-->
ಕ್ರಿಮಿನಲ್ ಪ್ರಕರಣದಲ್ಲಿ ಹಿಂದಿನ ವಕೀಲರು ಸರಿಯಾಗಿ ಪಾಟಿ ಸವಾಲು ಮಾಡದಿದ್ದರೆ... ಸಾಕ್ಷಿಯನ್ನು ಮತ್ತೆ ಕರೆಸಬಹುದೇ?

ಕ್ರಿಮಿನಲ್ ಪ್ರಕರಣದಲ್ಲಿ ಹಿಂದಿನ ವಕೀಲರು ಸರಿಯಾಗಿ ಪಾಟಿ ಸವಾಲು ಮಾಡದಿದ್ದರೆ... ಸಾಕ್ಷಿಯನ್ನು ಮತ್ತೆ ಕರೆಸಬಹುದೇ?

ಕ್ರಿಮಿನಲ್ ಪ್ರಕರಣದಲ್ಲಿ ಹಿಂದಿನ ವಕೀಲರು ಸರಿಯಾಗಿ ಪಾಟಿ ಸವಾಲು ಮಾಡದಿದ್ದರೆ... ಸಾಕ್ಷಿಯನ್ನು ಮತ್ತೆ ಕರೆಸಬಹುದೇ?





ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿ ಪರ ಹಾಜರಾಗಿದ್ದ ವಕೀಲರು ಸರಿಯಾಗಿ ಪಾಟಿ ಸವಾಲು ಮಾಡದಿದ್ದರೆ ಹೊಸ ವಕೀಲರು ಆರೋಪಿ ಪರ ವಾದಿಸುವಾಗ ಸಾಕ್ಷಿಯನ್ನು ಮತ್ತೆ ಕರೆಸಬಹುದೇ?


ಈ ಪ್ರಶ್ನೆಯನ್ನು ಮೇಘಾಲಯ ಹೈಕೋರ್ಟ್ ಇತ್ಯರ್ಥಪಡಿಸಿದ್ದು, ಸಾಕ್ಷಿಯನ್ನು ಮರು ಪರೀಕ್ಷೆಗೆ ಅಥವಾ ಮರು ಪಾಟೀ ಸವಾಲಿಗೆ ಒಳಪಡಿಸಬಹುದು ಎಂದು ಅದು ಹೇಳಿದೆ.


ಪ್ರಕರಣದ ಎರಡನೇ ಸಾಕ್ಷಿದಾರರನ್ನು (PW-2) ಮತ್ತೊಮ್ಮೆ ಕಟಕಟೆಗೆ ಕರೆಸಲು ಮತ್ತು ಅವರನ್ನು ಪಾಟೀ ಸವಾಲಿಗೆ ಒಳಪಡಿಸಲು ಕೋರಿ ಆರೋಪಿಯ ಕೋರಿಕೆಯ ಮೇರೆಗೆ ವಕೀಲರು ಅರ್ಜಿ ಸಲ್ಲಿಸಿದ್ದರು.


ಈ ಹಿಂದೆ ಆರೋಪಿ ಪರ ವಾದಿಸಿದ್ದ ವಕೀಲರು ಎರಡನೇ ಸಾಕ್ಷಿದಾರರನ್ನು ಸರಿಯಾಗಿ ಪಾಟಿ ಸವಾಲು (ಅಡ್ಡ ವಿಚಾರಣೆ) ಮಾಡದಿರುವುದರಿಂದ ಹೊಸದಾಗಿ ನೇಮಕಗೊಂಡಿರುವ ವಕೀಲರು ಈ ಅರ್ಜಿಯನ್ನು ಸಲ್ಲಿಸಿದ್ದರು.


ಈ ಅರ್ಜಿಯನ್ನು ಮಾನ್ಯ ಮಾಡಿದ ವಿಚಾರಣಾ ನ್ಯಾಯಾಲಯ, ಚಾಸಾ2 ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಾಸಿಕ್ಯೂಷನ್ ಹೈಕೋರ್ಟ್ ಮೆಟ್ಟಿಲೇರಿತ್ತು.


ಸಾಕ್ಷಿಯನ್ನು ಸಮರ್ಪಕವಾಗಿ ಆರೋಪಿ ಪರ ವಕೀಲರು ಅಡ್ಡ ವಿಚಾರಣೆಗೆ ಒಳಪಡಿಸಿಲ್ಲ. ಅಥವಾ ಹಿಂದಿನ ವಕೀಲರು ಸಮರ್ಥರಿರಲಿಲ್ಲ ಎಂಬ ಕಾರಣಕ್ಕೆ ಸಾಕ್ಷಿಯನ್ನು ಮತ್ತೊಮ್ಮೆ ಅಡ್ಡ ವಿಚಾರಣೆಗೆ ಒಳಪಡಿಸಲು ಸಮನ್ಸ್ ನೀಡಿರುವುದು ಸರಿಯಲ್ಲ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದ್ದರು.


ಆದರೆ, ಅವರ ವಾದವನ್ನು ತಳ್ಳಿ ಹಾಕಿದ ಹೈಕೋರ್ಟ್ ನ್ಯಾಯಪೀಠ, ಈ ಹಿಂದೆ ಅಡ್ಡ ವಿಚಾರಣೆ ಎದುರಿಸಿರುವ ಸಾಕ್ಷಿಯನ್ನು ಮತ್ತೊಮ್ಮೆ ಪಾಟೀ ಸವಾಲಿಗೆ ಒಳಪಡಿಸಲು ಅವಕಾಶ ನೀಡಿರುವ ವಿಚಾರಣಾ ನ್ಯಾಯಾಲಯದ ಆದೇಶ ಸರಿಯಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.


Ads on article

Advertise in articles 1

advertising articles 2

Advertise under the article