-->
ಮಗುವನ್ನು ದತ್ತು ನೀಡಲು ಮಹಿಳೆಯ ವೈವಾಹಿಕ ಸ್ಥಿತಿ ನಿರ್ಧಾರಾತ್ಮಕ ಅಂಶವಲ್ಲ: ಹೈಕೋರ್ಟ್‌

ಮಗುವನ್ನು ದತ್ತು ನೀಡಲು ಮಹಿಳೆಯ ವೈವಾಹಿಕ ಸ್ಥಿತಿ ನಿರ್ಧಾರಾತ್ಮಕ ಅಂಶವಲ್ಲ: ಹೈಕೋರ್ಟ್‌

ಮಗುವನ್ನು ದತ್ತು ನೀಡಲು ಮಹಿಳೆಯ ವೈವಾಹಿಕ ಸ್ಥಿತಿ ನಿರ್ಧಾರಾತ್ಮಕ ಅಂಶವಲ್ಲ: ಹೈಕೋರ್ಟ್‌

ಹಿಂದೂ ದತ್ತು ಮತ್ತು ಜೀವನಾಂಶ ಕಾಯ್ದೆ 1956ರ ಅಡಿಯಲ್ಲಿ ಮಗು ದತ್ತು ಪಡೆಯುವಾಗ ವೈವಾಹಿಕ ಸ್ಥಿತಿ ನಿರ್ಧಾರ ಅಂಶವಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.


ಮದ್ರಾಸ್ ಹೈಕೋರ್ಟ್‌ನ ನ್ಯಾ. ಜಿ.ಆರ್. ಸ್ವಾಮಿನಾಥನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಮಗು ದತ್ತು ಪಡೆಯುವಾಗ ಮಹಿಳೆಯ ವೈವಾಹಿಕ ಸ್ಥಿತಿ ಅಪ್ರಸ್ತುತವಾಗಿದೆ. ಜೈವಿಕ ಮಗುವಿನ ಏಕೈಕ ಪಾಲಕಳಾದ ಮಹಿಳೆ ಮಗುವನ್ನು ದತ್ತು ನೀಡಲು ಸರ್ಮಥಳು ಎಂದು ಪರಿಗಣಿಸಬೇಕು, ಈ ಸಂದರ್ಭದಲ್ಲಿ ವೈವಾಹಿಕ ಸ್ಥಿತಿ ಪರಿಗಣಿಸಬಾರದು ಎಂದು ನ್ಯಾಯಪೀಠ ತಿಳಿಸಿದೆ.


ಮಗು ಅಕ್ರಮ ಸಂಬಂಧದಿಂದ ಜನಿಸಿದ್ದು, 2021ರಲ್ಲಿ ಮಗುವನ್ನು ದತ್ತು ಪಡೆದಾಗ ಆ ಮಗುವಿನ ಜೈವಿಕ ತಾಯಿ ಅಪ್ರಾಪ್ತ ವಯಸ್ಕಳಾಗಿದ್ದಳು ಎಂಬ ಕಾರಣಕ್ಕೆ ಮೂರು ವರ್ಷದ ಮಗುವಿನ ದತ್ತು ಪತ್ರ ನೋಂದಾಯಿಸಲು ನಿರಾಕರಿಸಿ ಉಪ ನೋಂದಣಾಧಿಕಾರಿಯವರು ಜನವರಿ 2022ರಲ್ಲಿ ಹೊರಡಿಸಿದ್ದ ಆದೇಶವನ್ನು ನ್ಯಾಯಪೀಠ ರದ್ದುಗೊಳಿಸಿತು.

Ads on article

Advertise in articles 1

advertising articles 2

Advertise under the article