-->
ಕರ್ನಾಟಕ ವೈದ್ಯಕೀಯ ಪರಿಷತ್ತು ನ್ಯಾಯಯುತವಾಗಿರಬೇಕು: 100ಕ್ಕೂ ಅಧಿಕ ಗಣ್ಯರ ಒಕ್ಕೊರಳ ಆಗ್ರಹ

ಕರ್ನಾಟಕ ವೈದ್ಯಕೀಯ ಪರಿಷತ್ತು ನ್ಯಾಯಯುತವಾಗಿರಬೇಕು: 100ಕ್ಕೂ ಅಧಿಕ ಗಣ್ಯರ ಒಕ್ಕೊರಳ ಆಗ್ರಹ

ಕರ್ನಾಟಕ ವೈದ್ಯಕೀಯ ಪರಿಷತ್ತು ನ್ಯಾಯಯುತವಾಗಿರಬೇಕು: 100ಕ್ಕೂ ಅಧಿಕ ಗಣ್ಯರ ಒಕ್ಕೊರಳ ಆಗ್ರಹ





ಕರ್ನಾಟಕ ವೈದ್ಯಕೀಯ ಪರಿಷತ್ತು ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳಿಗೆ ಕಾಲಬದ್ಧವಾಗಿ ನ್ಯಾಯಯುತ ಚುನಾವಣೆಗಳು ಮತ್ತು ನಾಮನಿರ್ದೇಶನಗಳಾಗಬೇಕು, ಅಧಿಕಾರದಲ್ಲಿರುವ ಸದಸ್ಯರು ಪಟ್ಟಭದ್ರರಾಗಿ ಕಾನೂನನ್ನು ದುರ್ಬಳಕೆ ಮಾಡಿ ಮುಂದುವರಿಯಲು ಅವಕಾಶವಿರಕೂಡದು


ಕರ್ನಾಟಕ ವೈದ್ಯಕೀಯ ಪರಿಷತ್ತು ಮತ್ತು ಇತರ ಸಂಸ್ಥೆಗಳಿಗೆ ನಾಮನಿರ್ದೇಶನ ಮಾಡುವಾಗ ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳವರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುವುದನ್ನು ಕಾನೂನಿನ ತಿದ್ದುಪಡಿಗಳ ಮೂಲಕ ಕಡ್ಡಾಯಗೊಳಿಸಬೇಕು; ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯಗಳವರನ್ನಷ್ಟೇ ಇಂಥ ಸಂಸ್ಥೆಗಳಲ್ಲೂ ತುಂಬಿಸುವುದು ಅಪೇಕ್ಷಣೀಯವಲ್ಲ, ನ್ಯಾಯಯುತವಲ್ಲ.


ಕರ್ನಾಟಕ ವೈದ್ಯಕೀಯ ಪರಿಷತ್ತಿನಲ್ಲಿ ದೂರುಗಳ ವಿಚಾರಣೆಯಾಗುವಾಗ ಜನಸಾಮಾನ್ಯರ ಪ್ರತಿನಿಧಿಯಾಗಿ ನಿವೃತ್ತ ನ್ಯಾಯಾಧೀಶರು, ವಿಶ್ರಾಂತ ಕುಲಪತಿಗಳು ಅಥವಾ ತತ್ಸಮಾನರಾದವರು ವೀಕ್ಷಕರಾಗುವಂತೆ ಕಾಯಿದೆಯಲ್ಲಿ ಅವಕಾಶ ಕಲ್ಪಿಸಬೇಕು.


ರಾಜ್ಯದ ಎಲ್ಲಾ ಆಧುನಿಕ ವೈದ್ಯರನ್ನು ನೋಂದಾಯಿಸಿಕೊಂಡು, ವೃತ್ತಿ ಸಂಹಿತೆಯ ಉಲ್ಲಂಘನೆ ಹಾಗೂ ಚಿಕಿತ್ಸೆಯ ಲೋಪಗಳ ಬಗ್ಗೆ ಜನಸಾಮಾನ್ಯರ ದೂರುಗಳನ್ನು ವಿಚಾರಣೆಗೊಳಪಡಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಹೊಂದಿರುವ ಸ್ವಾಯತ್ತ, ಅರೆ-ನ್ಯಾಯಿಕ, ಸಾಂವಿಧಾನಿಕ ಸಂಸ್ಥೆಯಾಗಿರುವ ಕರ್ನಾಟಕ ವೈದ್ಯಕೀಯ ಪರಿಷತ್ತು (ಕೆಎಂಸಿ) 13 ವರ್ಷಗಳ ಬಳಿಕ ಈಗ ತಾನೇ ಹೊಸ ಸದಸ್ಯರು ಹಾಗೂ ಅಧ್ಯಕ್ಷ, ಉಪಾಧ್ಯಕ್ಷರನ್ನು ಪಡೆದಿದೆ.


ರಾಜ್ಯದ ವೈದ್ಯರಿಂದಲೇ ಚುನಾಯಿಸಲ್ಪಡುವ 12 ವೈದ್ಯರು ಹಾಗೂ ಸರಕಾರದಿಂದ ನಾಮ ನಿರ್ದೇಶನಗೊಳ್ಳುವ ಐದು ಸದಸ್ಯರನ್ನು ಹೊಂದಿರುವ ಕೆಎಂಸಿಯ ಚುನಾವಣೆಗಳು ಒಂದು ದಶಕದಷ್ಟು ತಡವಾದದ್ದು, ನಾಮನಿರ್ದೇಶನಗಳನ್ನು ಮಾಡುವಾಗ ಕಾಯಿದೆಯನ್ನು ಪಾಲಿಸದೇ ಇದ್ದದ್ದು, ಇವೆಲ್ಲಕ್ಕೂ ರಾಜ್ಯದ ಕೆಲವು ವೈದ್ಯರು ಎರಡೆರಡು ಉಚ್ಚ ನ್ಯಾಯಾಲಯಗಳಲ್ಲಿ ಸುದೀರ್ಘವಾದ ಕಾನೂನು ಹೋರಾಟಗಳನ್ನು ನಡೆಸಬೇಕಾಗಿ ಬಂದದ್ದು ಎಲ್ಲಾ ಪ್ರಜ್ಞಾವಂತರನ್ನೂ ಕಾಡಬೇಕಾದ ಸಂಗತಿಯಾಗಿದೆ.


ಇದೇ ಕೆಎಂಸಿಯೆದುರು ವೈದ್ಯಕೀಯ ನಿರ್ಲಕ್ಷ್ಯದ ಮುನ್ನೂರಕ್ಕೂ ಹೆಚ್ಚು ಪ್ರಕರಣಗಳು ವರ್ಷಗಟ್ಟಲೆಯಿಂದ ವಿಚಾರಣೆಗೆ ಬಾಕಿಯಿದ್ದು, ಈ ಹಿಂದಿನ ಸದಸ್ಯರು ವಿಚಾರಣೆಯನ್ನು ಮುಂದೂಡುತ್ತಲೇ ಹೋದುದರಿಂದ ಸಂತ್ರಸ್ತರಿಗೆ ಇದುವರೆಗೂ ನ್ಯಾಯ ದೊರೆತಿಲ್ಲ ಎನ್ನುವುದು ಇಂದಿನ ಪತ್ರಿಕೆಯಲ್ಲೇ ವರದಿಯಾಗಿರುವುದು ಈ ಸಾಂವಿಧಾನಿಕ ಸಂಸ್ಥೆಯು ನ್ಯಾಯಬದ್ಧವಾಗಿರಬೇಕಾದ ಮಹತ್ವವನ್ನು ತೋರಿಸುತ್ತದೆ. ಹೀಗೆ ವೈದ್ಯರಿಗಷ್ಟೇ ಅಲ್ಲ, ಜನರಿಗೂ ನ್ಯಾಯವೊದಗಿಸಬೇಕಾದ ಗುರುತರವಾದ ಜವಾಬ್ದಾರಿಯನ್ನು ಹೊಂದಿರುವ ವೈದ್ಯಕೀಯ ಪರಿಷತ್ತು ನ್ಯಾಯಬದ್ಧವಾಗಿ, ಪ್ರಾಮಾಣಿಕ ಸದಸ್ಯರನ್ನು ಹೊಂದಿರುವುದು ಅತ್ಯಗತ್ಯವಾಗಿರುವುದರಿಂದ ಇನ್ನಾದರೂ ಇಂಥ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಸರಕಾರವು ಹೆಚ್ಚು ಮುತುವರ್ಜಿಯನ್ನು ವಹಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ.


ಕೆಎಂಸಿಯಲ್ಲಿ 2011ರಲ್ಲಿ ಚುನಾಯಿತರಾಗಿ ಅಧಿಕಾರದಲ್ಲಿದ್ದವರು ಕಾಲಕ್ಕೆ ಸರಿಯಾಗಿ ಚುನಾವಣೆ ನಡೆಸದಿದ್ದುದರಿಂದ, ರಾಜ್ಯ ಸರಕಾರವೂ ನಿರಾಸಕ್ತವಾಗಿದ್ದುದರಿಂದ, ಕೆಲವು ವೈದ್ಯರು ಚುನಾವಣೆಗಾಗಿ ಆಗ್ರಹಿಸಿ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಅದನ್ನು ಮನ್ನಿಸಿ ಚುನಾವಣೆ ನಡೆಸುವಂತೆ ನ್ಯಾಯಾಲಯವು ಆದೇಶಿಸಿದರೂ ಕೆಎಂಸಿಯ ಪದಾಧಿಕಾರಿಗಳು, ರಿಜಿಸ್ಟ್ರಾರ್ ಮತ್ತು ಸರಕಾರ ಎಲ್ಲರೂ ಅದನ್ನು ಕಡೆಗಣಿಸಿ ಚುನಾವಣೆ ನಡೆಸಲಿಲ್ಲ, ಆಗ ಆ ವೈದ್ಯರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕಾಯಿತು. ಕೊನೆಗೆ ಉಚ್ಚ ನ್ಯಾಯಾಲಯದ ಕಟ್ಟಪ್ಪಣೆಯ ಮೇರೆಗೆ ಜನವರಿ 2020ರಲ್ಲಿ ಚುನಾವಣೆಗಳು ನಡೆದವು. ಆದರೆ ಪಟ್ಟಭದ್ರರಾಗಿ ಕುಳಿತಿದ್ದವರು ಹೊಸ ಸದಸ್ಯರು ಅಧಿಕಾರ ವಹಿಸದಂತೆ ಕಲ್ಬುರ್ಗಿ ಪೀಠದಿಂದ ತಡೆಯಾಜ್ಞೆ ತಂದರು. ಅದನ್ನು ವಿರೋಧಿಸಿ ಮತ್ತೆ ಹೋರಾಡಬೇಕಾಯಿತು.


ಆಗಲೂ ಸರಕಾರವು ವಿಶೇಷ ಆಸಕ್ತಿಯನ್ನೇನೂ ತೋರಿಸಲಿಲ್ಲ. ಅಂತೂ ಕೊನೆಗೆ ನವೆಂಬರ್ 2023ರಲ್ಲಿ, ಚುನಾವಣೆಗಳಾಗಿ ಸುಮಾರು ನಾಲ್ಕು ವರ್ಷಗಳ ಬಳಿಕ, ಮಾನ್ಯ ನ್ಯಾಯಾಲಯವು ತಡೆಯಾಜ್ಞೆ ತೆರವುಗೊಳಿಸಿ ಚುನಾಯಿತ ಸದಸ್ಯರು ಅಧಿಕಾರ ವಹಿಸಿಕೊಳ್ಳುವಂತಾಯಿತು. ಹೊಸ ಸದಸ್ಯರು ಬರುವವರೆಗೆ ಹಳಬರು ಮುಂದುವರಿಯುತ್ತಾರೆ ಎಂದು ಕೆಎಂಸಿಯ ಕಾಯಿದೆಯ ಐದನೇ ಕಂಡಿಕೆಯಲ್ಲಿ ನೀಡಿರುವ ತಾತ್ಕಾಲಿಕ ಅವಕಾಶವನ್ನೇ ದುರುಪಯೋಗಿಸಿಕೊಂಡು, ಹೊಸ ಸದಸ್ಯರೇ ಬಾರದಂತೆ ತಡೆದು ಹಳಬರೇ ಹದಿಮೂರು ವರ್ಷಗಳ ಕಾಲ ಮುಂದುವರಿಯಲು ಸಾಧ್ಯವಾದುದು ಸಾಂವಿಧಾನಿಕ ಸಂಸ್ಥೆಯಲ್ಲಿ ಕಾನೂನಿಗೆ ಆಗಿರುವ ಅಪಚಾರವಾಗಿದ್ದು, ಇನ್ನೆಂದಿಗೂ ಇಂಥವು ಪುನರಾವರ್ತನೆಯಾಗದಂತೆ ತಡೆಯಬೇಕು, ಅದಕ್ಕಾಗಿ ಕಾನೂನಿನಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡಲೇಬೇಕು.


ವೈದ್ಯಕೀಯ ಪರಿಷತ್ತಿಗೆ ಐವರು ಸದಸ್ಯರನ್ನು ರಾಜ್ಯ ಸರಕಾರವು ನಾಮನಿರ್ದೇಶನ ಮಾಡುವಾಗ ಚುನಾಯಿತ ಸದಸ್ಯರಲ್ಲಿ ಮಹಿಳೆಯರು ಹಾಗೂ ಇತರ ವರ್ಗಗಳವರು ಸ್ಥಾನವನ್ನು ಪಡೆದಿರದಿದ್ದಲ್ಲಿ ಆ ವರ್ಗಗಳವರಿಗೆ ಪ್ರಾತಿನಿಧ್ಯ ನೀಡುವುದನ್ನು ಪರಿಗಣಿಸಬೇಕು ಎಂದು ವೈದ್ಯಕೀಯ ನೋಂದಣಿ ಕಾಯಿದೆಯ ಕಂಡಿಕೆ 3(2)(ಡಿ)ಯಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೆ ಜನವರಿ 2020ರಲ್ಲಿ ನಡೆದ ಚುನಾವಣೆಗಳಿಗೆ ಮೂರು ದಿನ ಮೊದಲೇ ರಾಜ್ಯ ಸರಕಾರವು ಐವರು ಸದಸ್ಯರನ್ನು ನಾಮ ನಿರ್ದೇಶನ ಮಾಡಿತ್ತು, ಅವರೆಲ್ಲರೂ ಗಂಡಸರೇ ಆಗಿದ್ದು, ನಾಲ್ವರು ಮೇಲ್ಜಾತಿಗಳವರಾಗಿದ್ದರು. ಈ ನಾಮನಿರ್ದೇಶನಗಳನ್ನು ಮಾಡುವಾಗ ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ ಹಾಗೂ ವರ್ಗಗಳವರಿಗೆ ಪ್ರಾತಿನಿಧ್ಯ ನೀಡಬೇಕೆಂಬ ಕಾನೂನಿನ ಆಶಯವನ್ನು ಕಡೆಗಣಿಸಲಾಗಿದೆ ಎಂದು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಉಚ್ಚ ನ್ಯಾಯಾಲಯದ ಸೂಚನೆಯ ಮೇರೆಗೆ ಆ ಐದು ನಾಮಕರಣಗಳು ಅದೇ ವರ್ಷ ರದ್ದಾಗಿದ್ದವು. ಹೀಗೆ ರದ್ದಾದುದನ್ನು ಕೂಡ ಕಲ್ಬುರ್ಗಿ ಪೀಠದೆದುರು ಪ್ರಶ್ನಿಸಲಾಗಿತ್ತು, ಆದರೆ ನ್ಯಾಯಾಲಯವು ಆ ಅರ್ಜಿಯನ್ನು ವಜಾ ಮಾಡಿತ್ತು.


ಹೀಗೆ ರದ್ದಾದ ಐದು ಸ್ಥಾನಗಳ ನಾಮನಿರ್ದೇಶನವನ್ನು ಕೂಡಲೇ ಮಾಡಬೇಕು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ ಹಾಗೂ ವರ್ಗಗಳವರಿಗೆ ಪರಿಷತ್ತಿನಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ನಿರಂತರವಾಗಿ ಸರಕಾರವನ್ನು ಒತ್ತಾಯಿಸಲಾಗಿತ್ತು. ನವೆಂಬರ್ 2023ರಲ್ಲಿ ಚುನಾವಣೆಗಳು ಊರ್ಜಿತಗೊಂಡ ಬಳಿಕವೂ ಸರಕಾರವು ಈ ನಾಮನಿರ್ದೇಶನಗಳನ್ನು ಮಾಡಲು ತಡಮಾಡಿದಾಗ ಮತ್ತೆ ಇದೇ ಮಾರ್ಚ್‌ನಲ್ಲಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.


ಅಂತೂ ಜೂನ್ ಮೊದಲ ವಾರದಲ್ಲಿ ಸರಕಾರವು ನಾಲ್ವರು ವೈದ್ಯರನ್ನು ನಾಮಕರಣ ಮಾಡಿತು, ಓರ್ವ ಮಹಿಳಾ ವೈದ್ಯರಿಗಷ್ಟೇ ಅವಕಾಶ ದೊರೆತುದು ಬಿಟ್ಟರೆ ಅಲ್ಪ ಸಂಖ್ಯಾತ ಹಾಗೂ ಪರಿಶಿಷ್ಟ ಜಾತಿ ಹಾಗೂ ವರ್ಗಗಳವರನ್ನು ಮತ್ತೆ ಕಡೆಗಣಿಸಲಾಯಿತು. ಇಂದು ರಾಜಕೀಯವಾಗಿ ಉನ್ನತ ಅಧಿಕಾರವನ್ನು ಪಡೆದು ಪ್ರಬಲರಾಗಿರುವ ಸಮುದಾಯಗಳವರು ಎಲ್ಲಾ ಪ್ರಮುಖ ಅಧಿಕಾರಯುಕ್ತ ಸ್ಥಾನಗಳಲ್ಲಿ ತಮ್ಮ ಸಮುದಾಯಗಳವರನ್ನೇ ನಿಯುಕ್ತಿಗೊಳಿಸುತ್ತಿರುವುದು, ಮತ್ತು ರಾಜಕೀಯ ಅಧಿಕಾರವನ್ನು ಪಡೆಯುವ ಅವಕಾಶಗಳಿಂದ ಮೊದಲೇ ವಂಚಿತರಾಗಿರುವ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳವರನ್ನು ಪ್ರಮುಖ ನೇಮಕಾತಿಗಳಿಂದ ಹೊರಗಿಡುತ್ತಿರುವುದು ಸಂವಿಧಾನದ ಹಾಗೂ ಕಾನೂನುಗಳ ಆಶಯಗಳಿಗೆ ಮಾಡುತ್ತಿರುವ ಅಪಚಾರವಾಗಿದೆ, ಅನ್ಯಾಯವಾಗಿದೆ.


ಆದ್ದರಿಂದ ಕಾಯಿದೆಯ ಕಂಡಿಕೆ 3(2)(ಡಿ)ಯಲ್ಲಿ ಮಹಿಳೆಯರು ಮತ್ತು ಇತರ ವರ್ಗಗಳವರು ಎಂದಿರುವಲ್ಲಿ ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳವರ ಪ್ರಾತಿನಿಧ್ಯ ಎಂದು ಸ್ಪಷ್ಟವಾದ ತಿದ್ದುಪಡಿಯನ್ನು ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ. ಹಾಗೆಯೇ, ಇತರ ಎಲ್ಲಾ ನಿಗಮಗಳು, ಮಂಡಳಿಗಳು, ಅಕಾಡೆಮಿಗಳು, ವಿಶ್ವವಿದ್ಯಾನಿಲಯದ ಹುದ್ದೆಗಳು ಮುಂತಾದವುಗಳ ನೇಮಕಾತಿಗಳಲ್ಲೂ ಮಹಿಳೆಯರು, ಅಲ್ಪ ಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗಗಳವರಿಗೆ ಪ್ರಾತಿನಿಧ್ಯ ನೀಡಬೇಕೆಂದು ಸ್ಪಷ್ಟವಾದ ಕಾನೂನುಗಳನ್ನು ಮಾಡಬೇಕು ಮತ್ತು ಅವನ್ನು ತಪ್ಪದೇ ಪಾಲಿಸಬೇಕು ಎಂದು ಆಗ್ರಹಿಸುತ್ತೇವೆ.


ವೈದ್ಯಕೀಯ ಪರಿಷತ್ತು ವೃತ್ತಿ ಸಂಹಿತೆ ಉಲ್ಲಂಘನೆ ಹಾಗೂ ಚಿಕಿತ್ಸೆಗಳ ಲೋಪಗಳ ಬಗ್ಗೆ ವಿಚಾರಣೆ ನಡೆಸುವ ಸಂಸ್ಥೆಯಾಗಿರುವುದರಿಂದ ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದಕ್ಕಾಗಿ ಜನಸಾಮಾನ್ಯರ ಪ್ರತಿನಿಧಿಯಾಗಿ ನಿವೃತ್ತ ನ್ಯಾಯಾಧೀಶರು, ವಿಶ್ರಾಂತ ಕುಲಪತಿಗಳು ಅಥವಾ ತತ್ಸಮಾನರಾದವರನ್ನು, ಅವರಲ್ಲೂ ಮಹಿಳೆಯರನ್ನು, ಈ ವಿಚಾರಣೆಗಳಲ್ಲಿ ವೀಕ್ಷಕರಾಗುವಂತಹ ಅವಕಾಶವನ್ನು ಕೂಡ ಕಾಯಿದೆಯಲ್ಲಿ ಕಲ್ಪಿಸಬೇಕೆಂದು ನಾವು ಆಗ್ರಹಿಸುತ್ತೇವೆ.


ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು

ಡಾ. ಎಚ್ ಎಸ್ ಅನುಪಮಾ, ಕವಲಕ್ಕಿ

ಡಾ. ಪಿ.ವಿ. ಭಂಡಾರಿ, ಉಡುಪಿ

ಡಾ. ಸಂಜೀವ ಕುಲಕರ್ಣಿ, ಧಾರವಾಡ

ಡಾ. ಟಿ. ಶ್ರೀನಿವಾಸ ರೆಡ್ಢಿ, ಕಲ್ಬುರ್ಗಿ

ಡಾ. ಅರವಿಂದ ಪಟೇಲ್, ಬಳ್ಳಾರಿ

ಡಾ. ಜಿ. ರಾಮಕೃಷ್ಣ, ಬೆಂಗಳೂರು

ಮೋಹನ ಕಾತರಕಿ, ಹಿರಿಯ ನ್ಯಾಯವಾದಿಗಳು, ದೆಹಲಿ

ಡಾ. ಮರುಳಸಿದ್ದಪ್ಪ, ಬೆಂಗಳೂರು

ಡಾ. ಎಸ್ ಜಿ ಸಿದ್ದರಾಮಯ್ಯ, ಬೆಂಗಳೂರು

ಪ್ರೊ. ಮಾವಳ್ಳಿ ಶಂಕರ್, ಬೆಂಗಳೂರು

ಡಾ. ಸಿದ್ದನಗೌಡ ಪಾಟೀಲ್, ಬೆಂಗಳೂರು

ಡಾ. ನಿರಂಜನಾರಾಧ್ಯ ವಿಪಿ, ಬೆಂಗಳೂರು

ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಬೆಂಗಳೂರು

ಡಾ. ವಸುಂಧರಾ ಭೂಪತಿ, ಬೆಂಗಳೂರು

ಡಾ. ಎನ್. ಗಾಯತ್ರಿ, ಬೆಂಗಳೂರು

ಡಾ. ಇಂದಿರಾ ಹೆಗ್ಗಡೆ, ಮೈಸೂರು

ಡಾ. ಬಿ. ಆರ್. ಮಂಜುನಾಥ, ಬೆಂಗಳೂರು

ಡಿ. ಉಮಾಪತಿ, ದೆಹಲಿ

ಬಸವಪ್ರಭು ಹೊಸಕೇರಿ, ಧಾರವಾಡ

ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳ

ಬಿ ಸುರೇಶ, ಬೆಂಗಳೂರು

ವಿ. ಎಲ್. ನರಸಿಂಹಮೂರ್ತಿ, ಬೆಂಗಳೂರು

ಶಂಕರ ಹಲಗತ್ತಿ , ಧಾರವಾಡ

ಕೇಸರಿ ಹರವು, ಬೆಂಗಳೂರು

ಬಸವರಾಜ ಸೂಳಿಭಾವಿ, ಗದಗ

ನಾಗೇಂದ್ರ ಬಡಗಲಪುರ, ಮೈಸೂರು

ಡಾ. ಸದಾಶಿವ ಮರ್ಜಿ, ಧಾರವಾಡ

ನಾ ದಿವಾಕರ, ಮೈಸೂರು

ಶರಣಪ್ಪ ಬಾಚಲಾಪುರ, ಕೊಪ್ಪಳ

ಡಿಎಂ ಬಡಿಗೇರ, ಕೊಪ್ಪಳ

ಮೆಹಬೂಬ ಮಠದ, ಕೊಪ್ಪಳ

ವಿ ಎನ್ ಲಕ್ಷ್ಮೀನಾರಾಯಣ, ಮೈಸೂರು

ಶಂಕರಪುರ ಸುರೇಶ್, ನಂಜನಗೂಡು

ಕೆ. ಫಣಿರಾಜ, ಉಡುಪಿ

ಜಿ. ವಿ. ಆನಂದಮೂರ್ತಿ, ತುಮಕೂರು

ಸಂಜ್ಯೋತಿ ವಿ ಕೆ, ಬೆಂಗಳೂರು

ಮಂಸೋರೆ, ಬೆಂಗಳೂರು

ಚಂದ್ರಕಾಂತ ವಡ್ಡು, ಬೆಂಗಳೂರು

ಯೋಗಾನಂದ ಬಿಎನ್, ಮಂಡ್ಯ

ನಗರಗೆರೆ ರಮೇಶ, ಬೆಂಗಳೂರು

ಡಾ. ನರಸಿಂಹಪ್ಪ ಜಿಎಂ, ಬೆಂಗಳೂರು

ಈರಪ್ಪ ಎಂ ಕಂಬಳಿ, ಕೊಪ್ಪಳ

ಗಿರಿಧರ ಕಾರ್ಕಳ, ಮೈಸೂರು

ಶ್ರೀಧರ ನಾಯಕ, ಶಿರಸಿ

ಮುತ್ತು ಬಿಳಿಯಲಿ, ಗದಗ

ಮಲ್ಲಯ್ಯ ಕಮತಗಿ, ಶೋರಾಪುರ

ಅನಿಲ ಹೊಸಮನಿ, ವಿಜಯಪುರ

ಯಡೂರ ಮಹಾಬಲ, ಬೆಂಗಳೂರು

ವಿಶಾಲಮತಿ, ಬೆಂಗಳೂರು

ವಿಜಯಕಾಂತ ಪಾಟೀಲ, ಹಾನಗಲ್ಲ

ಅಶೋಕ ಬರಗುಂಡಿ, ಗದಗ

ಬಿ. ಶ್ರೀನಿವಾಸ ಹಾವೇರಿ

ತೇಜಸ್ವಿ ಬಿ. ನಾಯಕ, ಗೋಕರ್ಣ

ಡಾ. ಪ್ರದೀಪ್ ಮಾಲ್ಗುಡಿ, ಘಟಪ್ರಭ

ಗಂಗಾಧರ ಟಿಕೆ, ಬಳ್ಳಾರಿ

ವೆಂಕಟೇಶಯ್ಯ ಅಪ್ಪಗೆರೆ, ಬಳ್ಳಾರಿ

ಶಾಮರಾವ್ ಮಾದರ, ಹಿಪ್ಪರಗಿ

ಶಾಮಣ್ಣ ನಾರನಾಳ, ತಾವರಗೇರಿ

ಮೈಲಾರಪ್ಪ ಬೂದಿಹಾಳ, ಗಂಗಾವತಿ

ಡಾ. ವೈ. ಬಿ ಹಿಮ್ಮಡಿ, ಬೆಳಗಾವಿ

ಲಕ್ಷ್ಮಣ ಪಿರಗಾರ, ಕೊಪ್ಪಳ

ಪ್ರಿಯಾಂಕ ಮಾವಿನಕರ, ಕಲ್ಬುರ್ಗಿ

ಶರಣು ಶೆಟ್ಟರ, ಕಲ್ಲೂರ

ನಿಶಾ ಗೂಳೂರ, ಬೆಂಗಳೂರು

ನಾಗರಾಜ ಹರಪನಹಳ್ಳಿ, ಕುಮಟಾ

ಶಂಕರಗೌಡ ಸಾತ್ಮಾರ, ಹುಬ್ಬಳ್ಳಿ

ದೇವರಾಜ ಹುಣಸಿಕಟ್ಟಿ, ರಾಣೇಬೆನ್ನೂರ

ಕೆ. ಸಿ ನಟೇಕಲ್, ಗದಗ

ಎಂ. ಕೆ. ಸಾಹೇಬ, ಕೊಪ್ಪಳ

ಮಂಜುನಾಥ ಜೆ, ತುಮಕೂರ

ರುದ್ರಪ್ಪ ಭಂಡಾರಿ, ಕುಕನೂರ

ಕೆ. ಮಹಾಂತೇಶ, ದಾವಣಗೆರೆ

ನೂರಜಹಾನ್, ಹೊಸಪೇಟೆ

ಈರಪ್ಪ ಸುತಾರ, ಜಮಖಂಡಿ

ಬಸವರಾಜ ಜಲವಾದಿ, ವಿಜಯಪುರ.

ಅಡಿವೆಪ್ಪ ಹುಗ್ಗಿನವರ, ಮುಧೋಳ

ನವೀನ ತಳಗೇರಿ, ಮುಧೋಳ

ಕಾರ್ತಿಕ್ ದಬಾನಿ, ಬನಹಟ್ಟಿ

ಆಕಾಶ್ ಕಾಂಬಳೆ, ತೇರದಾಳ

ಆಕಾಶ ಡಪಳಪುರ, ಗದ್ಯಾಳ

ಬಿ. ಪಿ ಮಹೇಂದ್ರಕುಮಾರ, ದಾಂಡೇಲಿ

ನೂರ್‌ಅಹ್ಮದ ನಾಗನೂರ, ಬ್ಯಾಡಗಿ

ವರಹಳ್ಳಿ ಆನಂದ, ಮೈಸೂರು

ಎಸ್.ಎನ್ ಮಮತಾರಾಣಿ, ಅರಸೀಕೆರೆ

ಹೇಮಚಂದ್ರ ಎನ್, ಬೆಂಗಳೂರು

ಎಸ್ ಎ ಗಫಾರ, ಕೊಪ್ಪಳ

ಬಸವರಾಜ ಬ್ಯಾಗವಾಟ, ದೇವದುರ್ಗ

ಬಸವರಾಜ ಪೂಜಾರ, ಹಾವೇರಿ

ಸೈಯ್ಯದ್ ಅಹಮ್ಮದ ಖಾನ್, ತುಮಕೂರು

ಶಿವಕುಮಾರ ಬಂಡೋಳಿˌ ಹುಣಸಗಿ

ಡಾ. ಬಸವರಾಜ ಟಿ, ಹೊಸಪೇಟೆ

ಕೆ. ನಾರಾಯಣಸ್ವಾಮಿ, ದಾವಣಗೆರೆ

ಎಸ್. ಜಿ. ಚಿಕ್ಕನರಗುಂದ, ರಾಮದುರ್ಗ

ಸಿ ಎಚ್ ಭಾಗ್ಯ, ಬೆಂಗಳೂರು

ಚಂದ್ರಪ್ರಭ ಬಾಗಲಕೋಟ, ಬನಹಟ್ಟಿ

ಸವಿರಾಜ್ ಆನಂದೂರ, ಬೆಂಗಳೂರು

ಸಿ. ಗುಂಡಣ್ಣ, ಬೆಂಗಳೂರು

ಅಶೋಕ್ ಮರಿದಾಸ್, ಬೆಂಗಳೂರು

ಉಮೇಶ್ ಜಿ ಗಂಗವಾಡಿ, ರಾಮನಗರ

ಸುರೇಶ ಅರಳಕುಪ್ಪೆ, ಬೆಂಗಳೂರು

ಬಿ ಎನ್ ಜ್ವಾಲನಪ್ಪ, ಮೈಸೂರು

ಪಾರ್ವತಿ ಜಿಎಸ್, ದಾವಣಗೆರೆ

ಜಯರಾಜ್ ವಿ ಧಾಬಶೆಟ್ಟಿ, ಬೀದರ್

ಕಿಶೋರ್ ಅತ್ತಾವರ್, ಮಂಗಳೂರು

ಹನುಮೇಶ ಕಲ್ಮಂಗಿ, ಕೊಪ್ಪಳ

ಕೆ ರಾಮರಡ್ಡಿ, ಧಾರವಾಡ

ರಶ್ಮಿ ಹೆಗಡೆ, ಬೆಂಗಳೂರು

ಡಾ. ಎಚ್ ಬಿ ಪೂಜಾರ, ಗದಗ

ಎನ್ ಕೆ ಶೇಷಾದ್ರಿ, ಸಿರುಗುಪ್ಪ

ಚೆನ್ನು ಕಟ್ಟೀಮನಿ, ವಿಜಯಪುರ

ಸಿಎಮ್ ಚೆನ್ನಬಸಪ್ಪ, ಹುಬ್ಬಳ್ಳಿ

ಕಲ್ಲಯ್ಯ, ಚಿಕ್ಕಮಗಳೂರು

ದೇವಗಳ್ಳಿ ಸೋಮಶೇಖರ, ಮೈಸೂರು

ಸರಸ್ವತಿ, ದಾವಣಗೆರೆ

ಡಾ. ಚೆನ್ನಬಸಪ್ಪ ಐನಳ್ಳಿ, ಧಾರವಾಡ

ಶರೀಫ್ ಬಿಳೇಯಲಿ, ಗದಗ

Ads on article

Advertise in articles 1

advertising articles 2

Advertise under the article