-->
ಜಾತಿ ಪ್ರಮಾಣಪತ್ರದ ಆಧಾರದಲ್ಲಿ ಶಾಲಾ ದಾಖಲೆಯಲ್ಲಿ ಜಾತಿ ತಿದ್ದುಪಡಿ: ಸಿವಿಲ್‌ ಕೋರ್ಟ್‌ಗೆ ನ್ಯಾಯವ್ಯಾಪ್ತಿ ಇದೆ- ಕರ್ನಾಟಕ ಹೈಕೋರ್ಟ್

ತಹಶೀಲ್ದಾರ್ ಜಾರಿಗೊಳಿಸಿರುವ ಜಾತಿ ಪ್ರಮಾಣ ಪತ್ರದ ಆಧಾರದಲ್ಲಿ ಶಾಲೆಯ ದಾಖಲೆಗಳಲ್ಲಿ ತನ್ನ ಜಾತಿಯ ನಮೂದನ್ನು ತಿದ್ದುಪಡಿ ಮಾಡುವಂತೆ ಶಾಲೆಗಳಿಗೆ ನಿರ್ದೇಶನಾತ್ಮಕ ಆದೇಶ ಹೊರಡಿಸುವಂತೆ ಕೋರಿ ಸಲ್ಲಿಸುವ ಅರ್ಜಿಗಳನ್ನು ಇತ್ಯರ್ಥ ಮಾಡಲು ಸಿವಿಲ್ ನ್ಯಾಯಾಲಯಗಳಿಗೆ ನ್ಯಾಯವ್ಯಾಪ್ತಿ ಇದೆ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.

ನ್ಯಾ. ಸಚಿನ್ ಶಂಕರ್ ಮಗ್ದೂಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ಹೊರಡಿಸಿದೆ.

ಶಾಲಾ ದಾಖಲೆಗಳಲ್ಲಿ ವಿದ್ಯಾರ್ಥಿಯ ಜಾತಿ ತಪ್ಪಾಗಿ ಮುದ್ರಿತವಾಗಿದ್ದರೆ, ಅಂತಹ ತಪ್ಪುಗಳನ್ನು ತಹಶೀಲ್ದಾರ್ ಒದಗಿಸುವ ಜಾತಿ ಪ್ರಮಾಣಪತರದ ಮೂಲಕ ಸರಿಪಡಿಬಹುದು. ಇಲ್ಲವೇ ಅರ್ಜಿದಾರರು, ಶಾಲೆಗಳಿಗೆ ಈ ಬಗ್ಗೆ ನಿರ್ದೇಶನಾತ್ಮಕ ಆದೇಶ ಹೊರಡಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಬಹುದು. ಅರ್ಜಿಯನ್ನು ಇತ್ಯರ್ಥಪಡಿಸಲು ಸಿವಿಲ್ ನ್ಯಾಯಾಲಯಕ್ಕೆ ನ್ಯಾಯವ್ಯಾಪ್ತಿ ಇರುತ್ತದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ...
Ads on article

Advertise in articles 1

advertising articles 2

Advertise under the article