Mangaluru: ತಲೆಮರೆಸಿಕೊಂಡಿದ್ದ ಬಸ್ ಮಾಲಕಿ ಸುಕನ್ಯಾ ಶೆಟ್ಟಿ ನ್ಯಾಯಾಲಯಕ್ಕೆ ಶರಣು
Mangaluru: ತಲೆಮರೆಸಿಕೊಂಡಿದ್ದ ಬಸ್ ಮಾಲಕಿ ಸುಕನ್ಯಾ ಶೆಟ್ಟಿ ನ್ಯಾಯಾಲಯಕ್ಕೆ ಶರಣು
ಕಳೆದ ಕೆಲವು ತಿಂಗಳಿನಿಂದ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಮಂಗಳೂರಿನ ಖಾಸಗಿ ಬಸ್ ಮಾಲಕಿ ಸುಕನ್ಯಾ ಶೆಟ್ಟಿ ಐದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಅವರ ವಿರುದ್ಧ ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನುರಹಿತ ವಾರೆಂಟ್ ಜಾರಿಯಾಗಿತ್ತು.
ಮಂಗಳೂರಿನ ಕೊಟ್ಟಾರ ಚೌಕಿಯ ಪೆಟ್ರೋಲ್ ಪಂಪ್‌ನಿಂದ ತನ್ನ ಬಸ್‌ಗಳಿಗೆ ಪೆಟ್ರೋಲ್ ತುಂಬಿಸಿಕೊಂಡಿದ್ದ ಅವರು, ಆ ಬಳಿಕ ಬಿಲ್ ಪಾವತಿಸಿರಲಿಲ್ಲ. ಆ ನಂತರ ತಾನು ಬಾಕಿ ಇರುವ ಲಕ್ಷಾಂತರ ರೂ. ಮೌಲ್ಯದ ಡೀಸೆಲ್ ಬಿಲ್‌ಗೆ ಚೆಕ್ ನೀಡಿದ್ದರು. ಆದರೆ, ಅದು ಅಮಾನ್ಯಗೊಂಡಿತ್ತು.
ಮಂಗಳೂರಿನಲ್ಲಿ ಶೇಡಿಗುಡ್ಡೆ (ಪಿವಿಎಸ್)ನಲ್ಲಿ ಟೂರ್ ಆಂಡ್ ಟ್ರಾವೆಲ್ಸ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಲೋಕೇಶ್ ಶೆಟ್ಟಿ ಅವರ ಪತ್ನಿ ಸುಕನ್ಯಾ ಎಲ್ ಶೆಟ್ಟಿ ವಿರುದ್ಧ ಮಂಗಳೂರಿನ ಐದನೇ ಜೆಎಂಎಫ್ ಸಿ ನ್ಯಾಯಾಲಯ ಚೆಕ್ ಅಮಾನ್ಯ ಪ್ರಕರಣ ದಾಖಲಿಸಲಾಗಿತ್ತು.
ಸುಕನ್ಯಾ ಶೆಟ್ಟಿ ನಗರದ ಶೇಡಿಗುಡ್ಡೆ (ಪಿವಿಎಸ್ ಜಂಕ್ಷನ್) ಬಳಿ ಓರೆಂಜ್ ಟೂರ್ಸ್ ಆಂಡ್ ಟ್ರಾವೆಲ್ಸ್ ಮತ್ತು ಲಕ್ಷ್ಮಿ ಟೂರ್ಸ್ ಆಂಡ್ ಟ್ರಾವೆಲ್ಸ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಆರೋಪಿ ಕೆನರಾ ಬಸ್ ಮತ್ತು ಇತರ ವಾಹನಗಳಿಗೆ ಡೀಸೆಲ್ ಮತ್ತು ಪೆಟ್ರೋಲ್ ನ್ನು ತುಂಬಿಸಿ ಬಿಲ್ ನೀಡದೆ ಬಾಕಿ ಇರಿಸಿದ್ದರು.
ಸುಕನ್ಯಾ ಅವರು ನೀಡಿದ್ದ ಎರಡು ಚೆಕ್ ಬೌನ್ಸ್ ಆಗಿದ್ದು, ಪೆಟ್ರೋಲ್ ಬಂಕ್ ಮಾಲೀಕರು ಬಸ್ ಮಾಲಕಿ ಸುಕನ್ಯಾ ಶೆಟ್ಟಿ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಆರೋಪಿ ಸುಕನ್ಯಾ ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದರು.
ಬಳಿಕ, ಮೂರು ತಿಂಗಳಿನ ಒಳಗೆ ಚೆಕ್ ಮೌಲ್ಯದ ಸಂಪೂರ್ಣ ಮೊತ್ತವನ್ನು ಪಾವತಿಸುವುದಾಗಿ ನ್ಯಾಯಾಲಯಕ್ಕೆ ಒಪ್ಪಿಗೆ ಪತ್ರವನ್ನೂ ಬರೆದುಕೊಟ್ಟಿದ್ದರು. ಆದರೆ, ಆ ಬಳಿಕ ನ್ಯಾಯಾಲಯಕ್ಕೆ ನೀಡಿದ್ದ ಒಪ್ಪಿಗೆ ಪತ್ರವನ್ನೂ ಉಲ್ಲಂಘಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಮಾನ್ಯ ನ್ಯಾಯಾಲಯ ಆರೋಪಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿತ್ತು.
ನ್ಯಾಯಾಲಯದಿಂದ ವಾರೆಂಟ್ ಪಡೆದುಕೊಂಡಿರುವ ಕದ್ರಿ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ವಿಫಲರಾಗಿದ್ದರು.
ನಾಲ್ಕು ವರ್ಷದಿಂದ ಡೀಸಲ್ ಬಿಲ್ ಬಾಕಿ: ಬಸ್ ಮಾಲಕಿ ಸುಕನ್ಯಾ ಶೆಟ್ಟಿ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ