚೇರಿಯಲ್ಲಿ ಭೇಟಿಯಾದರು. ಆ ಸಂದರ್ಭದಲ್ಲಿ, "ನಾವು ಇದರಲ್ಲಿ ಮೇಲ್ನೋಟಕ್ಕೆ ಏನೂ ಮಾಡಲು ಬರುವುದಿಲ್ಲ. ನನಗೆ ಪರಿಚಯವಿರುವ ವಕೀಲ ಚಂದ್ರಮೋಹನ್ ಅವರನ್ನು ಪರಿಚಯ ಮಾಡಿಸುತ್ತೇನೆ. ಶುಲ್ಕದ ಬಗ್ಗೆ ಮಾತನಾಡೋಣ. ನ್ಯಾಯಾಲಯದ ಗೇಟ್ ಬಳಿ ಕಾಯಿರಿ. ನಾನು ಬರುತ್ತೇನೆ" ಎಂದು ಶ್ರೀರಾಮ್ ಹೇಳಿದರು.


ಬಳಿಕ, ಸ್ವಲ್ಪ ಹೊತ್ತಿನ ಬಳಿಕ ನ್ಯಾಯಾಲಯದ ಗೇಟ್ ಬಳಿ ಬಂದ ಶ್ರೀರಾಮ್ ಆಟೋದಲ್ಲಿ ಕುಳಿತುಕೊಂಡು ಸಂತ್ರಸ್ತ ಮಹಿಳೆಯನ್ನೂ ಬರುವಂತೆ ಕರೆದರು. ಶುಲ್ಕದ ಬಗ್ಗೆ ಮಾತನಾಡೋಣ ಎಂದು ಹೇಳಿದರು.


ಆಟೋ ಬಳಿ ಬಂದಾಗ ಒಳಗೆ ಬಂದು ಕೂರುವಂತೆ ಒತ್ತಾಯಿಸಿದರು. ಆಟೋದಲ್ಲಿ ಮಾತನಾಡಲು ಮುಂದಾದಾಗ ಪಿಪಿ ಸೂಚನೆಯಂತೆ ಆಟೋ ಕಾಟನ್‌ಪೇಟೆ ರಸ್ತೆಯ ಲಾಡ್ಜ್‌ ಬಳಿ ನಿಲ್ಲಿಸಲಾಯಿತು.


ರೂಮ್ ಒಳಗೆ ಬಾ ಎಂದು ಬಲವಂತ ಮಾಡಿದ್ದ ಶ್ರೀರಾಮ

ಲಾಡ್ಜ್‌ ಒಳಗೆ ಬರುವಂತೆ ಬಲವಂತ ಮಾಡಿದ್ದ ಶ್ರೀರಾಮ ನಿಂದು ಏನಿದೆ..? ಏಲ್ಲಾ ರೀತಿಯ ಸಮಸ್ಯೆಯನ್ನು ಬಗೆಹರಿಸುತ್ತೇನೆ. ರೂಮ್ ಒಳಗೆ ಬಾ ಎಂದು ಕರೆದ. ಆಗ ಮಹಿಳೆ, ನನಗೆ ಇದೆಲ್ಲ ಇಷ್ಟವಿಲ್ಲ. ಬಲವಂತ ಮಾಡಬೇಡಿ ಎಂದು ಹೇಳಿದರು.


ಪಬ್ಲಿಕ್ ಪ್ರಾಸಿಕ್ಯೂಟರ್ ಆಕೆಯ ಕೈಹಿಡಿದ ಎಳೆದಾಗ, ದಯವಿಟ್ಟು ಬಲವಂತ ಮಾಡಬೇಡಿ, ನಾನು ಅಂತಹ ಹುಡುಗಿ ಅಲ್ಲ. ನಾನು ನನ್ನ ಗಂಡನಿಗೆ ಮೋಸ ಮಾಡುವುದಿಲ್ಲ ಎಂದು ಎಷ್ಟು ಹೇಳಿದರೂ ಬಿಡಲಿಲ್ಲ. ನೀನು ಅಂಥವಳಲ್ಲ ಎಂದು ನನಗೂ ಗೊತ್ತು. ನಾನೂ ಅಂತವನಲ್ಲ. ಕೆಲಸ ಆಗಬೇಕು ಎಂದರೆ ಇದೆಲ್ಲ ಮಾಡಬೇಕು. ಯೋಚನೆ ಮಾಡು. ನಾನು ರೂಮಿನಲ್ಲಿ ಇರುತ್ತೇನೆ. ಒಳಗೆ ಬಾ ಎಂದು ಕರೆದರು ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ಧಾರೆ.


"10 ನಿಮಿಷ ಲೈಂಗಿಕ ಸುಖ ಕೊಡು"

ಆ ಬಳಿಕ ಲಾಡ್ಜ್ ಒಳಗೆ ಹೋಗಲು ನಿರಾಕರಿಸಿದ ಮಹಿಳೆ ಕಟ್ಟಡದ ಎದುರಿಗಿದ್ದ ಹೊಟೇಲ್‌ ಬಳಿ ನಿಂತರು. ಗಂಡನಿಗೆ ಫೋನ್ ಮಾಡಿ ವಿಷಯ ತಿಳಿಸಿ ಹೊಟೇಲ್ ಬಳಿ ಕುಳಿತರು. ಅಲ್ಲಿಗೂ ಬಂದ ಶ್ರೀರಾಮ್, ಇಲ್ಲಿ ಬೇಡ ಬೇರೆ ರೂಮ್ ಮಾಡುತ್ತೇನೆ. ನನ್ನೊಂದಿಗೆ ಅನ್ಯೋನ್ಯವಾಗಿರು. 10 ನಿಮಿಷ ಲೈಂಗಿಕ ಸುಖ ಕೊಡು. ನಿನಗೆ ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದರು.


ಇದೇ ರೀತಿ ಹೇಳುತ್ತಾ... ಹಿಂಸೆ ನೀಡುತ್ತಾ.. ಸೆಕ್ಸ್‌ಗೆ ಕರೆಯುತ್ತಿದ್ದರು. ಬಲವಂತ ಮಾಡುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.


ಘಟನೆಯ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಗಂಡನ ಸ್ನೇಹಿತ ಶ್ರೀರಾಮನ ಪಾಪಕೃತ್ಯವನ್ನು ಫೋನ್‌ನಲ್ಲಿ ಸೆರೆ ಹಿಡಿಯುತ್ತಿದ್ದರು. ಬಳಿಕ ಅವರು ಪ್ರಶ್ನೆ ಮಾಡಿದಾಗ, ಶ್ರೀರಾಮ ಜಾಗದಿಂದ ಕಾಲ್ಕಿತ್ತರು. ಅಲ್ಲಿ ಸೇರಿದ್ದ ಸಾರ್ವಜನಿಕರೇ ಆರೋಪಿ ಶ್ರೀರಾಮನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.


ನಿನ್ನನ್ನು ಬಿಡುವುದಿಲ್ಲ. ಸಾಯಿಸುತ್ತೇನೆ. ಮೊಬೈಲ್‌ನಲ್ಲಿ ಇರುವ ವೀಡಿಯೋ ಡಿಲಿಟ್ ಮಾಡು ಎಂದು ಆರೋಪಿ ಶ್ರೀರಾಮ ಬೆದರಿಕೆ ಹಾಕಿದ್ದ...! ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ.
Ads on article

Advertise in articles 1

advertising articles 2

Advertise under the article