-->
ಎಕರೆ ಭೂಮಿ ಅಳತೆಗೆ ಲಕ್ಷಗಟ್ಟಲೆ ಲಂಚ: ಭ್ರಷ್ಟ ADLR ಬೆಂಡೆತ್ತಿದ ಜನತೆ; ಇಲಾಖೆ ತಪ್ಪಿಗೂ ಸತಾಯಿಸುತ್ತಿರುವ ಸರ್ವೇ ಇಲಾಖೆ

ಎಕರೆ ಭೂಮಿ ಅಳತೆಗೆ ಲಕ್ಷಗಟ್ಟಲೆ ಲಂಚ: ಭ್ರಷ್ಟ ADLR ಬೆಂಡೆತ್ತಿದ ಜನತೆ; ಇಲಾಖೆ ತಪ್ಪಿಗೂ ಸತಾಯಿಸುತ್ತಿರುವ ಸರ್ವೇ ಇಲಾಖೆ

ಎಕರೆ ಭೂಮಿ ಅಳತೆಗೆ ಲಕ್ಷಗಟ್ಟಲೆ ಲಂಚ: ಭ್ರಷ್ಟ ADLR ಬೆಂಡೆತ್ತಿದ ಜನತೆ; ಇಲಾಖೆ ತಪ್ಪಿಗೂ ಸತಾಯಿಸುತ್ತಿರುವ ಸರ್ವೇ ಇಲಾಖೆ





ದಕ್ಷಿಣ ಕನ್ನಡದಲ್ಲಿ ಸರ್ವೇ ಇಲಾಖೆಯ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ಒಂದು ಸೆಂಟ್ಸ್‌ಗೆ ಇಷ್ಟು... ಎಕರೆಗೆ ಇಷ್ಟು ಎಂಬ ಅಲಿಖಿತ ಲಂಚದ ಲೆಕ್ಕಾಚಾರ ಸರ್ವೇ ಇಲಾಖೆಯಲ್ಲಿ ನಡೆದಿದೆ.


ಸರ್ವೇ ಇಲಾಖೆಯ ಈ ಮಹಾ ಲಂಚಬಾಕತನದ ವಿರುದ್ಧ ಜನತೆ ಕಂಗೆಟ್ಟು ಹೋಗಿದ್ದು, ತಮ್ಮ ಆಕ್ರೋಶವನ್ನು ಇಲಾಖೆಯ ಅಧಿಕಾರಿಗಳ ವಿರುದ್ಧ ತೀರಿಸಿಕೊಂಡಿದ್ದಾರೆ.


Vedio Part:1

ಘಟನೆ 1:

ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಜಾನ್ ಎಂಬವರ ಪಹಣಿಯಲ್ಲಿ ಇಲಾಖೆಯ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಹೆಚ್ಚುವರಿಯಾಗಿ ಸ್ಟಾರ್ ಸಿಂಬಲ್ ನಮೂದಾಗಿತ್ತು. ಇದರಿಂದ ತಮ್ಮ ಜಾಗವನ್ನು ಮಾರಾಟ ಮಾಡಲು ಹಾಗೂ ಇನ್ನಿತರ ಕೆಲಸಗಳಿಗೆ ಅಡ್ಡಿ ಉಂಟಾಗಿತ್ತು.


ಈ ತಿದ್ದುಪಡಿ ಕೋರಿ ಅವರು ಕಡಬ ಸರ್ವೆ ಇಲಾಖೆಗೆ ಅರ್ಜಿ ನೀಡಿದ್ದರು. ಆದರೆ ಕಡಬ ಸರ್ವೆ ಇಲಾಖೆ ಸೂಪರ್‌ವೈಸರ್ ಅಧಿಕಾರಿ ಹಾಗೂ ಇತರರು ಹಣ ನೀಡುವಂತೆ ಪೀಡಿಸುತ್ತಿದ್ದು, ಮೂರು ತಿಂಗಳಿನಿಂದ ಸತಾಯಿಸುತ್ತಿದ್ದರು.



                                            Video Part:2

/


                                                Video Part:3


ಸ್ಥಳೀಯ ಮುಖಂಡ ರಾಯ್ ಅಬ್ರಹಾಂ ಹಾಗೂ ಸೈಯದ್ ಮೀರಾ ಸಾಹೇಬ್ ಸರ್ವೆ ಇಲಾಖೆಗೆ ಆಗಮಿಸಿ ADLR ಶ್ರೀನಿವಾಸ ಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು. ಭ್ರಷ್ಟ ಲಂಚಕೋರ ಎನ್ನಲಾದ ಸೂಪರ್‌ವೈಸರ್ ಚಂದ್ರಶೇಖರ ಮೂರ್ತಿ ಅವರ ಬಗ್ಗೆ ದೂರು ನೀಡಿದರು. ತಮ್ಮ ಕೆಳಗಿನ ಅಧಿಕಾರಿ, ಸಿಬ್ಬಂದಿ ಅವರನ್ನು ತನ್ನ ಚೇಂಬರ್‌ಗೆ ಕರೆಯಲು ADLR ತಡಬಡಾಯಿಸುತ್ತಿದ್ದರು.


"ಇಲ್ಲಿ ಎಲ್ಲ ಕೆಲಸಕ್ಕೂ ದುಡ್ಡು ಕೊಡಬೇಕಲ್ವ, ರೆಖಾರ್ಡ್ ಪಡೆಯುದಕ್ಕೆ ಮತ್ತು ಸರ್ವೆ ಕೆಲಸಗಳಿಗೆ ಎಷ್ಟು ದುಡ್ಡು ಪಡೆಯುತ್ತಿದ್ದಿರಿ, 50 ಸೆಂಟ್ಸ್ ಜಾಗಕ್ಕೆ 50 ಸಾವಿರ, 75  ಸೆಂಟ್ಸ್ ಗೆ 75 ಸಾವಿರ, 1 ಎಕ್ರೆಗೆ 1 ಲಕ್ಷದಂತೆ ತಗೊಳ್ತ ಇದ್ದಿರಲ್ವ..? ಏನು ನಿಮಗೆ ಸ್ವಲ್ಪನೂ ಮಾನ ಮರ್ಯಾದಿ ಇಲ್ವ, ಬಡವರಿಂದ ಈ ರೀತಿಯಾಗಿ ಹಣ ಪಡೆದು ಅವರನ್ನು ಸತಾಯಿಸುತ್ತಿದ್ದಿರಲ್ವ, ಹಣ ಕೊಡದಿದ್ದರೆ ಅರಣ್ಯ ಎಂದು ಸುಲಭದಲ್ಲಿ ಬರೆದು ಹಾಕ್ತಿರಿ, ದುಡ್ಡು ಕೊಟ್ಟವರಿಗೆ ಅರಣ್ಯನೂ ಇಲ್ಲ, ಸಾರ್ವಜನಿಕ ಕೆರೆಯೂ ಆಗ್ತದೆ, ಏನು ನೀವು ಇಲ್ಲಿ ಜಾಗ ಮಾರಾಟ ಮಾಡಲು ಕೂತಿದ್ದಿರಾ ಅಥಾವ ಜನರ ಸೇವೆ ಮಾಡಲು ಇದ್ದೀರಾ..? ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.


ಜಾನ್ ಅವರ ಸಮಸ್ಯೆಯನ್ನು ಈಗಲೇ ಸರಿ ಮಾಡಿಕೊಡುವಂತೆ ಅವರು ಪಟ್ಟು ಹಿಡಿದರು, ಬಳಿಕ ಈ ಬಗ್ಗೆ ದಾಖಲಾತಿಗಳ ಪ್ರಕ್ರಿಯೆ ಪ್ರಾರಂಭ ಮಾಡಿದ ಸೂಪರ್‌ವೈಸರ್ ಅವರು ಕೂಡಲೇ ಮಾಡಿ ಕೊಡುತ್ತೇನೆ ಎಂದು ಒಪ್ಪಿಕೊಂಡರು.


ಈ ವೇಳೆ ಕಚೇರಿಗೆ ಬಂದಿದ್ದ ಹಲವಾರು ಸಾರ್ವಜನಿಕರು ನಮ್ಮನ್ನು ಹಲವು ತಿಂಗಳುಗಳಿಂದ ಸತಾಯಿಸುತ್ತಿದ್ದಾರೆ ಇವರಿಗೆ ದೇವರೇ ಶಿಕ್ಷೆ ಕೊಡಬೇಕಷ್ಟೆ ಎಂದು ಹೇಳಿಕೊಳ್ಳುತ್ತಿದ್ದರು.


ಕಂದಾಯ ಇಲಾಖೆ, ಸರ್ವೆ ಇಲಾಖೆಯನ್ನು ಕೇಳೋರ್ಯಾರು?


ಇದೇ ಸಂದರ್ಭದಲ್ಲಿ ಅಲ್ಲಿದ್ದ ಹಲವಾರು ಅರ್ಜಿದಾರರು ಪ್ರತಿಕ್ರಿಯೆ ನೀಡಿ, ಇಲ್ಲಿ ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯಲ್ಲಿ ಹಣ ಕೊಡದೆ ಒಂದು ಫೈಲ್ ಕೂಡ ಮುಂದಕ್ಕೆ ಹೋಗುವುದಿಲ್ಲ, ಇವರನ್ನು ಕೇಳುವವರು ಯಾರು, ಇಲ್ಲಿ ಜನಪ್ರತಿನಿಧಿಗಳೇ ಬ್ರೋಕರ್ ಗಳ ಹಾಗೆ ಕೆಲಸ ಮಾಡುತ್ತಿದ್ದಾರೆ, ಅದೇ ಈ ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆಯಾಗಿದೆ. 


ಈ ಮಧ್ಯೆ ಬಡವರು ತಮ್ಮ ಕೆಲಸಕ್ಕೆ ಪ್ರತಿದಿನ ಬರುವುದಕ್ಕೆ ದುಡ್ಡು ಕೊಟ್ಟು ಹೇಗಾದರೂ ಮಾಡಿಸುತ್ತಿದ್ದಾರೆ ಇದು ಕಡಬದ ಪರಿಸ್ಥಿತಿ, ದೊಡ್ಡ ಅಧಿಕಾರಿಗಳು ದುಡ್ಡು ಕೇಳಿಯೇ ಪಡೆಯುತ್ತಿದ್ದಾರೆ, ಮತ್ತೆ ಅವರ ಕೆಳಗಿನ ಅಧಿಕಾರಿಗಳಿಗೆ ಯಾವ ಭಯವೂ ಇಲ್ಲದೆ ರಾಜರೋಷವಾಗಿ ಲಂಚ ಪಡೆಯುತ್ತಿದ್ದಾರೆ ಎಂದು ಅಲ್ಲಿದ್ದವರು ಹೇಳುತ್ತಿದ್ದರು.


Ads on article

Advertise in articles 1

advertising articles 2

Advertise under the article