-->
ಕೇಂದ್ರ ಸರಕಾರದಿಂದ ಸಿಗುತ್ತಿದೆ ಉಚಿತ ಮನೆ! ಪಡೆದುಕೊಳ್ಳೋದು ಹೇಗೆ? ಇಲ್ಲಿದೆ ನೋಡಿ ಮಾಹಿತಿ| PMAY

ಕೇಂದ್ರ ಸರಕಾರದಿಂದ ಸಿಗುತ್ತಿದೆ ಉಚಿತ ಮನೆ! ಪಡೆದುಕೊಳ್ಳೋದು ಹೇಗೆ? ಇಲ್ಲಿದೆ ನೋಡಿ ಮಾಹಿತಿ| PMAY

ಕೇಂದ್ರ ಸರಕಾರದಿಂದ ಸಿಗುತ್ತಿದೆ ಉಚಿತ ಮನೆ! ಪಡೆದುಕೊಳ್ಳೋದು ಹೇಗೆ? ಇಲ್ಲಿದೆ ನೋಡಿ ಮಾಹಿತಿ| PMAY

ಸ್ವಂತವಾದ ಮನೆಯೊಂದು ಇರಬೇಕು ಎನ್ನುವುದು ಎಲ್ಲರ ಕನಸು. ಆದರೆ ಗಗನಕ್ಕೇರಿದ ಭೂಮಿಯ ಬೆಲೆ, ಗೃಹನಿರ್ಮಾಣ ಸಾಮಾಗ್ರಿಗಳ ಬೆಲೆಯಿಂದಾಗಿ ಅದೆಷ್ಟೋ ಬಡವರಿಗೆ ಸ್ವಂತ‌ ಮನೆ ಎನ್ನುವುದು ಕನಸಾಗಿಯೇ ಉಳಿದುಕೊಂಡಿದೆ. ಇಂತಹ ಸ್ವಂತ ಸೂರಿಲ್ಲದ ಜನರಿಗೆ ಮನೆ ಕಟ್ಟಿಕೊಳ್ಳುವ ಕನಸನ್ನು ಕೇಂದ್ರ ಸರಕಾರ ನನಸು ಮಾಡುತ್ತಿದೆ. ಅದು ಹೇಗೆ ಎಂದರೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೂಲಕ.


ಹೌದು, ಪ್ರಧಾನಮಂತ್ರಿ ಆವಾಸ್ ಯೋಜನೆ (PM Awas Yojana) ಎನ್ನುವುದು ಕೇಂದ್ರ ಸರಕಾರವು ಬಡ ಅರ್ಹ ಕುಟುಂಬಗಳಿಗೆ ಸೂರು ಭಾಗ್ಯ ನೀಡುವ ಸಲುವಾಗಿ ತಂದಿರುವ ಯೋಜನೆ. ಇದರಿಂದ ಎಷ್ಟು ಕುಟುಂಬಗಳು ತಮ್ಮ ಸ್ವಂತ ಸೂರಿನಡಿ ಜೀವನ ನಡೆಸುವಂತಾಗಿದೆ.


ಇದೀಗ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಮೋದಿಯವರು ನಡೆಸಿದ ಪ್ರಥಮ ಸಚಿವ ಸಂಪುಟ ಸಭೆಯಲ್ಲಿ ದೇಶದಾದ್ಯಂತ 3 ಕೋಟಿ ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಈ ಮೂಲಕ ಯೋಜನೆ ಮತ್ತೆ ಬೂಸ್ಟ್ ಪಡೆದುಕೊಂಡಿದ್ದು ಕೋಟ್ಯಾಂತರ ಮಂದಿ ಬಡವರ ಬಾಳಲ್ಲಿ ಆಶಾಕಿರಣ ಮೂಡಿಸಿದೆ‌.


ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಯಾರು ಅರ್ಹರು? ಯೋಜನೆಗೆ ಅರ್ಜಿ ಹಾಕುವುದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು? ಬನ್ನಿ ತಿಳಿದುಕೊಳ್ಳೋಣ.


ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅಗತ್ಯವಿರುವ ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು. ಇಲ್ಲದಿದ್ದರೆ ಅರ್ಜಿದಾರರನ್ನು ಅನರ್ಹಗೊಳಿಸಲಾಗುತ್ತದೆ.


ಅರ್ಜುದಾರರು ತಮ್ಮ ಗುರುತಿನ ಚೀಟಿಹೊ‌ಂದಿರಬೇಕು. ಭಾರತದಲ್ಲಿ ಶಾಶ್ವತ ನಿವಾಸವನ್ನು ಹೊಂದಿರಬೇಕು.


ಅರ್ಜಿದಾರರು ಕಡಿಮೆ ಆದಾಯದ ಗುಂಪು (LIG), ಆರ್ಥಿಕವಾಗಿ ದುರ್ಬಲ ವಿಭಾಗ (EWS) ಮತ್ತು ಮಧ್ಯಮ ಆದಾಯ ಗುಂಪು (MIG) ಮೂರು ವಿಭಾಗಗಳಲ್ಲಿ ಒಂದಕ್ಕೆ ಸೇರಿರಬೇಕು.


ಅರ್ಜಿದಾರರ ಹಿನ್ನೆಲೆ ಶುದ್ಧವಾಗಿರಬೇಕು. ಅಂದರೆ ಈ ಹಿಂದೆ ಕಾನೂನುಬದ್ಧವಾಗಿ ದುಷ್ಕೃತ್ಯ ಅಥವಾ ಅಪರಾಧದಲ್ಲಿ ಭಾಗಿಯಾಗಿರಬಾರದು.


ಅರ್ಜಿದಾರರು ಅರ್ಜಿಯ ಜೊತೆಗೆ ಈ ದಾಖಲೆಗಳನ್ನು ನೀಡಬೇಕಾಗುತ್ತದೆ.
1.ಆದಾಯ ಪ್ರಮಾಣ ಪತ್ರ


2.ಆಸ್ತಿಯ ಮೌಲ್ಯಮಾಪನದ ಪ್ರಮಾಣಪತ್ರ


3.ಸಕ್ಷಮ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರ


4.ಅರ್ಜಿದಾರ ಅಥವಾ ಅರ್ಜಿದಾರರ ಕುಟುಂಬವು ಭಾರತದಲ್ಲಿ ಯಾವುದೇ ಮನೆಯನ್ನು ಹೊಂದಿಲ್ಲ ಎಂದು ತೋರಿಸುವ ಅಫಿಡವಿಟ್.


5.ಮತದಾರರ ಗುರುತಿನ ಚೀಟಿ


6.PAN ಕಾರ್ಡ್ ಮತ್ತು ಆಧಾರ್ ಕಾರ್ಡ್


7.ವಿಳಾಸ ಪುರಾವೆ ಪ್ರತಿ – ನಿವಾಸ ಪ್ರಮಾಣಪತ್ರ,


8.ಪಾಸ್‌ಪೋರ್ಟ್ ಮತ್ತು ಆಧಾರ್ ಕಾರ್ಡ್


9.ಯೋಜನಾ ಸಬ್ಸಿಡಿಯನ್ನು ಜಮಾ ಮಾಡುವ ಬ್ಯಾಂಕ್ ಖಾತೆಯ ವಿವರಗಳು


10 ಅರ್ಜಿದಾರರ ಪಾಸ್ ಪೋರ್ಟ್ ಸೈಝ್ ಭಾವಚಿತ್ರ.


11.ಅರ್ಜಿದಾರರ ಮೊಬೈಲ್ ಸಂಖ್ಯೆ


ಅರ್ಜಿ ಸಲ್ಲಿಕೆ ಹೇಗೆ?


ಅರ್ಜಿ ನಮೂನೆಯನ್ನು ಭರ್ತಿ ಮಾಡಲು, ಮೊದಲು ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.


ಈಗ ಅಧಿಕೃತ ವೆಬ್‌ಸೈಟ್‌ನ ಮುಖಪುಟವು ನಿಮ್ಮ ಮುಂದೆ ತೆರೆಯುತ್ತದೆ.


ಮುಖಪುಟದಲ್ಲಿ ನೀವು ಮೆನು ಆಯ್ಕೆಯನ್ನು ಕ್ಲಿಕ್ ಮಾಡಬೇಕು.


ಮೆನು ಆಯ್ಕೆಯಲ್ಲಿ ನೀವು ಸಿಟಿಜನ್ ಅಸೆಸ್ಮೆಂಟ್ ಆಯ್ಕೆಯನ್ನು ಪಡೆಯುತ್ತೀರಿ. ಅದರ ಮೇಲೆ ನೀವು ಕ್ಲಿಕ್ ಮಾಡಬೇಕು.


ನಾಲ್ಕು ಆಯ್ಕೆಗಳು ನಿಮ್ಮ ಮುಂದೆ ತೆರೆದುಕೊಳ್ಳುತ್ತವೆ, ಅದರಲ್ಲಿ ನಿಮ್ಮ ಆಯ್ಕೆಯ ಪ್ರಕಾರ ನೀವು ಒಂದು ಆಯ್ಕೆಯನ್ನು ಆರಿಸಬೇಕಾಗುತ್ತದೆ.


ಬಳಿಕ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.


ಈಗ ನೀವು ನಿಮ್ಮ ಹೆಸರು ಮತ್ತು ನಿಮ್ಮ ಶಾಶ್ವತ ನಿವಾಸದ ವಿವರಗಳನ್ನು ಭರ್ತಿ ಮಾಡಬೇಕು ಮತ್ತು ಚೆಕ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.


ಈಗ ಅರ್ಜಿ ನಮೂನೆಯು ನಿಮ್ಮ ಮುಂದೆ ತೆರೆಯುತ್ತದೆ.ಇದರಲ್ಲಿ ನಿಮ್ಮ ದಾಖಲೆಗಳ ಪ್ರಕಾರ ಕೇಳಲಾದ ಎಲ್ಲಾ ಪ್ರಮುಖ ಮಾಹಿತಿಯನ್ನು ನೀವು ಭರ್ತಿ ಮಾಡಬೇಕು.


ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿದ ನಂತರ, ನೀವು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಬೇಕು.


ಕ್ಲಿಕ್ ಮಾಡಿದ ನಂತರ, ಪ್ರಧಾನ ಮಂತ್ರಿ ಆವಾಸ್ ಯೋಜನೆ 2024 ಗಾಗಿ ನಿಮ್ಮ ಅರ್ಜಿಯನ್ನು ಭರ್ತಿ ಮಾಡಲಾಗುತ್ತದೆ.


ಈಗ ನೀವು ಭರ್ತಿ ಮಾಡಿದ ನಮೂನೆಯ ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು.


ಈ ಮುದ್ರಣದ ಸಹಾಯದಿಂದ, ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಪಟ್ಟಿಯ ಸ್ಥಿತಿಯನ್ನು ಪರಿಶೀಲಿಸಬಹುದು.


ಈ ಮೂಲಕ ನಿಮ್ಮ ಕನಸಿನ ಮನೆಗೆ ಅರ್ಜಿ ಸಲ್ಲಿಕೆ‌ಮಾಡಿ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು.


Ads on article

Advertise in articles 1

advertising articles 2

Advertise under the article