-->
ಕೋರ್ಟ್ ಕಲಾಪದ ವೀಡಿಯೋ ಪ್ರಸಾರ ಮಾಡಬಾರದು; ಮಾಡಿದ್ದರೆ ತಕ್ಷಣವೇ ತೆಗೆದುಹಾಕಿ- ಸೋಶಿಯಲ್ ಮೀಡಿಯಾ, ಮಾಧ್ಯಮ ಸಂಸ್ಥೆಗಳಿಗೆ ಹೈಕೋರ್ಟ್ ನಿರ್ದೇಶನ

ಕರ್ನಾಟಕ ಹೈಕೋರ್ಟ್‌ನ ಕಲಾಪದ ನೇರ ಪ್ರಸಾರದ ವೀಡಿಯೋಗಳನ್ನು ಪ್ರಸಾರ ಮಾಡಿರುವ ಸಾಮಾಜಿಕ ಜಾಲತಾಣ ಮತ್ತು ಸುದ್ದಿ ಪ್ರಸಾರದ ಸಂಸ್ಥೆಗಳಿಗೆ ಕರ್ನಾಟಕ ಹೈಕೋರ್ಟ್‌ ಬಿಸಿ ಮುಟ್ಟಿಸಿದೆ.

ಹೈಕೋರ್ಟ್ ಲೈವ್ ಸ್ಟ್ರೀಮಿಂಗ್ ವೀಡಿಯೋಗಳನ್ನು ಬಳಸಬಾರದು ಮತ್ತು ಈಗಾಗಲೇ ಬಳಕೆ ಮಾಡಿರುವ ವೀಡಿಯೋಗಳನ್ನು ತಕ್ಷಣದಿಂದ ತೆಗೆಯುವಂತೆ ಹೈಕೋರ್ಟ್ ಎಲ್ಲ ಮಾಧ್ಯಮಗಳಿಗೆ ನಿರ್ದೇಶನ ನೀಡಿದೆ.

ಹಣ ಗಳಿಸುವ ಉದ್ದೇಶದಿಂದ ಹೈಕೋರ್ಟ್‌ ಲೈವ್ ಸ್ಟ್ರೀಮ್ ವೀಡಿಯೋಗಳನ್ನು ಮನ ಬಂದಂತೆ ಎಡಿಟ್ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿ ಬೆಂಗಳೂರು ವಕೀಲರ ಸಂಘ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ಯೂಟ್ಯೂಬ್, ಫೇಸ್‌ಬುಕ್ ಮತ್ತು ಎಕ್ಸ್‌ ಕಾರ್ಪ್‌(ಟ್ವಿಟ್ಟರ್)ಗಳಿಗೂ ಕರ್ನಾಟಕ ಹೈಕೋರ್ಟ್ ತನ್ನ ಆದೇಶದ ಮೂಲಕ ಲೈವ್ ಸ್ಟ್ರೀಮಿಂಗ್ ವೀಡಿಯೋಗಳನ್ನು ತೆಗೆದುಹಾಕುವಂತೆ ನಿರ್ದೇಶನ ನೀಡಿದೆ.

ಇದರ ಜೊತೆಗೆ, ಯಾವುದೇ ಖಾಸಗಿ ವೇದಿಕೆಗಳು, ಸಾಮಾಜಿಕ ಜಾಲತಾಣದ ಖಾತೆಗಳು ಮತ್ತು ಟ್ವಿಟ್ಟರ್ ಹ್ಯಾಂಡಲ್‌ಗಳಲ್ಲಿ ಹೈಕೋರ್ಟ್‌ ಲೈವ್ ಕಂಟೆಂಟ್‌ನ ತುಣುಕುಗಳನ್ನು ಬಳಸಬಾರದು ಎಂಬ ನಿರ್ಬಂಧವನ್ನು ಹೇಳಿದೆ.

Ads on article

Advertise in articles 1

advertising articles 2

Advertise under the article