-->
ಸ್ಟ್ಯಾಂಪ್ ಡ್ಯೂಟಿ ಪಾವತಿ: ಬದಲಾದ ನ್ಯಾಯಾಲಯದ ಪಾವತಿ ವಿಧಾನ- ಎಲ್ಲ ನ್ಯಾಯಾಲಯಗಳಿಗೆ ಹೈಕೋರ್ಟ್‌ ಮಹತ್ವದ ಸೂಚನೆ

ಸ್ಟ್ಯಾಂಪ್ ಡ್ಯೂಟಿ ಪಾವತಿ: ಬದಲಾದ ನ್ಯಾಯಾಲಯದ ಪಾವತಿ ವಿಧಾನ- ಎಲ್ಲ ನ್ಯಾಯಾಲಯಗಳಿಗೆ ಹೈಕೋರ್ಟ್‌ ಮಹತ್ವದ ಸೂಚನೆ

ಸ್ಟ್ಯಾಂಪ್ ಡ್ಯೂಟಿ ಪಾವತಿ: ಬದಲಾದ ನ್ಯಾಯಾಲಯದ ಪಾವತಿ ವಿಧಾನ- ಎಲ್ಲ ನ್ಯಾಯಾಲಯಗಳಿಗೆ ಹೈಕೋರ್ಟ್‌ ಮಹತ್ವದ ಸೂಚನೆ





ಕರ್ನಾಟಕ ಮುದ್ರಾಂಕ ಶುಲ್ಕ ಕಾಯ್ದೆಯಡಿ ನ್ಯಾಯಾಲಯವು ಪಾವತಿಸಲು ಆದೇಶಿಸಿದ ಸ್ಟಾಂಪ್ ಡ್ಯೂಟಿ ಅಂಡ್ ಪೆನಾಲ್ಟಿ, ಹಾಗೂ ಆರ್ಬಿಟೇಶನ್ ಅವಾರ್ಡ್, ಸೇಲ್ ಸರ್ಟಿಫಿಕೇಟ್, ನ್ಯಾಯಾಲಯದ ವಿಭಾಗ ಪತ್ರ ಮುಂತಾದ ದಾಖಲೆಗಳ ಮೇಲೆ ಪಾವತಿಸಬೇಕಾದ ನಾನ್ ಜುಡಿಷಿಯಲ್ ಸ್ಟ್ಯಾಂಪ್ ಶುಲ್ಕವನ್ನು K 2 ಚಲನ್ ಮೂಲಕ ಇದು ವರೆಗೂ ಸಂಬಂಧಪಟ್ಟ ನ್ಯಾಯಾಲಯದ ಡಿಡಿಒ ಕೋಡ್ ಮೂಲಕ ಈ ಕೆಳಗಿನ ಲೆಕ್ಕ ಶೀರ್ಷಿಕೆಗೆ ಪಾವತಿಸಲಾಗುತ್ತಿತ್ತು.


*0030-02-102-0-01*


ದಿನಾಂಕ 5.6.2024ರಂದು ಮಾನ್ಯ ಕರ್ನಾಟಕ ಹೈಕೋರ್ಟ್ ನ ಮಹಾ ವಿಲೇಖನಾಧಿಕಾರಿಗಳು ತಮ್ಮ ಪತ್ರ ಸಂಖ್ಯೆ HCB/81/RECON-MISC/2020 ಪ್ರಕಾರ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ, ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಧೀಶ ರಿಗೆ, ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ, ಕೈಗಾರಿಕಾ ನ್ಯಾಯ ಮಂಡಳಿಯ ಪೀಠಾಸೀನಾಧಿಕಾರಿಗಳಿಗೆ ಮತ್ತು ಬೆಂಗಳೂರಿನ ಲಘು ವ್ಯವಹಾರಗಳ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ನೀಡಿದ ಸೂಚನೆ ಈ ಕೆಳಗಿನಂತಿದೆ.


ನ್ಯಾಯಾಲಯದಲ್ಲಿ ಸ್ವೀಕೃತವಾದ ನಾನ್ ಜುಡಿಶಿಯಲ್ ಸ್ಟ್ಯಾಂಪ್ ಬಾಬ್ತು ಮೊಬಲಗನ್ನು 0030-02-102-0-01 ಈ ಲೆಕ್ಕ ಶೀರ್ಷಿಕೆಗೆ K2 ಚಲನ್ ನಲ್ಲಿ Department of Stamps and Registration ಅನ್ನು ಹಾಗೂ ಸಂಬಂಧಪಟ್ಟ ಡಿಡಿಒ ಆಯ್ಕೆ ಮಾಡಿ ಪಾವತಿಸತಕ್ಕದ್ದು. ಏಕೆಂದರೆ ಸಂಗ್ರಹವಾದ ಮೊಬಲಗು ನೋಂದಣಿ ಮತ್ತು ಮದ್ರಾಂಕ ಇಲಾಖೆಗೆ ಸಂಬಂಧ ಪಟ್ಟಿದ್ದಾಗಿರುತ್ತದೆ. 


ಈ ಹಿಂದೆ ನ್ಯಾಯಾಂಗ ಇಲಾಖೆಯ ಹೆಸರಿನಲ್ಲಿ K2 ಚಲನ್ ಮೂಲಕ ಪಾವತಿಸಲು ಅವಕಾಶವಿತ್ತು. ಈಗ ನೋಂದಣಿ ಇಲಾಖೆಯ ಹೆಸರಿನಲ್ಲಿ K2 ಚಲನ್ ಮೂಲಕ ಪಾವತಿ ಮಾಡತಕ್ಕದ್ದಾಗಿದೆ. ಈ ಮಾಹಿತಿಯನ್ನು ತಮ್ಮ ಅಧೀನದಲ್ಲಿರುವ ಎಲ್ಲಾ ನ್ಯಾಯಾಲಯಗಳ ಡಿಡಿಒ ಅವರ ಅವಗಾಹನೆಗೆ ತರಲು ನ್ಯಾಯಾಂಗ ಇಲಾಖೆಯ ಎಲ್ಲಾ ಘಟಕದ ಮುಖ್ಯಸ್ಥರಿಗೆ ಸೂಚಿಸಲಾಗಿದೆ.


ಬದಲಾದ ಪಾವತಿ ವಿಧಾನ ಈ ಕೆಳಗಿನ ಉಪ ಉದ್ದೇಶಗಳಿಗೆ ಸಂಬಂಧಪಟ್ಟ K2 ಚಲನ್ ಪಾವತಿಗಳಿಗೆ ಸಂಬಂಧಪಟ್ಟದ್ದಾಗಿದೆ.


1. Court order-Duty/ Stamp Duty/Duty and Penalty.


2. Court order -Deficit Stamp Duty.


3. Court order -Revenue stamp fee.


4. Court order -Receipts on non judicial stamp.


5.Court order - others


ಮಾಹಿತಿ: ಪ್ರಕಾಶ್ ನಾಯಕ್, ಶಿರಸ್ತೆದಾರರು, ನ್ಯಾಯಾಂಗ ಇಲಾಖೆ, ಮಂಗಳೂರು




Ads on article

Advertise in articles 1

advertising articles 2

Advertise under the article