ಬಾಡಿಗೆ ತಾಯ್ತನ: ಸರ್ಕಾರಿ ನೌಕರರಿಗೆ ಮಾತೃತ್ವ ರಜೆ ಇನ್ನು 180 ದಿನ- 50 ವರ್ಷಗಳ ಕಾಯ್ದೆಗೆ ತಿದ್ದುಪಡಿ
ಬಾಡಿಗೆ ತಾಯ್ತನ: ಸರ್ಕಾರಿ ನೌಕರರಿಗೆ ಮಾತೃತ್ವ ರಜೆ ಇನ್ನು 180 ದಿನ- 50 ವರ್ಷಗಳ ಕಾಯ್ದೆಗೆ ತಿದ್ದುಪಡಿ
ಸರ್ಕಾರಿ ನೌಕರಿಯಲ್ಲಿ ಇರುವ ಮಹಿಳೆಯರು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದರೆ ಇನ್ನು ಮುಂದೆ 180 ದಿನಗಳ ಮಾತೃತ್ವ ರಜೆ ದೊರೆಯಲಿದೆ.
ಇದಕ್ಕೆ ಸಂಬಂಧಿಸಿದಂತೆ 50 ವರ್ಷಗಳ ಹಿಂದಿನ ಕಾಯ್ದೆಗೆ ತಿದ್ದುಪಡಿ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ, ಈ ಸೌಲಭ್ಯ ಎರಡಕ್ಕಿಂತ ಕಡಿಮೆ ಮಕ್ಕಳಿರುವ ತಾಯಂದಿರಿಗೆ ಮಾತ್ರ ಲಭ್ಯವಾಗಲಿದೆ.
ಕೇಂದ್ರ ನಾಗರಿಕ ಸೇವೆಗಳ (ರಜೆ) ನಿಯಮ- 1972 ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ತಾಯಿಗೆ ಮಾತೃತ್ವ ರಜೆ ಮತ್ತು ತಂದೆಗೆ 15 ದಿನಗಳ ಪಿತೃತ್ವ ರಜೆಯ ಅವಕಾಶ ದೊರೆಯಲಿದೆ.
ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಪ್ರಕರಣಗಳಲ್ಲಿ ಮಗು ಹೆರುವ ತಾಯಿ ಹಾಗೂ ಮಗು ಪಡೆಯಲಿರುವ ತಾಯಿ (ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದ್ದರೆ) 180 ದಿನಗಳ ಮಾತೃತ್ವದ ರಜೆ ಪಡೆಯಲು ಅವಕಾಶ ಇದೆ ಎಂದು ಸಿಬ್ಬಂದಿ ಸಚಿವಾಲಯದ ಅಧಿಸೂಚನೆ ತಿಳಿಸಿದೆ.