ಗನ್ ತೋರಿಸಿ ಮಹಿಳಾ ಹೆಡ್‌ಕಾನ್ಸ್‌ಟೆಬಲ್ ಮೇಲೆ ಅತ್ಯಾಚಾರ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಂಧನ
ಗನ್ ತೋರಿಸಿ ಮಹಿಳಾ ಹೆಡ್‌ಕಾನ್ಸ್‌ಟೆಬಲ್ ಮೇಲೆ ಅತ್ಯಾಚಾರ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಂಧನ
ಮಹಿಳಾ ಪೊಲೀಸ್ ಹೆಡ್ ಕಾನ್ಸ್‌ಟೆಬಲ್‌ಗೆ ಗನ್ ತೋರಿಸಿ ಅತ್ಯಾಚಾರ ನಡೆಸಿದ ಘಟನೆ ತೆಲಂಗಾಣದ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಕೃತ್ಯವೆಸಗಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನನ್ನು ಇಲಾಖೆಯಿಂದ ಅಮಾನತುಗೊಳಿಸಿ ಬಂಧಿಸಲಾಗಿದೆ.
ಮಹಿಳಾ ಹೆಡ್ ಕಾನ್‌ಸ್ಟೆಬಲ್ ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳಾ ಹೆಡ್‌ಕಾನ್ಸ್‌ಟೆಬಲ್ ವಿರುದ್ಧದ ಆರೋಪ ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.
ನೀರಾವರಿ ಯೋಜನೆಯ ವಸತಿ ಸೌಲಭ್ಯದ ಅತಿಥಿ ಕೊಠಡಿಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಎಸ್‌ಐ ತನ್ನ ಮೇಲೆ ರಿವಾಲ್ವರ್ ಗುರಿ ಇಟ್ಟು ಬೆದರಿಸಿ ತನ್ನ ಮೇಲೆ ಲೈಂಗಿಕ ಕ್ರಿಯೆ ಮಾಡಿ ಅತ್ಯಾಚಾರ ಎಸಗಿದ್ದಾನೆ ಮತ್ತು ಈ ಕೃತ್ಯವನ್ನು ಎಲ್ಲೂ ಬಾಯಿಬಿಡಬಾರದು ಎಂದು ದೂರಿನಲ್ಲಿ ಹೇಳಿದ್ದಾರೆ.